Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ: ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್!

Rohit sharma

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಜಯ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 91 ರನ್‌ಗಳ ಗುರಿಯನ್ನು ಭಾರತ ಇನ್ನೂ ನಾಲ್ಕು ಎಸೆತಗಳು ಮತ್ತು ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ಸೋಲಿಸಿತು. ರೋಹಿತ್ ಶರ್ಮಾ (20 ಎಸೆತಗಳಲ್ಲಿ 46*) ಮತ್ತು ದಿನೇಶ್ ಕಾರ್ತಿಕ್ (2 ಎಸೆತಗಳಲ್ಲಿ 10*) ಅವರ ಸೂಪರ್ ಫಿನಿಶಿಂಗ್ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ.

ಆಸ್ಟ್ರೇಲಿಯಾ ನೀಡಿದ್ದ 91ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಭರ್ಜರಿ ಇನ್ನಿಂಗ್ಸ್ ಆಡಿದ್ರು. ಪಂದ್ಯದ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡವನ್ನ ಗೆಲುವಿನ ದಡ ತಲುಪಿಸಿದ್ರು. 20 ಎಸೆತಗಳಲ್ಲಿ 46 ರನ್ ಸಿಡಿಸಿದ ಹಿಟ್‌ಮ್ಯಾನ್‌ 4 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ ಸಿಡಿಸಿದ್ರು. ಈ ನಾಲ್ಕು ಸಿಕ್ಸರ್‌ಗಳಲ್ಲಿ ರೋಹಿತ್ ಶರ್ಮಾ ಸಿಗ್ನೇಚರ್ ಶಾಟ್ ಕೂಡ ಒಳಗೊಂಡಿತ್ತು.

ನಾಗ್ಪುರದ ವಿಸಿಎ ಗ್ರೌಂಡ್‌ನಲ್ಲಿ ನಾಲ್ಕು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ರೋಹಿತ್ ಶರ್ಮಾ ಸಿಕ್ಸರ್‌ ಸಿಡಿಸುವುದರ ಜೊತೆಗೆ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ಮಾರ್ಟಿನ್ ಗಪ್ಟಿಲ್ ತಲಾ 172 ಸಿಕ್ಸರ್ ದಾಖಲಿಸಿದ್ರು. ಈ ಪಂದ್ಯದಲ್ಲಿ ನಾಲ್ಕು ಬಾರಿ ಚೆಂಡನ್ನ ಗೆರೆ ದಾಟಿಸಿದ ರೋಹಿತ್ ತನ್ನ 138 ಪಂದ್ಯದಲ್ಲಿ 176 ಸಿಕ್ಸರ್ ದಾಖಲಿಸಿದ್ದಾರೆ. ಇನ್ನು ಕಿವೀಸ್ ಓಪನರ್ ಮಾರ್ಟಿನ್ ಗಪ್ಟಿಲ್ 121 ಪಂದ್ಯಗಳಲ್ಲಿ 172 ಸಿಕ್ಸರ್ ಸಿಡಿಸಿದ್ದಾರೆ. ನಂತರದಲ್ಲಿ ಕ್ರಿಸ್‌ಗೇಲ್ 124, ಇಯಾನ್ ಮಾರ್ಗನ್ 120, ಆ್ಯರೋನ್ ಫಿಂಚ್ 119 ಸಿಕ್ಸರ್ ದಾಖಲಿಸಿದ್ದಾರೆ.

ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಪಂದ್ಯ ಜಯಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದ್ದು, ಸರಣಿಯನ್ನ ಜೀವಂತವಾಗಿರಿಸಿದೆ. ಅಂತಿಮ ಪಂದ್ಯವು ಭಾನುವಾರ ಹೈದ್ರಾಬಾದ್‌ನಲ್ಲಿ ನಡೆಯಲಿದೆ.

Story first published: Saturday, September 24, 2022, 9:49 [IST]
Other articles published on Sep 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+