
ಟಿ20 ವಿಶ್ವಕಪ್‌ಗೂ ಮುನ್ನ ಪೂರ್ವ ತಯಾರಿ ಚುಟುಕು ಸರಣಿ
ಈ ಸರಣಿಯನ್ನು ಎರಡೂ ತಂಡಗಳು ಟಿ20 ವಿಶ್ವಕಪ್ ಸರಣಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಮಾರ್ಗವಾಗಿ ಪರಿಗಣಿಸಲಾಗಿದೆ. ಆ ಮೂಲಕ ಎರಡೂ ತಂಡಗಳು ತಮ್ಮ ಸಂಪೂರ್ಣ ಶಕ್ತಿ ಪ್ರದರ್ಶಿಸಿ ಈ ಪಂದ್ಯವನ್ನು ಗೆಲ್ಲಬೇಕು. ಇದರಿಂದಾಗಿ ಪ್ಲೇಯಿಂಗ್ 11ನಲ್ಲಿ ಆಟ, ತಂತ್ರಗಾರಿಕೆ, ಬ್ಯಾಟಿಂಗ್ ಹೇಗಿರಲಿದೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಮೆನ್ ಇನ್ ಬ್ಲೂಗೆ ಎಚ್ಚರಿಕೆ ನೀಡಿದ ಪ್ಯಾಟ್ ಕಮಿನ್ಸ್
ಆಸ್ಟ್ರೇಲಿಯದ ಆಟಗಾರ ಪ್ಯಾಟ್ ಕಮಿನ್ಸ್ ರೋಹಿತ್ ಶರ್ಮಾ ಪಡೆಗೆ ಎಚ್ಚರಿಕೆ ನೀಡಿದ್ದಾರೆ. ನಮ್ಮನ್ನು ನೀವು ಹಗುರವಾಗಿ ಪರಿಗಣಿಸಬೇಡಿ, ನಾವಿಲ್ಲಿ ಗೆಲ್ಲುವುದಕ್ಕೆ ಬಂದಿದ್ದೇವೆ, ಕಠಿಣ ಪೈಪೋಟಿ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಜೊತೆಗೆ ಪ್ಯಾಟ್ ಕಮಿನ್ಸ್ ತಾನು ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಮೆನ್ ಇನ್ ಬ್ಲ್ಯೂಗೆ ಸವಾಲೆಸೆಯಲು ಸಿದ್ಧರಾಗಿದ್ದೇವೆ ಎಂದು ರೋಹಿತ್ ಪಡೆಗೆ ಸಂದೇಶ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡವು ಪ್ರಮುಖ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್‌ಗೆ ವಿಶ್ರಾಂತಿ ನೀಡಿದ್ರೆ, ಆಲ್‌ರೌಂಡರ್‌ಗಳಾದ ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಸೋಲಿಗೆ ಹೆದರಬೇಡಿ: ಟೀಂ ಇಂಡಿಯಾಗೆ ಸಂದೇಶ ನೀಡಿದ ರೋಹಿತ್ ಶರ್ಮಾ

ಆ ಒಬ್ಬ ಆಟಗಾರನಿಂದ ನಮಗೆ ಬೆದರಿಕೆ ಇದೆ
ಟೀಂ ಇಂಡಿಯಾದ ಆ ಒಬ್ಬ ಆಟಗಾರನಿಂದ ನಮ್ಮ ತಂಡಕ್ಕೆ ಬೆದರಿಕೆ ಇದೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ''ಕೊರೊನಾ ಸಮಸ್ಯೆಯ ನಂತರ ನಾವು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇವೆ, ಲಕ್ಷಾಂತರ ಜನರ ನಡುವೆ ಆಡುವ ಅದ್ಭುತ ಭಾವನೆಯನ್ನು ಭಾರತೀಯ ಜನರು ನಮಗೆ ನೀಡುತ್ತಾರೆ. ತುಂಬಾ ಉತ್ಸಾಹ ಇರುತ್ತದೆ'' ಎಂದಿದ್ದಾರೆ.
ಇದೇ ವೇಳೆಯಲ್ಲಿ ''ಈ 3 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಬೆದರಿಕೆಯಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಏಷ್ಯಾಕಪ್‌ನಲ್ಲಿ ಉತ್ತಮವಾಗಿ ಆಡುವುದನ್ನು ನಾನು ನೋಡಿದೆ. ವಿಶೇಷವಾಗಿ ಅಫ್ಘಾನಿಸ್ತಾನ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅವರನ್ನು ನಿಭಾಯಿಸಲು ಸಾಧ್ಯವಾದರೆ ಭಾರತವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂದು ನಾನು ಭಾವಿಸುತ್ತೇನೆ'' ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಇದನ್ನು ಬಿಟ್ಟರೆ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಆಟಕ್ಕೆ ಕಡಿವಾಣ ಹಾಕಿದಂತೆ ಕಾಣುತ್ತಿದೆ. ಆರಂಭಿಕರು ಬೇಗನೆ ಔಟಾದರೆ, ಕೊಹ್ಲಿಯನ್ನ ಕೊನೆಯವರೆಗೂ ಹಿಡಿದಿಟ್ಟುಕೊಳ್ಳಬೇಕು ಎಂದಿದ್ದಾರೆ.
ನೆಟ್ಸ್ ಅಭ್ಯಾಸದ ವೇಳೆಯಲ್ಲಿ ವಿರಾಟ್ ಕೊಹ್ಲಿ ನೆಲದ ಹೊಡೆತಗಳನ್ನು ಹೊಡೆಯಲು ತೀವ್ರ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಭಾರತ ವಿರುದ್ಧ ಸ್ಫೋಟಕ ಬ್ಯಾಟರ್ ಕಣಕ್ಕಿಳಿಸಿಲು ಆಸ್ಟ್ರೇಲಿಯಾ ಯೋಜನೆ
ಆಸ್ಟ್ರೇಲಿಯಾ ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದೈತ್ಯಾಕಾರದ ಬ್ಯಾಟ್ಸ್ ಮನ್ ನನ್ನು ಕಣಕ್ಕಿಳಿಸಲು ಹೊರಟಿದೆ. ಹೌದು, ಅದು ಬೇರೆ ಯಾರೂ ಅಲ್ಲ, ಸಿಂಗಾಪುರದ ಟಿಮ್ ಡೇವಿಡ್. ಅವರು ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಆಡಲಿದ್ದಾರೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಟಿಮ್ ಡೇವಿಡ್ ತರಬೇತಿಯ ವಿಡಿಯೋವನ್ನು ಬಿಡುಗಡೆ ಮಾಡಿದೆ.

160+ ಸ್ಟ್ರೈಕ್‌ರೇಟ್ ಹೊಂದಿರುವ ಡೇವಿಡ್
ದೇಶೀಯ ಕ್ರಿಕೆಟ್‌ನಲ್ಲಿ 160 ಸ್ಟ್ರೈಕ್‌ರೇಟ್ ಹೊಂದಿರುವ ಟಿಮ್ ಡೇವಿಡ್, ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಹೊಸ ಆಯಾಮವನ್ನ ಸೃಷ್ಟಿಸಬಲ್ಲ ಆಟಗಾರನಾಗಿದ್ದಾನೆ. 6.2 ಅಡಿವುಳ್ಳ 100 ಕೆಜಿ ತೂಕದ ಟಿಮ್ ಡೇವಿಡ್ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ ಬೃಹತ್ ಸಿಕ್ಸರ್ ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಆತ ಉತ್ತಮ ಫೀಲ್ಡರ್ ಆಗಿದ್ದು, ಕೆಲವು ಓವರ್‌ಗಳನ್ನ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವನ್ನ ಸಹ ಹೊಂದಿದ್ದಾನೆ.


Click it and Unblock the Notifications












