ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲಿಗೆ ಹೆದರಬೇಡಿ: ಟೀಂ ಇಂಡಿಯಾಗೆ ಸಂದೇಶ ನೀಡಿದ ರೋಹಿತ್ ಶರ್ಮಾ

Team india

ವಿಶ್ವಕಪ್‌ಗೂ ಮುನ್ನ ನಡೆದ ಏಷ್ಯಾಕಪ್ ಟೂರ್ನಿಯ ಫೇವರಿಟ್ ಆಗಿದ್ದ ಟೀಂ ಇಂಡಿಯಾ, ಫೈನಲ್‌ಗೂ ಹೋಗದೆ ತವರಿಗೆ ಮರಳಿದ್ದು ಸಾಕಷ್ಟು ಟೀಕೆಯ ಜೊತೆಗೆ ಅಭಿಮಾನಿಗಳಿಗೆ ಬೇಸರ ತರಿಸಿತು. ಆದ್ರೀಗ ವಿಶ್ವಕಪ್ ಸಮೀಪವಾಗಿರುವ ಕಾರಣ ಮುಂಬರುವ ಟಿ20 ಸರಣಿಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಮಂಗಳವಾರ (ಸೆ.20) ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯು ಸಾಕಷ್ಟು ಕ್ರೂಶಿಯಲ್ ಆಗಿದ್ದು, ತಂಡದ ಪ್ರದರ್ಶನ ಮತ್ತು ಫಲಿತಾಂಶ ಆಟಗಾರರ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.

ಏಷ್ಯಾಕಪ್‌ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾ

ಏಷ್ಯಾಕಪ್‌ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾ

ಹೌದು, ಏಷ್ಯಾ ಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ ಸೂಪರ್ 4 ಹಂತದಲ್ಲಿ ಮೊದಲೆರಡು ಪಂದ್ಯಗಳನ್ನ ಸೋಲುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು. ಅಫ್ಘಾನಿಸ್ತಾನ ವಿರುದ್ಧ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ರೂ ಸಹ ಅದಾಗಲೇ ಕಾಲ ಮಿಂಚಿ ಹೋಗಿತ್ತು. ಆದ್ರೆ ಟಿ20 ವಿಶ್ವಕಪ್‌ಗೂ ಮುನ್ನ ಎರಡು ಸರಣಿಗಳಲ್ಲಿ ಭಾರತ ಭಾಗಿಯಾಗುವುದು ವರದಾನವಾಗಿದೆ. ಆದ್ರೆ ಅದಕ್ಕೂ ಮೊದಲು ಹಳೆಯ ಸೋಲಿನಿಂದ ರೋಹಿತ್ ಪಡೆ ಹೊರಬರಬೇಕಿದೆ.

ಆಟಗಾರರು ಆರಾಮ ವಲಯದಿಂದ ಹೊರಬನ್ನಿ ಎಂದು ರೋಹಿತ್ ಕರೆ

ಆಟಗಾರರು ಆರಾಮ ವಲಯದಿಂದ ಹೊರಬನ್ನಿ ಎಂದು ರೋಹಿತ್ ಕರೆ

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿರುವ ಆಟಗಾರರು ತಮ್ಮ ಆರಾಮ ವಲಯದಿಂದ ಹೊರಬಂದು ಉತ್ತಮ ಪ್ರದರ್ಶನ ನೀಡಬೇಕಿದೆ ಎಂದು ನಾಯಕ ರೋಹಿತ್ ಶರ್ಮಾ ಕರೆ ನೀಡಿದ್ದಾರೆ. ಜೊತೆಗೆ ಹೊಸ ಶಾಟ್‌ಗಳು, ಹೊಸ ಆಯಾಮಗಳ ಹುಡುಕಾಟದ ಜೊತೆಗೆ ಹೊಸ ಸಾಧ್ಯತೆಗಳನ್ನ ಸೃಷ್ಟಿಸಬೇಕಿದೆ ಎಂದು ಹಿರಿಯ ಆಟಗಾರರಿಗೂ ರೋಹಿತ್ ಸಂದೇಶ ನೀಡಿದ್ದಾರೆ.

ಆಸ್ಟ್ರೇಲಿಯಾ ಸರಣಿ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಸರಣಿಗಳಲ್ಲಿ ಭಾಗಿಯಾಗಲಿದೆ.

ಯುವರಾಜ್‌ 6 ಸಿಕ್ಸರ್‌ಗೆ ಇಂದಿಗೆ 15 ವರ್ಷ: ಸಿಕ್ಸರ್‌ ಕಿಂಗ್‌ನ ಆರ್ಭಟಕ್ಕೆ ಪತರುಗುಟ್ಟಿದ್ದ ಆಂಗ್ಲರು!

ತಂಡದಿಂದ ಹೊರಬೀಳಬಹುದು ಎಂಬ ಭಯದಿಂದ ಆಡದಿರಿ:ರೋಹಿತ್

ತಂಡದಿಂದ ಹೊರಬೀಳಬಹುದು ಎಂಬ ಭಯದಿಂದ ಆಡದಿರಿ:ರೋಹಿತ್

ಇನ್ನು ಟೀಂ ಇಂಡಿಯಾದ ಕೆಲವು ಆಟಗಾರರು ತಾನು ತಂಡದಿಂದ ಹೊರಬೀಳಬಹುದು ಎಂಬ ಭಯವನ್ನ ಬಿಟ್ಟು ಆಡಬೇಕಿದೆ ಎಂದು ರೋಹಿತ್ ಕರೆ ನೀಡಿದ್ರು.
"ನಾನು ತಂಡದಲ್ಲಿ ಭದ್ರತೆಯನ್ನು ತರಲು ಬಯಸಿದ್ದೆ, ಅದಕ್ಕಾಗಿಯೇ ನಾವು ವಿಶ್ವಕಪ್‌ಗೆ ಮೊದಲು ಎರಡೂ ಸರಣಿಗಳಿಗೆ ತಂಡವನ್ನು ಘೋಷಿಸಿದ್ದೇವೆ. ಏಷ್ಯಾ ಕಪ್‌ನಲ್ಲೂ ನಾವು ಹೆಚ್ಚು ಕಡಿಮೆ ಅದೇ ತಂಡವನ್ನು ಹೊಂದಿದ್ದೇವೆ ಎಂದು ಶರ್ಮಾ ಭಾನುವಾರ ಐಎಸ್ ಬಿಂದ್ರಾ ಪಿಸಿಎ ಸ್ಟೇಡಿಯಂನಲ್ಲಿ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಹೇಳಿದರು.

''ಮುಂಬರುವ ಆರು ಟಿ20 ಪಂದ್ಯಗಳಲ್ಲಿ ನಾವು ಇನ್ನು ಯಾವುದೆಲ್ಲಾ ಹೊಸತನವನ್ನ ಪ್ರಯೋಗಿಸಬಹುದು ಎಂಬುದರ ಕುರಿತು ಗಮನಹರಿಸಲಿದ್ದೇವೆ. ಆಟಗಾರರು ತಮ್ಮ ಮಿತಿಯನ್ನ ಮೀರಿ ಪ್ರದರ್ಶನ ನೀಡಬೇಕಿದೆ ಅಥವಾ ಇನ್ನುಳಿದ ಆರು ಪಂದ್ಯಗಳಲ್ಲಿ ಎಲ್ಲಾ ಭಯದಿಂದ ಹೊರಬರಬೇಕಿದೆ. ಇದು ಬ್ಯಾಟ್ಸ್‌ಮನ್ ಮತ್ತು ಬೌಲರ್‌ ಇಬ್ಬರಿಗೂ ಅನ್ವಯವಾಗುತ್ತದೆ. ಯಾರಿಗಾದ್ರೂ ಹುಕ್ ಶಾಟ್‌ ಅಥವಾ ಸ್ವೀಪ್ ಶಾಟ್‌ ಆರಾಮದಾಯಕವಾಗಿ ಹೊಡೆಯಲು ಸಾಧ್ಯವಾಗದಿದ್ರೆ, ಆ ಕುರಿತು ಭಯ ಬಿಟ್ಟು ಪ್ರಯೋಗಿಸಿ ಆಡಬೇಕಿದೆ'' ಎಂದಿದ್ದಾರೆ.

ಶಮಿ ಸ್ಥಾನದಲ್ಲಿ ಉಮೇಶ್ ಯಾದವ್ ಆಯ್ಕೆ: ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರದ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ

ವಿರಾಟ್ ಕೊಹ್ಲಿ ಸ್ವೀಪ್ ಶಾಟ್ ಉದಾಹರಣೆ ನೀಡಿದ ರೋಹಿತ್

ವಿರಾಟ್ ಕೊಹ್ಲಿ ಸ್ವೀಪ್ ಶಾಟ್ ಉದಾಹರಣೆ ನೀಡಿದ ರೋಹಿತ್

ಇನ್ನು ಆಟಗಾರರು ತಮ್ಮ ಮಿತಿಯನ್ನ ದಾಟಿ ಆಡಬೇಕಿದೆ ಎಂಬುದಕ್ಕೆ ಉದಾಹರಣೆ ನೀಡಿದ ರೋಹಿತ್ '' ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ ಕಂಫರ್ಟ್‌ನಿಂದ ಹೊರಬಂದು ಸ್ವೀಪ್ ಶಾಟ್ ಹೊಡೆದರು. ಜೊತೆಗೆ ಓಪನರ್ ಆಗಿ ಕಣಕ್ಕಿಳಿದು ಸಹ ಯಶಸ್ವಿಯಾಗಿದ್ದಾರೆ. ಇವೆಲ್ಲವೂ ಆಟಗಾರರು ವಿಭಿನ್ನ ಪ್ರಯತ್ನಗಳನ್ನ ಮಾಡುವ ಮೂಲಕ ಸಕ್ಸಸ್ ಕಾಣುವುದಾಗಿದೆ'' ಎಂದು ರೋಹಿತ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಸ್ವೀಪ್ ಶಾಟ್ ಹೊಡೆಯುವ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆದ್ರೆ ಏಷ್ಯಾಕಪ್‌ನಲ್ಲಿ ಅಂತಹ ಪ್ರಯತ್ನಗಳನ್ನ ಕಾಣಬಹುದಾಗಿದೆ.

ವಿರಾಟ್ ಕೊಹ್ಲಿ ಓಪನಿಂಗ್ ಮಾಡಲಿದ್ದಾರೆಯೇ?

ವಿರಾಟ್ ಕೊಹ್ಲಿ ಓಪನಿಂಗ್ ಮಾಡಲಿದ್ದಾರೆಯೇ?

ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಚೊಚ್ಚಲ ಟಿ20 ಶತಕ ದಾಖಲಿಸಿದ ಬಳಿಕ ಚರ್ಚೆಗೆ ಕಾರಣವಾಗಿರುವ ವಿಷಯ, ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಓಪನರ್ ಆಗಿ ಕಣಕ್ಕಿಳಿಯುತ್ತಾರ? ಎಂಬ ಪ್ರಶ್ನೆಗೆ ರೋಹಿತ್ ಉತ್ತರ ನೀಡಿದ್ದು, ''ಕೆ.ಎಲ್ ರಾಹುಲ್ ನಮ್ಮ ಮೊದಲ ಆಯ್ಕೆಯ ಓಪನರ್ ಆಗಿದ್ದು, ವಿರಾಟ್ ಕೊಹ್ಲಿ ಮೂರನೇ ಓಪನರ್ ಆಗಿ ಇರುತ್ತಾರೆ'' ಎಂದು ಗೊಂದಲಗಳನ್ನ ನಿವಾರಣೆ ಮಾಡಿದ್ದಾರೆ.

ಜೊತೆಗೆ ಯಾವುದೇ ಆಟಗಾರರು ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ಧರಿರಬೇಕು ಎಂದು ರೋಹಿತ್ ಶರ್ಮಾ ಇದೇ ವೇಳೆಯಲ್ಲಿ ಆಟಗಾರರಿಗೆ ತಿಳಿಸಿದ್ದಾರೆ.

Story first published: Monday, September 19, 2022, 14:12 [IST]
Other articles published on Sep 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X