IND vs AUS 2022: ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲೋದು ಅನುಮಾನ ಎಂದ ಮಾಜಿ ಕ್ರಿಕೆಟರ್
ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಸೂಪರ್ 4 ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದ ನಂತರ, ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆತ್ಮವಿಶ್ವಾಸ ಪಡೆದುಕೊಳ್ಳುವ ಯೋಜನೆಯಲ್ಲಿದ್ದರು.
ಆದರೆ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ 208ರನ್‌ಗಳ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳಲು ವಿಫಲವಾಗಿದೆ. ಭಾರತದ ಬೌಲಿಂಗ್ ಮತ್ತು ಫೀಲ್ಡಿಂಗ್ ತೀರಾ ಕಳಪೆಯಾದ ಕಾರಣ ಮೊಹಾಲಿಯಲ್ಲಿ ಸೋಲೊಪ್ಪಿಕೊಂಡಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ. ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿದೆ.
ಟೀಂ ಇಂಡಿಯಾ ಆಟದ ಬಗ್ಗೆ ಈಗಾಗಲೇ ಭಾರಿ ಟೀಕೆ ವ್ಯಕ್ತವಾಗಿದೆ. ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಈಗಲೇ ಹೀಗಾದರೆ ಟಿ20 ವಿಶ್ವಕಪ್‌ನಲ್ಲಿ ಇನ್ಯಾವ ರೀತಿ ಆಡಲಿದೆ ಎನ್ನುವ ಆತಂಕ ಶುರುವಾಗಿದೆ.
ರೋಹಿತ್ ಶರ್ಮಾ ಪಡೆ ಆಸ್ಟ್ರೇಲಿಯಾ ವಿರುದ್ಧ ಸೋಲನ್ನಪ್ಪಿದ ನಂತರ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ, ಟೀಂ ಇಂಡಿಯಾ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವುದು ಅನುಮಾನ ಎಂದು ಹೇಳಿದ್ದಾರೆ.

ಈ ರೀತಿ ಆಡಿದರೆ ವಿಶ್ವಕಪ್ ಗೆಲ್ಲುವುದು ಕಷ್ಟ
ತಮ್ಮ ಸತತ ಕಳಪೆ ಬೌಲಿಂಗ್ ಪ್ರದರ್ಶನದ ನಂತರ ಈ ವರ್ಷ ಟಿ 20 ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಸಾಧ್ಯತೆಗಳು ಮಂಕಾಗಿವೆ ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಟದ ನಂತರ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದಲ್ಲಿ, ಆಕಾಶ್ ಚೋಪ್ರಾ ವಿಶೇಷವಾಗಿ ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಬೌಲಿಂಗ್ ಬಗ್ಗೆ ಮಾತನಾಡಿದ್ದಾರೆ. ಇಬ್ಬರು ಎಷ್ಟು ಅನುಭವಿಗಳಾಗಿದ್ದರೂ ಹೇಗೆ ಅಸಹಾಯಕಾರಿದ್ದಾರೆ ಎಂದು ಹೇಳಿದ್ದಾರೆ.
IND vs AUS 1st T20: ಈತನ ಅನುಪಸ್ಥಿತಿ ತಂಡದಲ್ಲಿ ದೊಡ್ಡ ವ್ಯತ್ಯಾಸವಾಗಿದೆ ಎಂದ ಹಾರ್ದಿಕ್ ಪಾಂಡ್ಯ

ವಿಕೆಟ್ ಪಡೆಯದಿದ್ದರೆ ಗೆಲ್ಲುವುದು ಹೇಗೆ
"ಯುಜ್ವೇಂದ್ರ ಚಹಾಲ್ ವೇಗವಾಗಿ ಬೌಲಿಂಗ್ ಮಾಡುವುದನ್ನು ಮುಂದುವರೆಸಿದ್ದಾರೆ. ನೀವು ನಿಧಾನವಾಗಿ ಬೌಲಿಂಗ್ ಮಾಡದಿದ್ದರೆ ನೀವು ಹೇಗೆ ವಿಕೆಟ್ ಪಡೆಯುತ್ತೀರಿ? ವಾಸ್ತವವೆಂದರೆ ಭಾರತವು ದುರ್ಬಲ ಬೌಲಿಂಗ್ ಲೈನ್-ಅಪ್ ಅನ್ನು ಹೊಂದಿದೆ ಮತ್ತು ವಿಶ್ವಕಪ್ ಗೆಲ್ಲುವ ಭರವಸೆ ಕಡಿಮೆಯಾಗಿದೆ" ಎಂದು ಹೇಳಿದ್ದಾರೆ.
ಸರಣಿಯಲ್ಲಿ ಇನ್ನುಳಿದ ಪಂದ್ಯಗಳನ್ನು ಗೆಲ್ಲಬೇಕಾದರೆ ಪ್ರಮುಖ ನಾಲ್ಕು ವೇಗದ ಬೌಲರ್ ಜೊತೆ ಆಡಬೇಕು, ಇದೇ ರೀತಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದರೆ ಸರಣಿಯನ್ನ ಕಳೆದುಕೊಳ್ಳುತ್ತೀರಿ ಎಂದರು.

ಬುಮ್ರಾ ಒಬ್ಬರಿಂದಲೇ ಪಂದ್ಯ ಗೆಲ್ಲಿಸಲಾಗದು
ಸರಣಿಯ ಎರಡನೇ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಲಭ್ಯತೆಯಿಂದ ಟೀಮ್ ಇಂಡಿಯಾ ಬೌಲಿಂಗ್‌ಅನ್ನು ಬಲಪಡಿಸಬಹುದು. ಆದಾಗ್ಯೂ, ಒಟ್ಟಾರೆ ಬೌಲಿಂಗ್ ಪ್ರದರ್ಶನದ ಮೇಲೆ ಇದು ಗಣನೀಯ ಪರಿಣಾಮವನ್ನು ಬೀರುವುದಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಈ ಬಗ್ಗೆ ವಿವರಣೆ ನೀಡಿರುವ ಅವರು, ಐಪಿಎಲ್ 2022 ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ನ (MI) ದುರ್ಬಲ ಬೌಲಿಂಗ್ ದಾಳಿಯ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ.
"ಒಬ್ಬ ಬೌಲರ್ ಬಂದು ಎಲ್ಲವನ್ನೂ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಇದು ವಾಸ್ತವವಾಗಿದೆ. ಈ ವರ್ಷ ಕೇವಲ ಬುಮ್ರಾ ಮೇಲೆ ಅವಲಂಬಿಸಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಏನಾಯಿತು? ಅವರು ಹೆಚ್ಚು ಗೆಲ್ಲಲಿಲ್ಲ, ಆದ್ದರಿಂದ ನೀವು 5-6 ವಿಕೆಟ್‌ಗಳನ್ನು ತೆಗೆದುಕೊಳ್ಳುವ ಪಂದ್ಯವನ್ನು ಹೊರತುಪಡಿಸಿ. , ನೀವು ಕೇವಲ ಒಬ್ಬ ಬೌಲರ್‌ನಿಂದ ಹೆಚ್ಚಿನ ವ್ಯತ್ಯಾಸ ನಿರೀಕ್ಷೆ ಮಾಡಲು ಸಾಧ್ಯವಿಲ್ಲ." ಎಂದು ಹೇಳಿದರು.

ಭುವನೇಶ್ವರ್, ಹರ್ಷಲ್ ಉತ್ತಮ ಪ್ರದರ್ಶನ ನೀಡಬೇಕು
ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ವಾಪಸಾದರು ಅವರಿಗೆ ಭುವನೇಶ್ವರ್ ಮತ್ತು ಹರ್ಷಲ್ ಪಟೇಲ್ ಉತ್ತಮ ಸಾಥ್ ನೀಡಬೇಕಿದೆ. ಎರಡೂ ತುದಿಯಿಂದ ಉತ್ತಮ ಬೌಲಿಂಗ್ ದಾಳಿ ಮಾಡಿದಾಗ ಮಾತ್ರ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯ ಎಂದು ಆಕಾಶ್ ಚೋಪ್ರಾ ಹೇಳಿದರು.
ಮುಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಹರ್ಷಲ್ ಪಟೇಲ್, ಭುವನೇಶ್ವರ್ ಆಟ ಮುಂದುವರೆಸುತ್ತಾರೆಯೇ ಇಲ್ಲ ಬೇರೆ ಆಟಗಾರರಿಗೆ ಅವಕಾಶ ನೀಡಲಾಗುತ್ತಿದಯೇ ಎಂದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications