IND vs AUS 1st T20: ಈತನ ಅನುಪಸ್ಥಿತಿ ತಂಡದಲ್ಲಿ ದೊಡ್ಡ ವ್ಯತ್ಯಾಸವಾಗಿದೆ ಎಂದ ಹಾರ್ದಿಕ್ ಪಾಂಡ್ಯ

ಮೊಹಾಲಿಯ ಎಂಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ 208 ರನ್‌ಗಳ ಮೊತ್ತವನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವು ಕಳಪೆ ಆರಂಭವನ್ನು ಪಡೆದುಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಭಾರತದ ಆಡಿದ ಹನ್ನೊಂದರ ಬಳಗದಿಂದ ಆಶ್ಚರ್ಯಕರವಾಗಿ ಹೊರಗುಳಿದಿದ್ದರು. ಆದರೆ ಅವರು ಇನ್ನೂ ಗಾಯದಿಂದ ಹಿಂತಿರುಗುತ್ತಿರುವ ಕಾರಣ, ತಂಡವು ಪ್ರಧಾನ ವೇಗದ ಬೌಲರ್ ಮೇಲೆ ಹೆಚ್ಚಿನ ಒತ್ತಡವನ್ನು ಬೀರುವುದಿಲ್ಲ ಎಂದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದರು.

ICC T20 Ranking: ಪಾಕ್ ನಾಯಕ ಬಾಬರ್ ಅಜಂ ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್ICC T20 Ranking: ಪಾಕ್ ನಾಯಕ ಬಾಬರ್ ಅಜಂ ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್

ಬೆನ್ನುನೋವಿನಿಂದಾಗಿ ಏಷ್ಯಾಕಪ್‌ನಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ, 2022ರ ಟಿ20 ವಿಶ್ವಕಪ್ ತಂಡದಲ್ಲಿ ಮತ್ತು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾರನ್ನು ತುಂಬಾ ಮಿಸ್ ಮಾಡಿಕೊಂಡಿತು

ಜಸ್ಪ್ರೀತ್ ಬುಮ್ರಾರನ್ನು ತುಂಬಾ ಮಿಸ್ ಮಾಡಿಕೊಂಡಿತು

ಮಂಗಳವಾರ (ಸೆಪ್ಟೆಂಬರ್ 20) ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಪ್ರವಾಸಿ ತಂಡ 209 ರನ್‌ಗಳನ್ನು ಆರಾಮವಾಗಿ ಬೆನ್ನಟ್ಟಿದ್ದರಿಂದ ಭಾರತ ತಂಡವು ಜಸ್ಪ್ರೀತ್ ಬುಮ್ರಾರನ್ನು ತುಂಬಾ ಮಿಸ್ ಮಾಡಿಕೊಂಡಿತು. ಸ್ಪಿನ್ನರ್ ಅಕ್ಷರ್ ಪಟೇಲ್ ಹೊರತುಪಡಿಸಿ, ಎಲ್ಲಾ ಬೌಲರ್‌ಗಳು ಪ್ರತಿ ಓವರ್‌ಗೆ 11 ರನ್‌ಗಳಿಗಿಂತ ಹೆಚ್ಚು ಸೋರಿಕೆ ಮಾಡಿದರು.

"ಜಸ್ಪ್ರೀತ್ ಬುಮ್ರಾ ತಂಡಕ್ಕೆ ಏನು ತರುತ್ತಾನೆ ಮತ್ತು ಅವನು ನಮಗೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಇಲ್ಲಿ ಬೌಲಿಂಗ್ ಬಗ್ಗೆ ಕಾಳಜಿ ಇರುತ್ತದೆ, ಅದು ಉತ್ತಮವಾಗಿದೆ. ನಾವು ನಮ್ಮ ಹುಡುಗರನ್ನು ನಂಬಬೇಕಿದೆ. ಇವರು ದೇಶದ ಅತ್ಯುತ್ತಮ 15 ಆಟಗಾರರು ಮತ್ತು ಅದಕ್ಕಾಗಿಯೇ ಅವರು ರಾಷ್ಟ್ರೀಯ ತಂಡದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಇಲ್ಲದಿರುವುದು ನಿಸ್ಸಂಶಯವಾಗಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಅವರು ಗಾಯದ ನಂತರ ಹಿಂತಿರುಗುತ್ತಿದ್ದಾರೆ, ಅವರು ಹಿಂತಿರುಗಲು ಸಾಕಷ್ಟು ಸಮಯವನ್ನು ಪಡೆಯುವುದು ಮುಖ್ಯವಾಗಿದೆ ಮತ್ತು ಅವರ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬಾರದು," ಎಂದು ಹಾರ್ದಿಕ್ ಪಾಮಡ್ಯ ತಿಳಿಸಿದರು.

30 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿ ಪಾಂಡ್ಯ

30 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿ ಪಾಂಡ್ಯ

ಇನ್ನು ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿ ಭಾರತವನ್ನು 200ರ ಗಡಿ ದಾಟಿಸಿದರು. ಐಪಿಎಲ್‌ನಿಂದ ಪುನರಾಗಮನದ ನಂತರ ಅವರು ತಂಡದ ಅತ್ಯುತ್ತಮ ಆಟಗಾರರಾಗಿದ್ದಾರೆ. ತಡವಾಗಿ ಅವರ ಆಟದ ಬಗ್ಗೆ ಮಾತನಾಡಿದ ಪಾಂಡ್ಯ, ""ನಾನು ಇತ್ತೀಚೆಗೆ ಬಹಳಷ್ಟು ಯಶಸ್ಸನ್ನು ಗಳಿಸಿದ್ದೇನೆ. ಆದರೆ ನನಗೆ, ನನ್ನ ಒಳ್ಳೆಯ ದಿನಗಳಲ್ಲಿ ನಾನು ಹೇಗೆ ಉತ್ತಮಗೊಳ್ಳಬಹುದು ಎಂಬುದು ಹೆಚ್ಚು ಮುಖ್ಯವಾದುದು. ನಾನು ಹೊಂದಿರುವ ವೃತ್ತಿಜೀವನದ ಗ್ರಾಫ್, ನನ್ನ ಪ್ರದರ್ಶನಗಳ ಬಗ್ಗೆ ಯಶಸ್ಸು ಅಥವಾ ವೈಫಲ್ಯದ ಬಗ್ಗೆ ನಾನು ದೊಡ್ಡ ಮಾತು ಅಡುವುದಿಲ್ಲವೆಂದರು.

ಭಾರತದ ಬೌಲಿಂಗ್ ದಾಳಿಯನ್ನು ಅಣಕಿಸುವಂತೆ ಆಸ್ಟ್ರೇಲಿಯಾ ರನ್ ಚೇಸ್‌ನಲ್ಲಿ ಅತ್ಯುತ್ತಮವಾಗಿ ಆಡಿತು ಮತ್ತು ಹಾರ್ದಿಕ್ ಪಾಂಡ್ಯ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕ್ರೆಡಿಟ್ ನೀಡಿದರು.

ಕ್ಯಾಮರೂನ್ ಗ್ರೀನ್ ಅವರನ್ನು ಹೊಗಳಿದ ಹಾರ್ದಿಕ್

ಕ್ಯಾಮರೂನ್ ಗ್ರೀನ್ ಅವರನ್ನು ಹೊಗಳಿದ ಹಾರ್ದಿಕ್

"ಇಬ್ಬನಿ ಇರಲಿಲ್ಲ, ಅವರು ಬ್ಯಾಟಿಂಗ್ ಮಾಡಿದ ರೀತಿಗೆ ನೀವು ಮನ್ನಣೆ ನೀಡಬೇಕು. ಅವರು ಉತ್ತಮ ಕ್ರಿಕೆಟ್ ಆಡಿದರು. ಚೆಂಡಿನಲ್ಲಿ ನಮ್ಮ ಎಸೆತಗಳೊಂದಿಗೆ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮಗೆ ಸಾಧ್ಯವಾಗಲಿಲ್ಲ. ನಾವು ಏಕೆ ಸೋತಿದ್ದೇವೆ ಎಂಬುದನ್ನು ನೀವು ಗುರುತಿಸಲು ಸಾಧ್ಯವಿಲ್ಲ. ಅದೊಂದು ಆಟ. ಇದು ದ್ವಿಪಕ್ಷೀಯ ಸರಣಿ. ನಾವು ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದೆ ಮತ್ತು ನಾವು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ," ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

ತಮ್ಮ ಚೊಚ್ಚಲ ಪಂದ್ಯದಲ್ಲಿ 30 ಎಸೆತಗಳಲ್ಲಿ 61 ರನ್ ಸಿಡಿಸಿದ ಕ್ಯಾಮರೂನ್ ಗ್ರೀನ್ ಅವರನ್ನು ಹೊಗಳಿದರು ಮತ್ತು ಅವರ ಆಕ್ರಮಣದಿಂದ ಭಾರತ ತಂಡಕ್ಕೆ ಸೋಲುಂಟಾಯಿತು. ಅವರು ಕೆಲವು ಉತ್ತಮ ಶಾಟ್‌ಗಳನ್ನು ಆಡಿದರು ಮತ್ತು ಅದಕ್ಕೆ ಅರ್ಹತೆ ಇದೆ," ಎಂದು ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟರು.

For Quick Alerts
ALLOW NOTIFICATIONS
For Daily Alerts
Story first published: Wednesday, September 21, 2022, 18:23 [IST]
Other articles published on Sep 21, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X