Ind Vs Aus 4th Test: ವಿರಾಟ್ ಕೊಹ್ಲಿ ಅರ್ಧಶತಕ : ಸಚಿನ್, ದ್ರಾವಿಡ್ ದಾಖಲೆ ಹಿಂದಿಕ್ಕಿದ 'ಕಿಂಗ್ ಕೊಹ್ಲಿ'

ಅಹಮದಾಬಾದ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದಾರೆ. ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ವಿರಾಟ್ ಕೊಹ್ಲಿ 128 ಎಸೆತಗಳಲ್ಲಿ 59 ರನ್ ಗಳಿಸಿದ್ದು, ಶತಕ ಬಾರಿಸುವ ಭರವಸೆ ಮೂಡಿಸಿದ್ದಾರೆ.
2022ರ ಜನವರಿ ನಂತರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದರು. ಸತತ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಅವರು ಅರ್ಧಶತಕ ಗಳಿಸಲು ವಿಫಲವಾಗಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದ ವಿರಾಟ್ ಕೊಹ್ಲಿ ನಾಲ್ಕನೇ ಟೆಸ್ಟ್‌ನಲ್ಲಿ ರನ್ ಬರವನ್ನು ನೀಗಿಸಿಕೊಂಡಿದ್ದಾರೆ.
ಅರ್ಧಶತಕದ ಜೊತೆಗೆ ಅವರು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ. ತವರಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ 5ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
4000 ರನ್ ಪೂರೈಸಿದ 5ನೇ ಬ್ಯಾಟರ್ ಎನಿಸಿಕೊಂಡರೂ ವೇಗವಾಗಿ 4 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದಾಖಲೆಯನ್ನು ಮುರಿದರು. ಕೊಹ್ಲಿ 58.82 ಸರಾಸರಿಯಲ್ಲಿ 4000 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಮೊದಲ ಸ್ಥಾನದಲ್ಲಿ ಸಚಿನ್
ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಆಡಿರುವ 94 ಪಂದ್ಯಗಳಲ್ಲಿ 52.67 ಸರಾಸರಿಯಲ್ಲಿ 7216 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ 70 ಟೆಸ್ಟ್ ಗಳಿಂದ 51.35 ಸರಾಸರಿಯಲ್ಲಿ 5598 ರನ್ ಗಳಿಸಿದ್ದಾರೆ.
ಸುನಿಲ್ ಗವಾಸ್ಕರ್ 65 ಪಂದ್ಯಗಳಲ್ಲಿ 50.16 ಸರಾಸರಿಯಲ್ಲಿ 5067 ರನ್ ಗಳಿಸಿದ್ದು, ವೀರೇಂದ್ರ ಸೆಹ್ವಾಗ್ 52 ಪಂದ್ಯಗಳಲ್ಲಿ 54.12 ಸರಾಸರಿಯಲ್ಲಿ 4656 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 50 ಪಂದ್ಯಗಳಲ್ಲಿ 58.82 ಸರಾಸರಿಯಲ್ಲಿ 4000 ರನ್ ಪೂರೈಸಿದ್ದಾರೆ.
2022ರ ಜನವರಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಟೆಸ್ಟ್ ಅರ್ಧಶತಕವನ್ನು ಬಾರಿಸಿದ್ದರು. ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 79 ರನ್ ಗಳಿಸಿದ್ದರು. ಅದಾದ ನಂತರ ಎರಡು ಬಾರಿ 40ಕ್ಕಿಂತ ಹೆಚ್ಚು ರನ್ ಗಳಿಸಿದ್ದರೂ ಅರ್ಧಶತಕ ಗಳಿಸುವಲ್ಲಿ ವಿಫಲವಾಗಿದ್ದರು. ಈಗ ಆ ಬರವನ್ನು ನೀಗಿಸಿಕೊಂಡಿದ್ದಾರೆ.

ವೇಗವಾಗಿ 25 ಸಾವಿರ ರನ್ ಪೂರೈಸಿದ ಕೊಹ್ಲಿ
ಫೆಬ್ರವರಿ ತಿಂಗಳಿನಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್ ಪೂರೈಸಿದರು. ಅತಿ ವೇಗವಾಗಿ 25 ಸಾವಿರ ರನ್ ಪೂರೈಸಿದ ಆಟಗಾರ ಎನ್ನುವ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಸದ್ಯ ಕೊಹ್ಲಿ ದಕ್ಷಿಣ ಆಫ್ರಿಕಾದ ಮಾಜಿ ಶ್ರೇಷ್ಠ ಜಾಕ್ವೆಸ್ ಕಾಲಿಸ್ ಅವರ ದಾಖಲೆ ಮುರಿಯುವ ಸಮೀಪದಲ್ಲಿದ್ದಾರೆ. ಕಾಲಿಸ್ 25,547 ರನ್ ಗಳಿಸಿದ್ದು, ಕೊಹ್ಲಿ 25047 ರನ್ ಗಳಿಸಿದ್ದಾರೆ. 34357 ರನ್ ಗಳಿಸಿರುವ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.

1205 ದಿನಗಳಿಂದ ಶತಕ ಗಳಿಸಿಲ್ಲ
ವಿರಾಟ್ ಕೊಹ್ಲಿ ತಮ್ಮ ಮೂರು ವರ್ಷಗಳ ಶತಕದ ಬರವನ್ನು 2022ರ ಏಷ್ಯಾಕಪ್ ಪಂದ್ಯದ ವೇಳೆ ಪೂರೈಸಿದರು. ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಬಾರಿಸಿದ ಅವರು ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಬೇಕಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿ 1205 ದಿನಗಳು ಅಥವಾ ಮೂರು ವರ್ಷ ಮೂರು ತಿಂಗಳಾಗಿದೆ. ಸದ್ಯ ನಡೆಯುತ್ತಿರುವ ಅಹಮದಾಬಾದ್ ಟೆಸ್ಟ್‌ನಲ್ಲಿ ಅವರು ತಮ್ಮ ಶತಕದ ಬರವನ್ನು ಕಳೆದುಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications