For Quick Alerts
ALLOW NOTIFICATIONS  
For Daily Alerts
 

IND vs BAN 1st Test: ಕುಲದೀಪ್‌ಗೆ 5 ವಿಕೆಟ್; 150 ರನ್‌ಗೆ ಬಾಂಗ್ಲಾ ಆಲೌಟ್; ಭಾರತಕ್ಕೆ ಬೃಹತ್ ಮುನ್ನಡೆ

IND vs BAN 1st Test: Bangladesh Allout For 150 Runs in 1st Innings; Huge Lead For Team India

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಗಿದ್ದು, ಇದರಿಂದ ಭಾರತ ತಂಡ 254 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

2ನೇ ದಿನದಾಟದ ಮುಕ್ತಾಯಕ್ಕೆ 133 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾದೇಶ ತಂಡ, ಮೂರನೇ ದಿನದಾಟದ ಮೊದಲ ಅವಧಿಯಲ್ಲಿಯೇ 17 ರನ್ ಗಳಿಸುವಷ್ಟರಲ್ಲಿ ಉಳಿದೆರಡು ವಿಕೆಟ್ ಕಳೆದುಕೊಂಡು 150 ಸರ್ವಪತನ ಕಂಡಿತು.

ಬಾಂಗ್ಲಾದೇಶದ ಯಾವ ಬ್ಯಾಟರ್‌ಗಳು ಸಹ ಭಾರತದ ಬೌಲಿಂಗ್ ಪಡೆ ಎದುರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಧೈರ್ಯ ತೋರಲಿಲ್ಲ. ಯಾವೊಬ್ಬ ಬ್ಯಾಟ್ಸ್‌ಮನ್‌ಗಳು 30ರ ಗಡಿ ದಾಟಲಿಲ್ಲ. ಮುಶ್ಫೀಕರ್ ರಹೀಂ ಅವರ 28 ರನ್‌ಗಳು ಆತಿಥೇಯ ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.

IND vs BAN 1st Test: Bangladesh Allout For 150 Runs in 1st Innings; Huge Lead For Team India

ಭಾರತದ ಎಡಗೈ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ 2ನೇ ದಿನದಂದು ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಅದೇ ರೀತಿ 3ನೇ ದಿನದ ಆರಂಭದಲ್ಲಿ ಎಬಾಡೋಟ್ ಹೊಸೈನ್ ಅವರ ವಿಕೆಟ್ ಪಡೆಯುವ ಮೂಲಕ ಬಾಂಗ್ಲಾ ತಂಡಕ್ಕೆ ದಿನದ ಆರಂಭದಲ್ಲಿಯೇ ದೊಡ್ಡ ಹೊಡೆತ ನೀಡಿದರು.

ರಣಜಿ ಟ್ರೋಫಿ 2022: ಕೇರಳ ವಿರುದ್ಧ ಅಮೋಘ ಶತಕ ಬಾರಿಸಿದ ಇಶಾನ್ ಕಿಶನ್

ಅಲ್ಲದೆ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ 40 ರನ್‌ಗೆ 5 ವಿಕೆಟ್ ಗೊಂಚಲು ಪಡೆದರು. ಅಂತಿಮ ವಿಕೆಟ್ ಅನ್ನು ಅಕ್ಷರ್ ಪಟೇಲ್ ಪಡೆಯುತ್ತಿದ್ದಂತೆಯೇ ಬಾಂಗ್ಲಾದೇಶ 150 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಮೊಹಮ್ಮದ್ ಸಿರಾಜ್ ಕೂಡ 20 ರನ್‌ಗಳಿಗೆ ಮೂರು ವಿಕೆಟ್ ಪಡದು ಬೌಲಿಂಗ್‌ನಲ್ಲಿ ಮಿಂಚಿದರು.

IND vs BAN 1st Test: Bangladesh Allout For 150 Runs in 1st Innings; Huge Lead For Team India

ಅತಿಥೇಯ ತಂಡಕ್ಕೆ ಫಾಲೋ-ಆನ್ ನೀಡದೆ 254 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದಾರೆ. ಬಾಂಗ್ಲಾದೇಶಕ್ಕೆ ದೊಡ್ಡ ಗುರಿ ನೀಡಲು ಎದುರು ನೋಡುತ್ತಿದ್ದಾರೆ.

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ (90) ಮತ್ತು ಶ್ರೇಯಸ್ ಅಯ್ಯರ್ (86) ಅವರ ಅಗ್ರ ಪ್ರದರ್ಶನದಿಂದಾಗಿ ಭಾರತ ತಂಡ 404 ರನ್ ಗಳಿಸಿತ್ತು.

Story first published: Friday, December 16, 2022, 10:55 [IST]
Other articles published on Dec 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+