Ind vs Ban 2nd Test: ಅಭ್ಯಾಸ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ! ರಾಹುಲ್, ಪಂತ್ ಕಠಿಣ ಅಭ್ಯಾಸ

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಗೆಲುವಿನ ನಂತರ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾ ಢಾಕಾದಲ್ಲಿ ನಡೆಯಲಿರುವ 2 ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ.
ಡಿಸೆಂಬರ್ 22 ರಂದು ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮಂಗಳವಾರ ಭಾರತ ತಂಡದ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡರು. ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿರುವ ನಾಯಕ ಕೆಎಲ್ ರಾಹುಲ್‌ಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೆಲವು ಬ್ಯಾಟಿಂಗ್ ಸಲಹೆ ನೀಡಿದರು.
ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಮೊದಲನೇ ಅಭ್ಯಾಸದಿಂದ ದೂರವುಳಿದರು. ಅವರು ವಿಶ್ರಾಂತಿ ಪಡೆಯುತ್ತಿದ್ದು, ಬುಧವಾರ ತಂಡದ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಮೊದಲನೇ ಪಂದ್ಯದಲ್ಲಿ ಭರ್ಜರಿ ಗೆಲುವಿನ ಬಳಿಕ ಬಾಂಗ್ಲಾದೇಶದ ರಾಜಧಾನಿಗೆ ಆಗಮಿಸಿರುವ ಭಾರತ ವೈಟ್‌ವಾಶ್ ಮಾಡುವ ಗುರಿ ಹೊಂದಿದೆ.
ಏಕದಿನ ಸರಣಿಯಲ್ಲಿ ಗಾಯಗೊಂಡು ಮೊದಲ ಟೆಸ್ಟ್ ಪಂದ್ಯದಿಂದ ದೂರವುಳಿದಿದ್ದ ನಾಯಕ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯಕ್ಕೆ ಕೂಡ ಅಲಭ್ಯರಾಗಿದ್ದಾರೆ. ಭಾರತದ ಮತ್ತೊಬ್ಬ ಬೌಲರ್ ನವದೀಪ್ ಸೈನಿ ಕೂಡ ಗಾಯಗೊಂಡಿದ್ದು, 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ರನ್ ಗಳಿಸಿದರೆ ಮಾತ್ರ ಕೆಎಲ್ ರಾಹುಲ್‌ಗೆ ಅವಕಾಶ
ರೋಹಿತ್ ಶರ್ಮಾ ಗಾಯಗೊಂಡ ಕಾರಣ ಕೆಎಲ್ ರಾಹುಲ್ ಸದ್ಯ ಟೀಂ ಇಂಡಿಯಾವನ್ನು ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಆದರೆ, ಅವರು ರನ್ ಗಳಿಸುವಲ್ಲಿ ವಿಫಲವಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ರೋಹಿತ್ ಶರ್ಮಾ ಬದಲಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಶುಭಮನ್ ಗಿಲ್ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.
ಗಿಲ್ ಉತ್ತಮ ಪ್ರದರ್ಶನ ನೀಡಿರುವುದು ರಾಹುಲ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ನಾಯಕ ರೋಹಿತ್ ಶರ್ಮಾ ತಂಡಕ್ಕೆ ವಾಪಸಾದರೆ, ಕೆಎಲ್ ರಾಹುಲ್ ಸ್ಥಾನ ಪಡೆಯಲು ಶುಭಮನ್ ಗಿಲ್ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ.
ನಾಯಕನಾಗಿ ಬಾಬರ್ ಸಾಧನೆ ಶೂನ್ಯ: ಕೊಹ್ಲಿ ಜೊತೆ ಹೋಲಿಕೆಗೆ ಪಾಕ್ ಮಾಜಿ ಆಟಗಾರನೇ ಕಿಡಿ!

ವಿರಾಟ್ ಕೊಹ್ಲಿ ಫಾರ್ಮ್ ಕೂಡ ಮುಖ್ಯ
ಟಿ20 ಮತ್ತು ಏಕದಿನ ಮಾದರಿಯಲ್ಲಿ 2022ರಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ರನ್ ಬರವನ್ನು ನೀಗಿಸಿಕೊಂಡಿದ್ದಾರೆ. ಸೀಮಿತ ಓವರ್ ಮಾದರಿಯಲ್ಲಿ ಅವರು ತಮ್ಮ ಫಾರ್ಮ್ ಕಂಡುಕೊಂಡಿದ್ದು, ವರ್ಷದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರು ಶತಕ ಸಿಡಿಸಿದರೆ, ಎಲ್ಲಾ ಮಾದರಿಯಲ್ಲು ಶತಕ ಸಿಡಿಸಿದಂತಾಗುತ್ತದೆ.
ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಕೇವಲ 1 ರನ್ ಗಳಿಸಿ ಔಟ್ ಆದರು. ಕೊಹ್ಲಿ ಎಡಗೈ ಸ್ಪಿನ್ನರ್ ವಿರುದ್ಧ ಆಟಲು ಕಷ್ಟಪಡುತ್ತಿದ್ದಾರೆ. 1100 ದಿನಗಳಿಂದ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿಲ್ಲ, ಅವರ ಕೊನೆಯ ಟೆಸ್ಟ್ ಶತಕ ಬಾಂಗ್ಲಾದೇಶದ ವಿರುದ್ಧವೇ ಬಂದಿತ್ತು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇದನ್ನು ಗಮನಿಸಿದ್ದು, ಕೊಹ್ಲಿಗೆ ಸಲಹೆ, ಸೂಚನೆ ನೀಡುವ ಸಾಧ್ಯತೆ ಇದೆ.

ರಿಷಬ್ ಪಂತ್ ಉತ್ತಮ ಅಭ್ಯಾಸ
ಏಕದಿನ ಮತ್ತು ಟಿ20 ಮಾದರಿಯಲ್ಲಿ ಸತತವಾಗಿ ವಿಫಲವಾದ ನಂತರ ರಿಷಬ್ ಪಂತ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ರನ್ ಗಳಿಸುವ ವಿಶ್ವಾಸದಲ್ಲಿದ್ದಾರೆ. ಅವರನ್ನು ತಂಡದ ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಅವರ ಸ್ಥಾನ ಅಪಾಯದಲ್ಲಿದೆ.
ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರು 46 ರನ್ ಗಳಿಸುವ ಮೂಲಕ ಆತ್ಮವಿಶ್ವಾಸ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ, ವಿಕೆಟ್ ಕೀಪಿಂಗ್‌ನಲ್ಲಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಎರಡನೇ ಟೆಸ್ಟ್‌ನಲ್ಲಿ ಸ್ಫೋಟಕ ಆಡಿದರೆ ಭಾರತಕ್ಕೆ ಮತ್ತೊಂದು ಗೆಲುವು ಸುಲಭವಾಗಲಿದೆ.

ಭಾರತ ತಂಡದ ಬಲಿಷ್ಠ ಬೌಲಿಂಗ್
ಮೊದಲನೇ ಟೆಸ್ಟ್‌ನಲ್ಲಿ ಭಾರತದ ಬೌಲಿಂಗ್ ವಿಭಾಗ ಸಾಕಷ್ಟು ಉತ್ತಮವಾಗಿ ಕೆಲಸ ಮಾಡಿತು. ರವಿಚಂದ್ರನ್ ಅಶ್ವಿನ್ ವಿಕೆಟ್ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 58 ರನ್ ಗಳಿಸಿದರು.
ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ಎರಡನೇ ಪಂದ್ಯದಲ್ಲಿ ಕೂಡ ಅದೇ ಪ್ರದರ್ಶನ ಮುಂದುವರೆಸಬೇಕಿದೆ. ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಕೂಡ ಎರಡನೇ ಟೆಸ್ಟ್‌ನಲ್ಲಿ ಕೂಡ ಸ್ಥಾನ ಪಡೆಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications