ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕನಾಗಿ ಬಾಬರ್ ಸಾಧನೆ ಶೂನ್ಯ: ಕೊಹ್ಲಿ ಜೊತೆ ಹೋಲಿಕೆಗೆ ಪಾಕ್ ಮಾಜಿ ಆಟಗಾರನೇ ಕಿಡಿ!

Danish Kaneria criticize Babar Azam said stop comparing him to Virat Kohli

ಪಾಕಿಸ್ತಾನ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತವರಿನಲ್ಲಿಯತೇ ಭಾರೀ ಮುಖಭಂಗವನ್ನು ಅನುಭವಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲಾ ಪಂದ್ಯುಗಳನ್ನು ಕೂಡ ಸೋತಿರುವ ಪಾಕಿಸ್ತಾನ ಮುಖಭಂಗವನ್ನು ಅನುಭವಿಸಿದೆ. ಈ ಸರಣಿ ಸೋಲಿನ ಬಳಿಕ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದ್ದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಕ್ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ತಂಡದ ನಾಯಕ ಬಾಬರ್ ಅಜಂ ವಿರುದ್ಧ ಕಿಡಿ ಕಾರಿದ್ದಾರೆ.

ಬಾಬರ್ ಅಜಂ ನಾಯಕತ್ವದ ಬಗ್ಗೆ ದಾನಿಶ್ ಕನೇರಿಯಾ ಕಟುವಾಗಿ ಟೀಕಿಸಿದ್ದು ನಾಯಕನಾಗಿ ಬಾಬರ್ ಅಜಂ ಸಾಧನೆ ಶೂನ್ಯ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಬಾಬರ್ ಅಜಂ ಅವರನ್ನು ಹೋಲಿಕೆ ಮಾಡುವ ಬಗ್ಗೆಯೂ ಕಟುವಾಗಿ ಮಾತನಾಡಿದ್ದು ಈ ರೀತಿ ಹೋಲಿಕೆ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.

ಪದಾರ್ಪಣಾ ಪಂದ್ಯದಲ್ಲಿ ದಾಖಲೆ ಬರೆದ ಇಂಗ್ಲೆಂಡ್ ಸ್ಪಿನ್ನರ್ ರೆಹಾನ್ ಅಹ್ಮದ್ಪದಾರ್ಪಣಾ ಪಂದ್ಯದಲ್ಲಿ ದಾಖಲೆ ಬರೆದ ಇಂಗ್ಲೆಂಡ್ ಸ್ಪಿನ್ನರ್ ರೆಹಾನ್ ಅಹ್ಮದ್

ಕೊಹ್ಲಿ-ರೋಹಿತ್ ರೀತಿಯ ಆಟಗಾರರೇ ಪಾಕಿಸ್ತಾನ ತಂಡದಲ್ಲಿಲ್ಲ

ಕೊಹ್ಲಿ-ರೋಹಿತ್ ರೀತಿಯ ಆಟಗಾರರೇ ಪಾಕಿಸ್ತಾನ ತಂಡದಲ್ಲಿಲ್ಲ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿನ ಸೋಲಿನ ಬಳಿಕ ದಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಜೊತೆಗೆ ಬಾಬರ್ ಅಜಂ ಅವರನ್ನು ಹೋಲಿಸುವುದನ್ನು ಅಭಿಮಾನಿಗಳು ನಿಲ್ಲಿಸಬೇಕು ಎಂದಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಪಾಕಿಸ್ತಾನ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂಥಾ ದೊಡ್ಡ ಆಟಗಾರರು ಯಾರೂ ಇಲ್ಲ ಎಂದಿದ್ದಾರೆ.

ಮಾತಿನಲ್ಲಿ ಕಿಂಗ್ ಆಟದಲ್ಲಿ ಶೂನ್ಯ!

ಮಾತಿನಲ್ಲಿ ಕಿಂಗ್ ಆಟದಲ್ಲಿ ಶೂನ್ಯ!

ದಾನಿಶ್ ಕನೇರಿಯಾ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. "ಜನರು ಬಾಬರ್ ಅಜಂ ಅವರನ್ನು ವಿರಾಟ್ ಕೊಹ್ಲಿ ಜೊತೆಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರು ಬಹಳ ದೊಡ್ಡ ಆಟಗಾರರು. ಇವರೊಂದಿಗೆ ಹೋಲಿಕೆ ಮಾಡಲು ಪಾಕಿಸ್ತಾನ ತಮಡದಲ್ಲಿ ಯಾವುದೇ ಆಟಗಾರ ಕೂಡ ಇಲ್ಲ. ಅವರನ್ನು ಮಾತನಾಡಲು ಬಿಟ್ಟರೆ ಅವರು ಕಿಂಗ್‌ಗಳಾಗುತ್ತಾರೆ. ಆದರೆ ಫಲಿತಾಂಶವನ್ನು ತನ್ನಿ ಎಂದು ಕೇಳಿದರೆ ಅವರ ಸಾಧನೆ ಶೂನ್ಯ" ಎಂದಿದ್ದಾರೆ ದಾನಿಶ್ ಕನೇರಿಯಾ.

ಪಾಕ್ ತಂಡವನ್ನು ಮುನ್ನಡೆಸಲು ಬಾಬರ್ ಅರ್ಹನಲ್ಲ

ಪಾಕ್ ತಂಡವನ್ನು ಮುನ್ನಡೆಸಲು ಬಾಬರ್ ಅರ್ಹನಲ್ಲ

ಮುಂದುವರಿದು ಮಾತನಾಡಿರುವ ಕನೇರಿಯಾ ಬಾಬರ್ ಅಜಂ ನಾಯಕನಾಗಿ ಸಾಧನೆ ಶೂನ್ಯ. ಅವರಿಗೆ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಅರ್ಹತೆಯಿಲ್ಲ. ವಿಶೇಷವಾಗಿ ಟೆಸ್ಟ್ ಮಾದರಿಯಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಬಾಬರ್ ಅಜಂ ಅವರಲ್ಲಿ ಇಲ್ಲ. ಈ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಹಾಗೂ ಮೆಕ್ಕಲಮ್ ಅವರಿಂದ ನಾಯಕತ್ವದ ಅಂಶಗಳನ್ನು ಕಲಿಯುವ ಉತ್ತಮ ಅವಕಾಶವನ್ನು ಅವರು ಹೊಂದಿದ್ದರು. ಅಥವಾ ತಮ್ಮ ಅಹಂ ಬದಿಗಿಟ್ಟು ಸರ್ಫರಾಜ್ ಬಳಿ ಯಾವ ರೀತಿ ತಂಡವನ್ನು ಮುನ್ನಡೆಸಬೇಕು ಎಂದು ಕೇಳಿ ತಿಳಿದುಕೊಳ್ಳಬಹುದಾಗಿತ್ತು" ಎಂದಿದ್ದಾರೆ ದಾನಿಶ್ ಕನೇರಿಯಾ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರೀ ಕುಸಿತ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರೀ ಕುಸಿತ

ಕರಾಚಿ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ ಸೋಲು ಅನುಭವಿಸುವುದರ ಜೊತೆಗೆ ಸರಣಿಯಲ್ಲಿ ವೈಟ್‌ವಾಶ್ ಅವಮಾನಕ್ಕೆ ತುತ್ತಾಯಿತು. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಭಾರೀ ಹಿನ್ನಡೆ ಅನುಭವಿಸಲು ಕೂಡ ಕಾರಣವಾಯಿತು. ಬಾಬರ್ ಅಜಂ ಪಡೆ ಈಗ 7ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 3ನೇ ಸ್ಥಾನದಲ್ಲಿದೆ.

Story first published: Tuesday, December 20, 2022, 14:01 [IST]
Other articles published on Dec 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X