IND vs BAN 2nd Test: ಎರಡು ಟೆಸ್ಟ್‌ನಲ್ಲಿ 15 ವಿಕೆಟ್ ಪಡೆದರೂ ಆಡುವ ಬಳಗದಲ್ಲಿ ಇಲ್ಲ ಸ್ಥಾನ

ಡಿಸೆಂಬರ್ 22ರಂದು ಗುರುವಾರ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆರಂಭವಾಗಲಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ 188 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲುವಿನ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್‌ಗೂ ಅದೇ ಆಡುವ ಬಳಗದೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ. ತಂಡದ ಈ ನಿರ್ಧಾರದಿಂದ, ಯುವ ಬೌಲರ್ ಸೌರಭ್ ಕುಮಾರ್ ಬೆಂಚ್ ಕಾಯುವುದನ್ನು ಮುಂದುವರೆಸಿದ್ದಾರೆ.
ಮೊದಲನೇ ಟೆಸ್ಟ್‌ನಲ್ಲಿ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಕುಲದೀಪ್ ಎರಡು ಇನ್ನಿಂಗ್ಸ್‌ಗಳಿಂದ ಒಟ್ಟು 8 ವಿಕೆಟ್ ಪಡೆದು, 40 ರನ್ ಗಳಿಸುವ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಅಕ್ಷರ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಪ್ರಭಾವಿ ಆಟಗಾರ ಎನಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ ಉತ್ತಮ ಬ್ಯಾಟರ್ ಕೂಡ ಆಗಿರುವುದರಿಂದ ಅವರು ಎರಡನೇ ಟೆಸ್ಟ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ. ಇದೆಲ್ಲದರ ಪರಿಣಾಮವಾಗಿ, ಎಡಗೈ ಸ್ಪಿನ್ ಬೌಲರ್ ಸೌರಭ್ ಕುಮಾರ್ ಎರಡನೇ ಟೆಸ್ಟ್‌ನಲ್ಲಿಯೂ ಬೆಂಚ್ ಕಾಯುವುದನ್ನು ಮುಂದುವರೆಸಲಿದ್ದಾರೆ.

ಎರಡು ಪಂದ್ಯಗಳಿಂದ 15 ವಿಕೆಟ್
ಸೌರಭ್ ಕುಮಾರ್ ಬಾಂಗ್ಲಾದೇಶ ಎ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಎರಡು ಪಂದ್ಯಗಳಿಂದ ಅವರು 15 ವಿಕೆಟ್ ಪಡೆಯುವ ಮೂಲಕ ಭಾರತ ಎ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಉತ್ತಮ ಪ್ರದರ್ಶನ ನೀಡಿದರೂ ಅವರು ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಿಲ್ಲ. ಸೌರಭ್ ಕುಮಾರ್ ಬದಲಿಗೆ ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದರು. ಎರಡು ವರ್ಷಗಳ ನಂತರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಕುಲದೀಪ್ ಯಾದವ್ ಆಯ್ಕೆದಾರರ ನಂಬಿಕೆ ಉಳಿಸಿಕೊಂಡರು.
ಪಾಕಿಸ್ತಾನ vs ಇಂಗ್ಲೆಂಡ್: ಅಂತಿಮ ಪಂದ್ಯವನ್ನಾಡಿದ ಅಜರ್ ಅಲಿಗೆ ಪಾಕ್ ಆಟಗಾರರಿಂದ ಗೌರವ

ಅವಕಾಶ ಪಡೆದುಕೊಂಡ ಕುಲದೀಪ್ ಯಾದವ್
ಕುಲದೀಪ್ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು ಮಾತ್ರವಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಅಮೂಲ್ಯವಾದ 40 ರನ್‌ಗಳನ್ನು ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 3 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಕುಲದೀಪ್ ಯಾದವ್ ಕೇವಲ 7 ಟೆಸ್ಟ್‌ಗಳಲ್ಲಿ 44 ವಿಕೆಟ್ ಪಡೆದಿದ್ದಾರೆ.
ರವಿಚಂದ್ರನ್ ಅಶ್ವಿನ್ ತಂಡದ ಅನುಭವಿ ಸ್ಪಿನ್ನರ್ ಆಗಿರುವುದರಿಂದ ಅವರು ಎರಡನೇ ಟೆಸ್ಟ್‌ನಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ. ಅಕ್ಷರ್ ಮತ್ತು ಕುಲದೀಪ್ ಯಾದವ್ ಕೂಡ ಎರಡನೇ ಟೆಸ್ಟ್‌ನಲ್ಲಿ ಆಡುವ ಬಳಗದಲ್ಲಿ ಇರಲಿದ್ದಾರೆ. ಆದ್ದರಿಂದ ಸೌರಭ್ ಕುಮಾರ್ ಭಾರತ ತಂಡಕ್ಕಾಗಿ ಆಡಲು ಇನ್ನೂ ಕೆಲವು ತಿಂಗಳು ಕಾಯಬೇಕಾಗುತ್ತದೆ.

ಸರಣಿಯಿಂದ ಹೊರಬಿದ್ದ ರೋಹಿತ್
ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಗಾಯಗೊಂಡಿದ್ದ ರೋಹಿತ್ ಶರ್ಮಾ ಈಗ 2ನೇ ಟೆಸ್ಟ್‌ನಿಂದ ಕೂಡ ಹೊರಗುಳಿಯಲಿದ್ದಾರೆ. ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಸರಣಿಯ 2ನೇ ಪಂದ್ಯದಲ್ಲಿ ರೋಹಿತ್ ಆಡುತ್ತಾರೆ ಎಂದು ಹೇಳಲಾಗಿತ್ತು. ಬಿಸಿಎ ವೈದ್ಯಕೀಯ ತಂಡದಿಂದ ಆರಂಭಿಕ ಅನುಮತಿ ಪಡೆದಿದ್ದರೂ, ರೋಹಿತ್ ಎರಡನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.
2ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಅಕ್ಷರ್ ಪಟೇಲ್, ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications