For Quick Alerts
ALLOW NOTIFICATIONS  
For Daily Alerts
 

Ind vs Ban 3rd ODI : 72ನೇ ಶತಕ ಗಳಿಸಿ ಬರೋಬ್ಬರಿ 5 ದಾಖಲೆಗಳನ್ನು ಮುರಿದ 'ಕಿಂಗ್ ಕೊಹ್ಲಿ'

Ind vs Ban 3rd ODI: 5 Records Broken In 3rd ODI After Kohli Century And Ishan Double Century

ಆಗಸ್ಟ್ 14, 2019ರ ನಂತರ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಶತಕವನ್ನು ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 72ನೇ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದರು.

ಮೂರು ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಅವರು ಏಷ್ಯಾಕಪ್‌ನಲ್ಲಿ ಟಿ20 ಮಾದರಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶತಕ ಗಳಿಸಿದ್ದರು. ಅಂತಾರಾಷ್ಟ್ರೀಯ ಮಾದರಿಯಲ್ಲ 71ನೇ ಶತಕ ಗಳಿಸಿ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದ ವಿರಾಟ್ ಕೊಹ್ಲಿ, ಬಾಂಗ್ಲಾದೇಶದ ವಿರುದ್ಧ ಶತಕ ಗಳಿಸಿ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದರು.

ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಮಾಡಲು ನಿರ್ಧರಿಸಿತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಶಿಖರ್ ಧವನ್ ಕೇವಲ 3 ರನ್ ಗಳಿಸಿ ಔಟಾದರು. ಐದು ಓವರ್ ಮುಕ್ತಾಯಕ್ಕೆ ಭಾರತ 17 ರನ್ ಗಳಿಸಿ ಮೊದಲ ವಿಕೆಟ್ ಕಳೆದುಕೊಂಡಿತ್ತು.

ನಂತರ ಒಂದಾದ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಅತ್ಯುತ್ತಮ ಜೊತೆಯಾಟ ಆಡಿದರು. ವಿರಾಟ್ ಕೊಹ್ಲಿ 7ನೇ ಓವರ್ ನಲ್ಲಿ ಜೀವದಾನ ಪಡೆದರು. ವಿರಾಟ್ ಕೊಹ್ಲಿ ನೀಡಿದ ಕ್ಯಾಚ್‌ ಅನ್ನು ಬಾಂಗ್ಲಾದೇಶ ನಾಯಕ ಲಿಟ್ಟನ್ ದಾಸ್ ಕೈಚೆಲ್ಲಿದರು. ಇದರ ಲಾಭ ಪಡೆದ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ಇಶಾನ್ ಕಿಶನ್ ಮತ್ತು ಕೊಹ್ಲಿ ಇಬ್ಬರೂ ತಮ್ಮ ಜೊತೆಯಾಟದಲ್ಲಿ ಅನೇಕ ದಾಖಲೆಗಳನ್ನು ಮುರಿದರು.

ಬಾಂಗ್ಲಾದೇಶದ ವಿರುದ್ಧ ಹೆಚ್ಚು ರನ್

ಬಾಂಗ್ಲಾದೇಶದ ವಿರುದ್ಧ ಹೆಚ್ಚು ರನ್

ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡರು. ಬಾಂಗ್ಲಾದೇಶದ ವಿರುದ್ಧ 15 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 807 ರನ್ ಗಳಿಸಿದ್ದಾರೆ. ಅವರು ಬಾಂಗ್ಲಾದೇಶದ ವಿರುದ್ಧ ಒಟ್ಟು 4 ಏಕದಿನ ಶತಕಗಳನ್ನು ಗಳಿಸಿದ್ದಾರೆ.

ಈ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದರು. ರೋಹಿತ್ ಶರ್ಮಾ 15 ಇನ್ನಿಂಗ್ಸ್‌ಗಳಲ್ಲಿ ಒಟ್ಟು 738 ರನ್ ಗಳಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಮೂರನೇ ಏಕದಿನ ಪಂದ್ಯದಲ್ಲಿ ಆಡಲಿಲ್ಲ.

Ind vs Ban 3rd ODI : ಇಶಾನ್ ಕಿಶನ್ ದಾಖಲೆಯ ದ್ವಿಶತಕ, ಕೊಹ್ಲಿ 72ನೇ ಶತಕ, 409 ರನ್ ಕಲೆಹಾಕಿದ ಟೀಂ ಇಂಡಿಯಾ

ಮೂರು ಮಾದರಿಯಲ್ಲಿ ಹೆಚ್ಚಿನ ರನ್

ಮೂರು ಮಾದರಿಯಲ್ಲಿ ಹೆಚ್ಚಿನ ರನ್

ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಎಲ್ಲಾ ಮೂರು ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗ ಎನ್ನುವ ದಾಖಲೆ ಮಾಡಿದ್ದಾರೆ. ಮಾಜಿ ಕ್ರಿಕೆಟಿಗ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ಹಿಂದೆ 1,316 ರನ್ ಗಳಿಸಿ ಈ ದಾಖಲೆಯನ್ನು ಹೊಂದಿದ್ದರು.

3ನೇ ಏಕದಿನ ಪಂದ್ಯದಲ್ಲಿ 91 ಎಸೆತಗಳಲ್ಲಿ 113 ರನ್ ಗಳಿಸಿದ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದರು. ಎಲ್ಲಾ ಮಾದರಿಯಲ್ಲಿ ಬಾಂಗ್ಲಾದೇಶದ ವಿರುದ್ಧ 25 ಇನ್ನಿಂಗ್ಸ್‌ಗಳಲ್ಲಿ 1,392 ರನ್ ಗಳಿಸಿದ್ದಾರೆ. 25 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಬ್ಯಾಟಿಂಗ್ ಸರಾಸರಿ 73.26.

ಕಡಿಮೆ ಇನ್ನಿಂಗ್ಸ್‌ನಲ್ಲಿ ವೇಗದ ಶತಕ

ಕಡಿಮೆ ಇನ್ನಿಂಗ್ಸ್‌ನಲ್ಲಿ ವೇಗದ ಶತಕ

ವಿರಾಟ್ ಕೊಹ್ಲಿ ತಮ್ಮ 44ನೇ ಏಕದಿನ ಶತಕವನ್ನು ಗಳಿಸಿದರು. ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಎರಡನೇ ಆಟಗಾರ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಆದರೆ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 44ನೇ ಶತಕವನ್ನು ಗಳಿಸಲು 418 ಇನ್ನಿಂಗ್ಸ್ ತೆಗೆದುಕೊಂಡರೆ, ವಿರಾಟ್ ಕೊಹ್ಲಿ ತಮ್ಮ 256ನೇ ಇನ್ನಿಂಗ್ಸ್‌ನಲ್ಲಿ 44ನೇ ಶತಕ ಗಳಿಸಿದರು. ಅತಿ ವೇಗವಾಗಿ 44ನೇ ಶತಕ ದಾಖಲಿಸಿದ ಆಟಗಾರ ಎನ್ನಿಸಿಕೊಂಡಿದ್ದಾರೆ.

ಅತ್ಯಧಿಕ ರನ್‌ರೇಟ್‌ನಲ್ಲಿ ಜೊತೆಯಾಟ

ಅತ್ಯಧಿಕ ರನ್‌ರೇಟ್‌ನಲ್ಲಿ ಜೊತೆಯಾಟ

ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 31.4 ಓವರ್‌ಗಳಲ್ಲಿ 290 ರನ್ ಕಲೆಹಾಕಿದರು. ಇವರಿಬ್ಬರೂ 9.15 ರನ್‌ ರೇಟ್‌ ಕಾಪಾಡಿಕೊಳ್ಳುವ ಮೂಲಕ ಮತ್ತೊಂದು ದಾಖಲೆ ಬರೆದರು.

ಈ ಮೊದಲು ಸನತ್ ಜಯಸೂರ್ಯ ಮತ್ತು ಉಪುಲ್ ತರಂಗ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದರು. ಸನತ್ ಜಯಸೂರ್ಯ ಮತ್ತು ಉಪುಲ್ ತರಂಗ 2006ರಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ 8.98 ರನ್ ರೇಟ್‌ನಲ್ಲಿ 31.5 ಓವರ್‌ಗಳಲ್ಲಿ 286 ರನ್‌ಗಳ ಜೊತೆಯಾಟ ಆಡಿದ್ದರು.

ಭಾರತದ ಪರ ವಿಶ್ವದಾಖಲೆಯ ಜೊತೆಯಾಟ

ಭಾರತದ ಪರ ವಿಶ್ವದಾಖಲೆಯ ಜೊತೆಯಾಟ

ಇಶಾನ್ ಕಿಶನ್ ಮತ್ತು ಕೊಹ್ಲಿ ಎದುರಾಳಿ ತಂಡದ ತವರು ನೆಲದಲ್ಲಿ ಆಡಿದ ಏಕದಿನ ಪಂದ್ಯವೊಂದರಲ್ಲಿ ಅತ್ಯಧಿಕ ಜೊತೆಯಾಟ ಆಡಿದ ದಾಖಲೆ ನಿರ್ಮಿಸಿದರು. ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಈ ಜೋಡಿ ಮುರಿಯಿತು.

1998ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಗಂಗೂಲಿ ಮತ್ತು ತೆಂಡೂಲ್ಕರ್ 252 ರನ್ ಆರಂಭಿಕ ಜೊತೆಯಾಟವನ್ನು ಹೊಂದಿದ್ದರು. ಬಾಂಗ್ಲಾದೇಶದ ವಿರುದ್ಧ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 290 ರನ್ ಸೇರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

Story first published: Saturday, December 10, 2022, 18:49 [IST]
Other articles published on Dec 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+