Ind vs Eng 1st ODI: ಏಕದಿನ ಕ್ರಿಕೆಟ್‌ನಲ್ಲಿ 5,000ರನ್‌ಗಳ ಜೊತೆಯಾಟ ಪೂರೈಸಿದ ರೋಹಿತ್-ಧವನ್ ಜೋಡಿ

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಮತ್ತೆ ಒಂದಾಗಿದ್ದು, ಉತ್ತಮ ಜೊತೆಯಾಟದ ಮೂಲಕ ತಂಡವನ್ನ ಗೆಲುವಿನತ್ತ ಕೊಂಡೊಯ್ದರು. ಏಕದಿನ ಕ್ರಿಕೆಟ್‌ನಲ್ಲಿ ಬೆಸ್ಟ್ ಜೋಡಿಗಳಲ್ಲಿ ಒಂದಾದ ರೋಹಿತ್ ಹಾಗೂ ಧವನ್ ದಾಖಲೆಯ ಮೈಲುಗಲ್ಲು ತಲುಪಿದ್ದಾರೆ.
ಭಾರತದ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉದುರಿದ ಇಂಗ್ಲೆಂಡ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಬುಮ್ರಾ-ಶಮಿ ಬೌಲಿಂಗ್‌ಗೆ ಮುಗ್ಗರಿಸಿದ ಆಂಗ್ಲರು 25.2 ಓವರ್‌ಗಳಲ್ಲಿ ಕೇವಲ 110ರನ್‌ಗಳಿಗೆ ಆಲೌಟ್ ಆದ್ರು. ಜಸ್ಪ್ರೀತ್ ಬುಮ್ರಾ ವೃತ್ತಿಜೀವನದ ಬೆಸ್ಟ್ ಬೌಲಿಂಗ್ ಮಾಡಿದ್ದು 19ರನ್ ನೀಡಿ 6 ವಿಕೆಟ್ ಉರುಳಿಸಿದ್ರು. ಶಮಿ 3 ವಿಕೆಟ್ ಪಡೆದಿದ್ದು, ಪ್ರಸಿದ್ಧ ಕೃಷ್ಣ 1 ವಿಕೆಟ್ ಸಂಪಾದಿಸಿದರು.
ಇನ್ನು ಇಂಗ್ಲೆಂಡ್ ನೀಡಿದ್ದ 111ರನ್‌ಗಳ ಗುರಿ ಬೆನ್ನತ್ತಿದ ಭಾರತವು, ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿತು. ಶತಕದ ಜೊತೆಯಾಟವಾಡಿದ ಈ ಜೋಡಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ 5000ರನ್‌ಗಳ ಗಡಿಯನ್ನು ಸಹ ದಾಟಿದೆ.

ಈ ದಾಖಲೆಯ ಮೂಲಕ ರೋಹಿತ್ ಮತ್ತು ಧವನ್ ಏಕದಿನ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದ ಭಾರತದ ಎರಡನೇ ಆರಂಭಿಕ ಜೋಡಿಯಾಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ದರು.
ಒಡಿಐನಲ್ಲಿ ಮೊದಲ ವಿಕೆಟ್‌ಗೆ ಅತಿ ಹೆಚ್ಚು ರನ್‌ಗಳ ಜೊತೆಯಾಟ ಈ ಕೆಳಗಿದೆ
6609 ಸಚಿನ್ ತೆಂಡೂಲ್ಕರ್ - ಸೌರವ್ ಗಂಗೂಲಿ (ಭಾರತ)
5372 ಆ್ಯಡಂ ಗಿಲ್‌ಕ್ರಿಸ್ಟ್ - ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
5150 ಡೆಸ್ಮಾಂಡ್ ಹೇನ್ಸ್ - ಜಿ ಗ್ರೀನಿಡ್ಜ್ (ವೆಸ್ಟ್ ಇಂಡೀಸ್)
5108 ರೋಹಿತ್ ಶರ್ಮಾ - ಶಿಖರ್ ಧವನ್ (ಭಾರತ)
ಇದರ ಜೊತೆಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ 18ನೇ ಬಾರಿಗೆ ಶತಕದ ಜೊತೆಯಾಟವಾಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟವಾಡಿದ ಮೂರನೇ ಜೋಡಿ ಇದಾಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications