
ರೋಹಿತ್ ಶರ್ಮಾ ಅಬ್ಬರದ ಸಿಕ್ಸರ್, ಬಾಲಕಿಗೆ ಬಡಿಯಿತು ಚೆಂಡು
ತನ್ನ ಇನ್ನಿಂಗ್ಸ್‌ನಲ್ಲಿ ಐದು ಭರ್ಜರಿ ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಇಂಗ್ಲೆಂಡ್ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು. 131.03 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ರೋಹಿತ್ 58 ಎಸೆತಗಳಲ್ಲಿ ಅಜೇಯ 76 ರನ್ ಕಲೆಹಾಕಿದರು.
ಪಂದ್ಯದ ಐದನೇ ಓವರ್‌ನಲ್ಲಿ ಡೇವಿಡ್ ವಿಲ್ಲಿ ಬೌಲಿಂಗ್‌ನಲ್ಲಿ ಶಾರ್ಟ್ ಬಾಲ್‌ಗೆ ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಅಗ್ರೆಸ್ಸಿವ್ ಆಗಿ ಸ್ಟ್ಯಾಂಡ್ಸ್‌ನತ್ತ ಶಾಟ್ ಹೊಡೆದರು. ಅಂಪೈರ್ ಸಿಕ್ಸರ್ ಎಂದು ಸಿಗ್ನಲ್ ನೀಡಿದ ಬಳಿಕ ಕ್ಯಾಮೆರಾ ಕಣ್ಣು ಚೆಂಡು ಬಿದ್ದ ಸ್ಥಳವನ್ನ ತೋರಿಸಿತು. ಈ ಸಮಯದಲ್ಲಿ ವೀಕ್ಷಕರೊಬ್ಬರು ತನ್ನ ಮಗಳಿಗೆ ಚೆಂಡು ತಾಗಿದ್ದರ ಪರಿಣಾಮ ಆಕೆಯನ್ನ ಸಮಧಾನ ಮಾಡುತ್ತಿರುವ ದೃಶ್ಯ ಕಂಡುಬಂದಿತು.
IND vs ENG: ಭಾರತದ ಈ ಜೋಡಿ ಮುಂದೆ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮ ಜೋಡಿ ಇಲ್ಲ; ವೀರೇಂದ್ರ ಸೆಹ್ವಾಗ್
ಇಂಗ್ಲೆಂಡ್ ತಂಡದ ಫಿಸಿಯೋ ಮತ್ತು ಡಾಕ್ಟರ್ ಸ್ಥಳಕ್ಕೆ ಧಾವಿಸಿದ್ರು!
ಬಾಲಕಿಗೆ ಚೆಂಡು ಬಡಿತ ಪರಿಣಾಮ ಕೆಲಕ್ಷಣ ಪಂದ್ಯ ಸ್ಥಗಿತಗೊಂಡಿತ್ತು. ಕಮೆಂಟೇಟರ್ಸ್ ರವಿಶಾಸ್ತ್ತಿ ಮತ್ತು ಮಾಜಿ ಇಂಗ್ಲೆಂಡ್ ಬ್ಯಾಟರ್ ಮೈಕಲ್ ಅಥರ್ಟನ್ ಚೆಂಡು ಬಾಲಕಿಗೆ ಬಡಿದಿದೆಎ ಎಂಬುದನ್ನ ತಿಳಿಸಿದರು. ಪರಿಣಾಮ ತಕ್ಷಣವೇ ಇಂಗ್ಲೆಂಡ್ ತಂಡದ ಫಿಸಿಯೋ ಮತ್ತು ಡಾಕ್ಟರ್ ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಪರೀಕ್ಷಿಸಿದರು. ಅದೃಷ್ಟವಶಾತ್ ಆ ಬಾಲಕಿಗೆ ಗಂಭೀರ ಪ್ರಮಾಣದ ಗಾಯವಾಗಿಲ್ಲ.
Breaking News: ಅಜಿತ್ ಅಗರ್ಕರ್ ಹೆಸರಲ್ಲಿದ್ದ 20 ವರ್ಷಗಳ ಹಿಂದಿನ ದಾಖಲೆ ಮುರಿದ ಮೊಹಮ್ಮದ್ ಶಮಿ

ಮುರಿಯದ ಜೊತೆಯಾಟವಾಡಿದ ರೋಹಿತ್ -ಧವನ್
ಇಂಗ್ಲೆಂಡ್ ನೀಡಿದ್ದ 111ರನ್‌ಗಳ ಗುರಿಯನ್ನ ಭಾರತದ ಆರಂಭಿಕ ಜೋಡಿ ರೋಹಿತ್ ಹಾಗೂ ಧವನ್ ಮುರಿಯದ ಜೊತೆಯಾಟವಾಡುವ ಮೂಲಕ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ರೋಹಿತ್ ಶರ್ಮಾ ಅಜೇಯ 76ರನ್ ಮತ್ತು ಶಿಖರ್ ಧವನ್ ಅಜೇಯ 31 ರನ್ ಕಲೆಹಾಕುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಈ ಮುರಿಯದ ಜೊತೆಯಾಟದ ಜೊತೆಗೆ ಈ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ 5,000ರನ್‌ಗಳ ಜೊತೆಯಾಟವಾಡಿದ ನಾಲ್ಕನೇ ಜೋಡಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಚಿನ್ ಹಾಗೂ ಗಂಗೂಲಿ ಬಳಿಕ ಭಾರತದ ಎರಡನೇ ಜೊತೆಗಾಟರರಾಗಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಒಡಿಐನಲ್ಲಿ ಮೊದಲ ವಿಕೆಟ್‌ಗೆ 6609 ರನ್ ಕಲೆಹಾಕಿದ್ದಾರೆ. ರೋಹಿತ್ ಹಾಗೂ ಧವನ್ ಏಕದಿನ ಕ್ರಿಕೆಟ್‌ನಲ್ಲಿ 18ನೇ ಬಾರಿಗೆ ಶತಕದ ಜೊತೆಯಾಟವಾಡಿದ್ದು, 5108 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟವಾಡಿದ ಮೂರನೇ ಜೋಡಿ ಇದಾಗಿದೆ.
ಟೀಂ ಇಂಡಿಯಾ ಇಂಗ್ಲೆಂಡ್ ನೀಡಿದ್ದ ಗುರಿಯನ್ನ ಕೇವಲ 18.4 ಓವರ್‌ಗಳಲ್ಲಿ ತಲುಪಿರುವುದು ವಿಶೇಷವಾಗಿದೆ.


Click it and Unblock the Notifications












