
ಪೆವಿಲಿಯನ್ ಪರೇಡ್ ನಡೆಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ಸ್
ಇಂಗ್ಲೆಂಡ್‌ನ ಟಾಪ್ ಆರ್ಡರ್ ನಾಲ್ವರು ಬ್ಯಾಟ್ಸ್‌ಮನ್‌ಗಳ ಪೈಕಿ ಮೂವರು ಶೂನ್ಯಕ್ಕೆ ಔಟಾಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ ಟೆಸ್ಟ್‌ನ ಶತಕದಾರಿ ಜಾನಿ ಬೈಸ್ಟ್ರೋವ್ ಕೇವಲ 7ರನ್‌ಗೆ ಔಟಾಗಿ ನಾಲ್ಕನೇ ಬಲಿಯಾಗಿ ಡಗೌಟ್ ಸೇರಿದರು.
ಪಂದ್ಯದ ಎರಡನೇ ಓವರ್‌ನಲ್ಲಿ ಜೇಸನ್ ರಾಯ್ ಮತ್ತು ಜೋ ರೂಟ್ ವಿಕೆಟ್ ಎಗರಿಸಿದ ಬುಮ್ರಾ ಮೇಡನ್ ಓವರ್ ಸಹಿತ ಬೊಂಬಾಟ್ ಆರಂಭ ನೀಡಿದ್ರು. ಇದ್ರ ನಂತರದ ಓವರ್‌ನಲ್ಲಿ ಮೊಹಮ್ಮದ್ ಶಮಿ ಬೆನ್ ಸ್ಟೋಕ್ಸ್ ಅನ್ನು ಶೂನ್ಯಕ್ಕೆ ತನ್ನ ಬಲೆಯಲ್ಲಿ ಕೆಡವಿದ್ರು. ಈ ಮೂಲಕ ಇಂಗ್ಲೆಂಡ್‌ನ ಅಗ್ರ ನಾಲ್ಕರಲ್ಲಿ ಮೂವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಇದಾದ ಬಳಿಕ ಜಾನಿ ಬೈಸ್ಟ್ರೋವ್ 7ರನ್‌ಗಳಿಸಿ ಬುಮ್ರಾಗೆ ಬಲಿಯಾದ್ರೆ, ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಶೂನ್ಯಕ್ಕೆ ಔಟಾದರು. ಕೊಂಚ ಹೋರಾಟ ಪ್ರದರ್ಶಿಸಿದ ಮೊಯಿನ್ ಅಲಿ 14 ರನ್ ಕಲೆಹಾಕಿದ್ದಾರೆ. ನಾಯಕ ಜಾಸ್ ಬಟ್ಲರ್ 30ರನ್‌ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದ್ರೆ, ಕ್ರೆಗ್ ಓವರ್ಟನ್ 8ರನ್‌ಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಬುಮ್ರಾ 4, ಶಮಿ 3, ಪ್ರಸಿದ್ಧ ಕೃಷ್ಣ 1 ವಿಕೆಟ್ ಪಡೆದರು.
Breaking News: 0,0,0,7,0, ಭಾರತದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ಸ್ ತತ್ತರ
ವೇಗವಾಗಿ 150 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ
ಹೌದು ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಬೌಲರ್ ಎಂಬ ಸಾಧನೆಯನ್ನು ಮೊಹಮ್ಮದ್ ಶಮಿ ಮಾಡಿದ್ದಾರೆ. ಈ ಪಂದ್ಯಕ್ಕೂ ಮೊದಲು 79 ಪಂದ್ಯಗಳಲ್ಲಿ 148 ವಿಕೆಟ್ ಪಡೆದಿದ್ದ ಶಮಿ, ಬೆನ್ ಸ್ಟೋಕ್ಸ್ ಮತ್ತು ಜಾಸ್ ಬಟ್ಲರ್ ವಿಕೆಟ್ ಪಡೆಯುತ್ತಿದ್ದಂತೆ 80 ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಬೌಲರ್‌ಗಳಲ್ಲಿ ಶಮಿ ಮೂರನೇ ಸ್ಥಾನಕ್ಕೇರಿದ್ದು, ಅಫ್ಘಾನಿಸ್ತಾನ ರಶೀದ್ ಖಾನ್ ಜೊತೆಗೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಇಷ್ಟಲ್ಲದೆ ಭಾರತದ ಲೆಜೆಂಡರಿ ಬೌಲರ್ ಅಜಿತ್ ಅಗರ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನ ಮುರಿದು ವೇಗವಾಗಿ 150 ವಿಕೆಟ್ ಪಡೆದ ಭಾರತದ ಬೌಲರ್ ಆಗಿದ್ದಾರೆ. ಈ ಹಿಂದೆ ಅಜಿತ್ ಅಗರ್ಕರ್ 97 ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಕಡಿಮೆ ಏಕದಿನ ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಬೌಲರ್ಸ್
77 ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
78 ಸಕ್ಲೈನ್ ಮುಷ್ತಾಕ್ (ಪಾಕಿಸ್ತಾನ)
80 ರಶೀದ್ ಖಾನ್/ ಮೊಹಮ್ಮದ್ ಶಮಿ
81 ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
82 ಬ್ರೆಟ್ ಲೀ (ಆಸ್ಟ್ರೇಲಿಯಾ

ಕೆನ್ನಿಂಗ್ಟನ್ ಓವಲ್‌ನಲ್ಲಿ 150ನೇ ವಿಕೆಟ್ ಪಡೆದಿದ್ದ ಅಗರ್ಕರ್
ಕಾಕತಾಳೀಯ ವಿಚಾರ ಅಂದ್ರೆ 20 ವರ್ಷಗಳ ಹಿಂದೆ ಭಾರತದ ಬೌಲರ್ ಅಜಿತ್ ಅಗರ್ಕರ್ ಇದೇ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ 150ನೇ ವಿಕೆಟ್ ಪಡೆದಿದ್ದರು. 2002ರಲ್ಲಿ ನಡೆದ ನ್ಯಾಟ್‌ವೆಸ್ಟ್ ಸೀರೀಸ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅಜಿತ್ ಅಗರ್ಕರ್ ಮೂರು ವಿಕೆಟ್ ಕಬಳಿಸುವುದರ ಜೊತೆಗೆ ಈ ಮೈಲಿಗಲ್ಲನ್ನು ತಲುಪಿದ್ದರು. ಅಗರ್ಕರ್ 97ನೇ ಪಂದ್ಯದಲ್ಲಿ 150 ವಿಕೆಟ್ ಪಡೆದಿದ್ದು, ಶಮಿ ಕೇವಲ 80 ಪಂದ್ಯಗಳಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ.
ಸಚಿನ್, ABD ಹೆಸರಲ್ಲಿರುವ ಈ ವಿಶ್ವದಾಖಲೆ ಮುರಿಯಲು ರೋಹಿತ್‌ಗೆ ಸೂಪರ್ ಅವಕಾಶ

ಅತ್ಯಂತ ಕಡಿಮೆ ಎಸೆತಗಳಲ್ಲಿ 150 ಒಡಿಐ ವಿಕೆಟ್ ಪಡೆದ ಶಮಿ
ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 150 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಶಮಿ 4071 ಎಸೆತಗಳಲ್ಲಿ 150 ವಿಕೆಟ್ ಕಬಳಿಸಿದ್ದು, ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಕಡಿಮೆ ಎಸೆತಗಳಲ್ಲಿ 150 ವಿಕೆಟ್ ಪಡೆದ ಬೌಲರ್ಸ್
3857 ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
4029 ಅಜಂತಾ ಮೆಂಡಿಸ್ (ಶ್ರೀಲಂಕಾ)
4035 ಸಕ್ಲೈನ್ ಮುಷ್ತಾಕ್ (ಪಾಕಿಸ್ತಾನ)
4040 ರಶೀದ್ ಖಾನ್ (ಅಫ್ಘಾನಿಸ್ತಾನ)
4071 ಮೊಹಮ್ಮದ್ ಶಮಿ (ಭಾರತ)


Click it and Unblock the Notifications












