Ind vs Eng 2nd ODI: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಪ್ಲೇಯಿಂಗ್ 11, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್

ಮೊದಲ ಏಕದಿನ ಪಂದ್ಯವನ್ನ ಭರ್ಜರಿಯಾಗಿ ಗೆದ್ದು ಬೀಗಿರುವ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸಲು ಸಜ್ಜಾಗಿದೆ. ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಆತಿಥೇಯರನ್ನ 110ರನ್‌ಗಳಿಗೆ ಆಲೌಟ್ ಮಾಡಿರುವ ಟೀಂ ಇಂಡಿಯಾ, ಸುಲಭವಾಗಿ ಗುರಿ ತಲುಪಿ 10 ವಿಕೆಟ್‌ಗಳ ಗೆಲುವು ಸಾಧಿಸಿದೆ. ಹೀಗಾಗಿ ಎರಡನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸಿ ಸರಣಿ ಜಯಿಸುವ ಪಣತೊಟ್ಟಿದೆ. ಮತ್ತೊಂದೆಡೆ ಇಂಗ್ಲೆಂಡ್‌ಗೆ ಸರಣಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನ ಗೆಲ್ಲುವುದು ಅನಿವಾರ್ಯವಾಗಿದೆ.

ಪಿಚ್ ರಿಪೋರ್ಟ್ ಮತ್ತು ಹವಾಮಾನ
ಲಾರ್ಡ್ಸ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ರನ್ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವ ಸಾಧ್ಯತೆಯಿದೆ. ಪಂದ್ಯದ ಅರ್ಧ ಅವದಿಯ ಬಳಿಕ ಪೇಸರ್‌ಗಳಿಗೆ ಪಿಚ್ ನೆರವಾಗುವ ಸಾಧ್ಯತೆ ಹೆಚ್ಚಿದೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಕೂಡ ಪರಿಣಾಮಕಾರಿಯಾಗಬಲ್ಲರು.
ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 266 ಆಗಿದ್ದು, ಮಳೆ ಬರುವ ಸಾಧ್ಯತೆ ಕಡಿಮೆ ಇದೆ. ಇಲ್ಲಿನ ಹವಾಮಾನ 24 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 33ರಷ್ಟು ಹ್ಯುಮಿಡಿಟಿ ಇರಲಿದೆ ಮತ್ತು 19/km ವೇಗದಲ್ಲಿ ಗಾಳಿ ಬೀಸಲಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರೇಗ್ ಓವರ್‌ಟನ್, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸೆ, ರೀಸ್ ಟೋಪ್ಲಿ
ಭಾರತ: ರೋಹಿತ್ ಶರ್ಮಾ(ನಾಯಕ) ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ
ಐಸಿಸಿ ರ‍್ಯಾಂಕಿಂಗ್: ಏಕದಿನ ಬೌಲರ್‌ಗಳಲ್ಲಿ ಬೂಮ್ರಾ ನಂಬರ್ 1, ಟಿ20ಯಲ್ಲಿ ಸೂರ್ಯಕುಮಾರ್ ನಂಬರ್ 5

ಫ್ಯಾಂಟೆಸಿ ಡ್ರೀಂ ಟೀಮ್ 1
ನಾಯಕ- ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ
ಉಪನಾಯಕ - ಜೋಸ್ ಬಟ್ಲರ್, ಜೋ ರೂಟ್ ಕೀಪರ್ - ಜೋಸ್ ಬಟ್ಲರ್ (ಉಪನಾಯಕ), ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಜೋ ರೂಟ್
ಆಲ್ ರೌಂಡರ್‌ಗಳು - ಮೊಯಿನ್ ಅಲಿ, ಹಾರ್ದಿಕ್ ಪಾಂಡ್ಯ
ಬೌಲರ್‌ಗಳು - ಜಸ್ಪ್ರೀತ್ ಬುಮ್ರಾ (ನಾಯಕ), ಮೊಹಮ್ಮದ್ ಶಮಿ, ಡೇವಿಡ್ ವಿಲ್ಲಿ
3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!

ಫ್ಯಾಂಟೆಸಿ ಡ್ರೀಂ ಟೀಮ್ 2
ಕೀಪರ್ - ಜೋಸ್ ಬಟ್ಲರ್, ಜಾನಿ ಬೈರ್ಸ್ಟೋವ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಸೂರ್ಯಕುಮಾರ್ ಯಾದವ್, ಜೋ ರೂಟ್ (ಉಪನಾಯಕ)
ಆಲ್ ರೌಂಡರ್ಸ್ - ಹಾರ್ದಿಕ್ ಪಾಂಡ್ಯ, ಬೆನ್ ಸ್ಟೋಕ್ಸ್
ಬೌಲರ್‌ಗಳು - ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಡೇವಿಡ್ ವಿಲ್ಲಿ

ಪಂದ್ಯದ ಪ್ರೆಡಿಕ್ಷನ್ ಮತ್ತು ಡ್ರೀಂ ಟೀಮ್ ಕಾಂಬಿನೇಷನ್
ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ/Dream11 ಕಾಂಬಿನೇಷ್ 2-4-2-3 ಆಗಿದೆ. ಎರಡೂ ತಂಡಗಳು ಕಾಂಬಿನೇಷನ್ ನೋಡಿದ್ರೆ, ಟೀಂ ಇಂಡಿಯಾ ಈ ಪಂದ್ಯವನ್ನೂ ಗೆಲ್ಲುವ ಅವಕಾಶ ಹೆಚ್ಚಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡವು ಗೆಲ್ಲುವ ಅವಕಾಶ ಹೆಚ್ಚಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ಬೆನ್ ಸ್ಟೋಕ್ಸ್ ಪ್ರಮುಖ ಆಯ್ಕೆಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications