ಮತ್ತೊಮ್ಮೆ ಕೆಟ್ಟದಾಗಿ ಔಟಾದ ವಿರಾಟ್ ಕೊಹ್ಲಿ: ಇನ್ನೆಷ್ಟು ಚಾನ್ಸ್ ಕೊಡಬೇಕು ಎಂದ ನೆಟ್ಟಿಗರು!

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದು ಭರ್ಜರಿ ಗೆಲುವು ಸಾಧಿಸಿದ್ದು, ಆಂಗ್ಲರ ವಿರುದ್ಧ ಸರಣಿ ಗೆದ್ದು ಬೀಗಿದೆ. ಆದ್ರೆ ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಿಂದ ಮತ್ತೊಮ್ಮೆ ಔಟಾಗಿದ್ದು, ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಜೋಸ್ ಬಟ್ಲರ್ ಟಾಸ್ ಗೆದ್ದು, ಮೊದಲು ಬೌಲ್ ಮಾಡಲು ಆಯ್ಕೆ ಮಾಡಿದರು. ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಓಪನರ್ಸ್ ಆಗಿ ಕಣಕ್ಕಿಳಿದರು. ಇಬ್ಬರೂ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಪವರ್ ಪ್ಲೇನಲ್ಲಿ ಉತ್ತಮ ಸ್ಕೋರ್ ಪಡೆಯಲು ಸಾಧ್ಯವಾಯಿತು. ರೋಹಿತ್ ಶರ್ಮಾ 31ರನ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ 26ರನ್‌ಗೆ ವಿಕೆಟ್ ಒಪ್ಪಿಸಿದ್ರು. ಇದರ ನಡುವೆ ವಿರಾಟ್ ಕೊಹ್ಲಿ ಕೆಟ್ಟದಾಗಿ ಔಟಾಗಿದ್ದು, ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.

ಚೊಚ್ಚಲ ಪಂದ್ಯದಲ್ಲಿ ಮಿಂಚಿದ ರಿಚರ್ಡ್ ಗ್ಲೀಸನ್
ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲಿ ಮಿಂಚಿದ ಇಂಗ್ಲೆಂಡ್ ರಿಚರ್ಡ್ ಗ್ಲೀಸನ್ ಮೂರು ವಿಕೆಟ್ ಪಡೆದು ಅಬ್ಬರಿಸಿದರು. ಮೊದಲಿಗೆ ಕೀಪರ್ ಬಟ್ಲರ್‌ನ ಅದ್ಭುತ ಕ್ಯಾಚ್‌ಗಾಗಿ ರೋಹಿತ್ (31 ರನ್, 20 ಎಸೆತಗಳು, 3 ಬೌಂಡರಿಗಳು, 2 ಸಿಕ್ಸರ್‌ಗಳು) ಔಟಾದರು. ಇದು 49 ರನ್ ಮೊದಲ ವಿಕೆಟ್ ಜೊತೆಯಾಟ ಮುರಿಯಿತು. ಇದಾದ ಬಳಿಕ ವಿರಾಟ್ ಕೊಹ್ಲಿ ತಂಡಕ್ಕೆ ಆಧಾರವಾಗುವಲ್ಲಿ ವಿಫಲರಾದ್ರು. ರಿಚರ್ಡ್ ಗ್ಲೈಸನ್ ಅವರ 7 ನೇ ಓವರ್‌ನ ಮೊದಲ ಚೆಂಡನ್ನು ಅಸಡ್ಡೆ ರೀತಿಯಲ್ಲಿ ಹೊಡೆದ ಕೊಹ್ಲಿ ಹೊಡೆತವನ್ನ, ಡೇವಿಡ್ ಮಲನ್ ಕ್ಯಾಚ್ ಹಿಡಿಯುತ್ತಿದ್ದಂತೆ ಕೊಹ್ಲಿ 1 ರನ್ ಗೆ ಇನ್ನಿಂಗ್ಸ್ ಮುಗಿಸಿದ್ರು.
IND vs ENG: ಭಾರತದಿಂದ ಉತ್ಕೃಷ್ಟ ದರ್ಜೆಯ ಪ್ರದರ್ಶನ: ಹೊಗಳಿದ ಮೈಕಲ್ ವಾನ್
ಕೊಹ್ಲಿ ನಿರ್ಲಕ್ಷ್ಯದ ಶಾಟ್‌ಗೆ ಬೆಲೆ ತೆತ್ತರು
ಕೊಹ್ಲಿ ಅವರು ವಿಶ್ವ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬ್ಯಾಟರ್ ಆಗಿದ್ದರ. ಆದ್ರೆ ಇದೀಗ ಅಷ್ಟೇ ಕೆಟ್ಟದಾಗಿ ವಿಕೆಟ್ ಒಪ್ಪಿಸುತ್ತಿರುವ ಬ್ಯಾಟರ್ ಎಂದು ಹೇಳಬಹುದು. ಕವರ್ ಡ್ರೈವ್ ಆಡಲು ಮುಂದಾದ ಚೆಂಡನ್ನ ಅವರು ನಿರ್ಲಕ್ಷ್ಯದಿಂದ ಹೊಡೆದು ಔಟಾದರು. ಹೀಗಾಗಿ ಐದು ತಿಂಗಳ ಬಳಿಕ ಟಿ20 ಅಂತರಾಷ್ಟ್ರೀ ಪಂದ್ಯವನ್ನಾಡಿದ ವಿರಾಟ್ ಮತ್ತೊಮ್ಮೆ ಸಿಂಗಲ್ ಡಿಜಿಟ್‌ಗೆ ಔಟಾಗಿದ್ದು ವಿಪರ್ಯಾಸ. ಕೊಹ್ಲಿ ಔಟಾದ ಬಳಿಕ ತಂಡದ ಬ್ಯಾಲೆನ್ಸ್‌ನಲ್ಲಿ ಎಡವಟ್ಟಾಯಿತು. ಉತ್ತಮವಾಗಿ ಆರಂಭಿಸಿದ್ದ ಟೀಂ ಇಂಡಿಯಾ 11 ಓವರ್‌ಗಳಲ್ಲಿ 89ರನ್‌ಗೆ 5 ವಿಕೆಟ್ ಕಳೆದುಕೊಂಡಿತು.
ಕೊಹ್ಲಿ ವಿರುದ್ಧ ಕಿಡಿಕಾರಿದ ನೆಟ್ಟಿಗರು
ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಕಳಪೆ ಫಾರ್ಮ್ನನಲ್ಲಿದ್ದು, ಟಿ20 ಕ್ರಿಕೆಟ್‌ನಲ್ಲಂತೂ ನಂಬಲಾಗದ ರೀತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ವಿರಾಟ್ ಇಂಗ್ಲೆಂಡ್ ವಿರುದ್ಧ ಔಟಾಗುತ್ತಿದ್ದಂತೆ ನೆಟ್ಟಿಗರು ತೀವ್ರವಾಗಿ ಕಿಡಿಕಾರಿದ್ದಾರೆ. ವಿರಾಟ್ ಕೊಹ್ಲಿಗೆ ಇನ್ನೆಷ್ಟು ಅವಕಾಶ ನೀಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ದೀಪಕ್ ಹೂಡಾ ಬದಲು ಹೇಗೆ ಅವಕಾಶ ನೀಡುತ್ತಿದ್ದೀರಿ ಎಂದು ಕೇಳಿದ್ದಾರೆ.
ವಿಂಬಲ್ಡನ್ 2022: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಎಲೆನಾ ರೈಬಾಕಿನಾ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರಿ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ವೆಂದ್ರ ಕುಮಾರ್
ಇಂಗ್ಲೆಂಡ್: ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್/ ನಾಯಕ), ಡೇವಿಡ್ ಮಲನ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕ್ಯಾರನ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ಮ್ಯಾಥೆ ಪಾರ್ಕಿನ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications