For Quick Alerts
ALLOW NOTIFICATIONS  
For Daily Alerts
 

5 ತಿಂಗಳ ಬಳಿಕ ಟಿ20 ತಂಡಕ್ಕೆ ಮರಳಿದ ವಿರಾಟ್: ಕಳಪೆ ಫಾರ್ಮ್‌ನಿಂದ ಹೊರಬರುತ್ತಾರ ಕೊಹ್ಲಿ?

Virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಐದು ತಿಂಗಳ ಬಳಿಕ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆಡಲು ಎದುರು ನೋಡುತ್ತಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ ಮುನ್ನಡೆ ಸಾಧಿಸಿದೆ. ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಎದುರಾಳಿಯನ್ನು 50 ರನ್‌ಗಳ ಅಂತರದಿಂದ ಸೋಲಿಸಿದ ಟೀಂ ಇಂಡಿಯಾ ಉತ್ಸಾಹದಿಂದ ಕಾಣುತ್ತಿದೆ. ಇಂಗ್ಲೆಂಡ್ ತಂಡ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ.

ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ

ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ

ಬರ್ಮಿಂಗ್‌ಹ್ಯಾಮ್ ಎಡ್ಜ್‌ಬಾಸ್ಟನ್ ಸ್ಟೇಡಿಯಂ ಎರಡನೇ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಪಿಚ್‌ನ ಇತಿಹಾಸದ ಬಗ್ಗೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿದೆ. ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿರುವ ಪಿಚ್ ಇದಾಗಿದೆ. ಪಂದ್ಯದುದ್ದಕ್ಕೂ ಭಾರತ ತಂಡ ತನ್ನ ಹಿಡಿತವನ್ನು ಬಿಗಿಗೊಳಿಸಿದ್ದರೂ, ಈ ಪಿಚ್‌ನಲ್ಲಿ ಕೊನೆಯ ಸೆಷನ್‌ಗಳಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ತಮ್ಮ ಅದ್ಭುತ ಪ್ರದರ್ಶನ ನೀಡಿದರು. 200 ಕ್ಕೂ ಹೆಚ್ಚು ಜೊತೆಯಾಟದ ಮೂಲಕ ಜೋ ರೂಟ್, ಜಾನಿ ಬೈರ್‌ಸ್ಟೋ ಶತಕ ಬಾರಿಸಿ ಭಾರತಕ್ಕೆ ಸೋಲಿನ ರುಚಿ ತೋರಿಸಿದರು.

ಟಿ20 ಕ್ರಿಕೆಟ್‌ಗೆ ಕೊಹ್ಲಿ ರೀ ಎಂಟ್ರಿ

ಟಿ20 ಕ್ರಿಕೆಟ್‌ಗೆ ಕೊಹ್ಲಿ ರೀ ಎಂಟ್ರಿ

ವಿರಾಟ್ ಕೊಹ್ಲಿ ಈ ಪಂದ್ಯದೊಂದಿಗೆ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ರೀ ಎಂಟ್ರಿ ನೀಡಲಿದ್ದಾರೆ. ಐದು ತಿಂಗಳ ಸುದೀರ್ಘ ವಿರಾಮದ ಬಳಿಕ ಟಿ20 ಆಡಲಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಕೊನೆಯ ಟಿ20 ಆಡಿದ್ದರು. ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವದು. ಅದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಟೂರ್ನಮೆಂಟ್ ಆಡಿದ್ದ ಕೊಹ್ಲಿ ಕಳಪೆ ಆಟವಾಡಿದ್ರು. ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಿದ್ದರೂ.. ವಿರಾಟ್ ಕೊಹ್ಲಿ ಆಯ್ಕೆಯಾಗಿರಲಿಲ್ಲ. ಬಿಸಿಸಿಐ ಆಯ್ಕೆಗಾರರು ವಿಶ್ರಾಂತಿ ನೀಡಿದ್ದರು.

Ind vs Eng 2nd T20I: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಪ್ಲೇಯಿಂಗ್ 11, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌

ಐರ್ಲೆಂಡ್ ವಿರುದ್ಧ ಸರಣಿಗೆ ಮಿಸ್

ಐರ್ಲೆಂಡ್ ವಿರುದ್ಧ ಸರಣಿಗೆ ಮಿಸ್

ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಆಡಲು ತಂಡದೊಂದಿಗೆ ಇಂಗ್ಲೆಂಡ್‌ ತೆರಳಿದ್ದಾರೆ. ಈ ಕಾರಣದಿಂದಾಗಿ ಅವರು ಐರ್ಲೆಂಡ್ ವಿರುದ್ಧದ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನ ಕಳೆದುಕೊಂಡಿದ್ದರು. ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಆಯ್ಕೆಗಾರರು ಅವರ ಬದಲಿಗೆ ದೀಪಕ್ ಹೂಡಾ ಅವರನ್ನು ನೇಮಿಸಿದರು. ದೀಪಕ್ ಹೂಡಾ ಮಿಂಚಿದರು. ಅವರು 17 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ 33 ರನ್ ಗಳಿಸಿದರು.

ಅಶ್ವಿನ್‌ರನ್ನೇ ತಂಡದಿಂದ ಕೈ ಬಿಟ್ಟ ಮೇಲೆ ಕೊಹ್ಲಿಯನ್ನ ಏಕೆ ಬಿಡಬಾರದು? ಕಪಿಲ್ ದೇವ್ ಪ್ರಶ್ನೆ

ಕೊಹ್ಲಿ ಆಡುವುದು ಬಹುತೇಕ ಖಚಿತ

ಕೊಹ್ಲಿ ಆಡುವುದು ಬಹುತೇಕ ಖಚಿತ

ಇದೀಗ ವಿರಾಟ್ ಕೊಹ್ಲಿ ಅಂತಿಮ ತಂಡಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಪರಿಣಾಮವಾಗಿ ದೀಪಕ್ ಹೂಡಾ ಅಂತಿಮ ತಂಡದಲ್ಲಿ ಸ್ಥಾನ ಪಡೆಯದೇ ಇರಬಹುದು. ದಿನದ ಎರಡನೇ ಟಿ20ಗಾಗಿ ವಿರಾಟ್ ಕೊಹ್ಲಿ ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸಿದರು. ಟೀಂ ಇಂಡಿಯಾ ನೆಟ್ ಬೌಲರ್ ಅನುರೀತ್ ಸಿಂಗ್ ಬೌಲಿಂಗ್ ಎದುರಿಸುತ್ತಿರುವಂತೆ ಕಂಡುಬಂದರು. ಐದು ತಿಂಗಳ ಸುದೀರ್ಘ ವಿರಾಮದ ನಂತರ ಐಪಿಎಲ್ 2022 ರ ನಡುವೆ ವಿರಾಟ್ ಕೊಹ್ಲಿ ಮತ್ತೊಂದು ಟಿ20 ಆಡಿಲ್ಲ, ಈಗ ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಭಾರತ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್‌ ಸಿಂಗ್, ಯುಜವೇಂದ್ರ ಚಹಾಲ್


ಇಂಗ್ಲೆಂಡ್:
ಜೋಸ್ ಬಟ್ಲರ್ (ನಾಯಕ), ಜೇಸನ್ ರಾಯ್, ಡೇವಿಡ್ ಮಲನ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಟೈಮಲ್ ಮಿಲ್ಸ್, ಮ್ಯಾಥ್ಯೂ ಪಾರ್ಕಿನ್ಸನ್

Story first published: Saturday, July 9, 2022, 17:45 [IST]
Other articles published on Jul 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+