4ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗರಿಷ್ಠ ಎಷ್ಟು ರನ್‌ಗಳನ್ನ ಚೇಸ್ ಮಾಡಿದೆ?

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಅತ್ಯಂತ ಕುತೂಹಲಕ್ಕೆ ಘಟ್ಟಕ್ಕೆ ಹೋಗಿ ತಲುಪಿದೆ. ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ 245ರನ್‌ಗಳಿಗೆ ಆಲೌಟ್ ಆಗಿದ್ದು ಆತಿಥೇಯ ಇಂಗ್ಲೆಂಡ್‌ನಲ್ಲಿ 378 ರನ್ ಟಾರ್ಗೆಟ್ ನೀಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 416ರನ್‌ಗಳ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್ 284 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 132ರನ್‌ಗಳ ಹಿನ್ನಡೆಯನ್ನು ಸಹ ಕಂಡಿತು. ಆದ್ರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಆಂಗ್ಲರು ಟೀಂ ಇಂಡಿಯಾವನ್ನ 245ರನ್‌ಗಳಿಗೆ ಕಟ್ಟಿಹಾಕಿದರು.

377ರನ್‌ಗಳ ಲೀಡ್ ಪಡೆದಿರುವ ಟೀಂ ಇಂಡಿಯಾ
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 132ರನ್‌ಗಳ ಉತ್ತಮ ಲೀಡ್ ಪಡೆದ ಪರಿಣಾಮ ಎದುರಾಳಿ ತಂಡಕ್ಕೆ 350ಕ್ಕೂ ಹೆಚ್ಚು ರನ್‌ಗಳ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಪೂಜಾರ 66, ರಿಷಭ್ ಪಂತ್ 57 ಹಾಗೂ ರವೀಂದ್ರ ಜಡೇಜಾ 23ರನ್ ಗಳಿಸಿದ್ದು ಬಿಟ್ಟರೆ ಬೇರೆ ಎಲ್ಲಾ ಬ್ಯಾಟರ್‌ಗಳು ನೆಲಕಚ್ಚಿದರು. ಪರಿಣಾಮ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 245ರನ್‌ಗಳಿಗೆ ಸರ್ವಪತನಗೊಂಡಿದೆ.
ಪರಿಣಾಮ ಮೊದಲ ಇನ್ನಿಂಗ್ಸ್ ಲೀಡ್ ಸೇರಿದಂತೆ ಒಟ್ಟಾರೆ 377ರನ್‌ಗಳ ಟೀಂ ಇಂಡಿಯಾ ಸ್ಕೋರ್ ಬೋರ್ಡ್‌ನಲ್ಲಿದ್ದು ಇಂಗ್ಲೆಂಡ್ ಗೆಲ್ಲಲು 378ರನ್ ಕಲೆಹಾಕಬೇಕು.
ಇಂಗ್ಲೆಂಡ್ ವಿರುದ್ಧ ಭಾರತದ ಬೌಲರ್‌ಗಳ ಗೆಲುವಿನ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಸಿರಾಜ್

ಶತಕದ ಜೊತೆಯಾಟವಾಡಿದ ಇಂಗ್ಲೆಂಡ್
ಈ ಸವಾಲಿನ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ಭರ್ಜರಿ ಆರಂಭ ಪಡೆದಿದೆ. ಓಪನರ್‌ಗಳಾದ ಜ್ಯಾಕ್ ಕ್ರಾಲಿ ಮತ್ತು ಅಲೆಕ್ಸ್ ಲೀಸ್ ಜೋಡಿ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅಲೆಕ್ಸ್ ಕ್ರಾಲಿ ವೇಗವಾಗಿ ರನ್ ಕಲೆಹಾಕಿ ಅರ್ಧಶತಕ ಗಡಿದಾಟಿದ್ರೆ, ಜ್ಯಾಕ್ ಕೂಡ ಅರ್ಧಶತಕ ಸಮೀಪಿಸಿದ್ರು. ಈ ಮೂಲಕ ಇಂಗ್ಲೆಂಡ್ ಪ್ರಭಾವಶಾಲಿ ಆಟ ಪ್ರದರ್ಶಿಸಿದೆ
ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ರಿಷಭ್ ಪಂತ್, 72 ವರ್ಷಗಳ ಹಳೆಯ ದಾಖಲೆ ನೆಲಸಮ

ಇಂಗ್ಲೆಂಡ್ 4ನೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಎಷ್ಟು ರನ್ ಚೇಸ್ ಮಾಡಿದೆ?
ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಅಂದ್ರೆ 359ರನ್‌ಗಳ ಚೇಸ್ ಮಾಡಿದೆ. 2019ರಲ್ಲಿ ಲೀಡ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 359ರನ್‌ಗಳ ಗುರಿ ಬೆನ್ನತ್ತಿ ಜಯ ಸಾಧಿಸಿತು. ಇನ್ನು ಟೀಂ ಇಂಡಿಯಾ ಇಷ್ಟು ದೊಡ್ಡ ಮೊತ್ತವನ್ನ ಇಂಗ್ಲೆಂಡ್ ಬೆನ್ನಟ್ಟಿದ್ದ ಉದಾಹರಣೆಯೇ ಇಲ್ಲ.
ಭಾರತ ವಿರುದ್ಧ ಅತಿ ಹೆಚ್ಚು ಅಂದ್ರೆ ಪರ್ತ್‌ನಲ್ಲಿ ಆಸ್ಟ್ರೇಲಿಯಾ 1977ರಲ್ಲಿ 339ರನ್‌ಗಳನ್ನ ಬೆನ್ನತ್ತಿ ಗೆದ್ದಿದೆ. ಆದ್ರೀಗ ಇಂಗ್ಲೆಂಡ್‌ಗೆ 378ರನ್‌ಗಳ ಗುರಿ ನೀಡಿರುವ ಭಾರತ ಸವಾಲಿನ ಮೊತ್ತ ನೀಡಿದ್ದರೂ ಸಹ ಈಗಾಗಲೇ ಆರಂಭಿಕ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ಓಪನಿಂಗ್ ಜೋಡಿ ಶತಕದ ಜೊತೆಯಾಟವಾಡಿದ್ದು, ಕೇವಲ ಒಂದು ವಿಕೆಟ್ ಕಳೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications