For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್‌: ಎಡ್ಜ್‌ಬಾಸ್ಟನ್‌ ಪಿಚ್‌ ವರದಿ, ಸ್ಕ್ವಾಡ್

Edgbaston pitch report

ಜುಲೈ 1ರಿಂದ ಪ್ರಾರಂಭಗೊಳ್ಳಲಿರುವ ಭಾರತ ವರ್ಸಸ್ ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಕೋವಿಡ್ ಕಾರಣಗಳಿಂದ ಮುಂದೂಡಲ್ಪಟ್ಟಿದ ಟೆಸ್ಟ್‌ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜಬಾಸ್ಟನ್‌ನಲ್ಲಿ ನಡೆಯಲಿದೆ.

ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದರೂ ಸಹ, ಇಂಗ್ಲೆಂಡ್ ತಂಡ ಭರ್ಜರಿ ಫಾರ್ಮ್‌ಗೆ ಮರಳಿರುವುದು ಟೀಂ ಇಂಡಿಯಾಗೆ ತಲೆನೋವಾಗಿದೆ. ನ್ಯೂಜಿಲೆಂಡ್ ತಂಡದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನ ಇಂಗ್ಲೆಂಡ್ 3-0 ಅಂತರದಲ್ಲಿ ಕೈವಶ ಮಾಡಿಕೊಂಡಿರುವುದು ಆತ್ಮವಿಶ್ವಾಸವನ್ನ ದುಪ್ಪಟ್ಟಾಗಿಸಿದೆ.

ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ

ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮುನ್ನಡೆದಿದ್ದ ಟೀಂ ಇಂಡಿಯಾ ಕಳೆದ ವರ್ಷ ಆಡಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 2-1ರಿಂದ ಮುನ್ನಡೆಯನ್ನ ಪಡೆದುಕೊಂಡಿದೆ. ಆದ್ರೆ ಐದನೇ ಪಂದ್ಯವು ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು ಮತ್ತು ಪ್ರಸ್ತುತ ದಿನಾಂಕ ನಿಗದಿಯಾಗಿದೆ. ಈ ಪಂದ್ಯವು ಕೇವಲ ಸರಣಿ ಗೆಲುವು ಸೋಲು ಅಷ್ಟೇ ಅಲ್ಲದೆ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳ ಮೇಲೂ ಸಹ ಪರಿಣಾಮ ಬೀರಲಿದೆ.

ಎಡ್ಜ್‌ಬಾಸ್ಟನ್‌ ಪಿಚ್‌ ಹೇಗಿದೆ?

ಎಡ್ಜ್‌ಬಾಸ್ಟನ್‌ ಪಿಚ್‌ ಹೇಗಿದೆ?

ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಮೈದಾನವು ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನವಾಗಿ ಅನುಕೂಲಕರವಾಗಿದೆ. ಆದರೆ ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಇದಕ್ಕೆ ಹಿಂದಿನ ದಾಖಲೆಗಳೇ ಕಾರಣ.

ಮೊದಲ ದಿನದ ಆಟ ಇಲ್ಲಿನ ವೇಗಿಗಳಿಗೆ ಉತ್ತಮ ಸ್ವಿಂಗ್ ಆಗಿತ್ತು. ಅದೇ ರೀತಿ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳದೆ ಎಡವುತ್ತಾರೆ. ಸರಾಸರಿಯಾಗಿ, ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು 300+ ರನ್ ಗಳಿಸುತ್ತದೆ. 300 ರನ್ ದಾಟುವುದೊಂದೇ ಗೆಲ್ಲುವ ಅವಕಾಶ.

ಇನ್ನು ಬೌಲಿಂಗ್ ವಿಷಯದಲ್ಲಿ ಭಾರತದ ಶಕ್ತಿ ಎಂದರೆ 3 ವೇಗದ ಬೌಲರ್‌ಗಳು ಮತ್ತು 2 ಸ್ಪಿನ್ನರ್‌ಗಳು. ಆದರೆ ಈ ಮೈದಾನದಲ್ಲಿ 4 ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಬೇಕಾಗಬಹುದು. ಇಂಗ್ಲೆಂಡ್ ತಂಡ ಎಲ್ಲಾ 5 ಬೌಲರ್‌ಗಳನ್ನು ವೇಗದ ಬೌಲರ್‌ಗಳಾಗಿ ಕಣಕ್ಕಿಳಿಸಿದರೂ ಆಶ್ಚರ್ಯಪಡಬೇಕಾಗಿಲ್ಲ.

Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?

ಪಿಚ್‌ನ ಗೆಲುವು ಸೋಲಿನ ಲೆಕ್ಕಾಚಾರ

ಪಿಚ್‌ನ ಗೆಲುವು ಸೋಲಿನ ಲೆಕ್ಕಾಚಾರ

ಈ ಮೈದಾನವು ಇದುವರೆಗೆ 53 ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ಇಂಗ್ಲೆಂಡ್ 28 ಪಂದ್ಯಗಳನ್ನು ಗೆದ್ದಿದೆ ಮತ್ತು ಎದುರಾಳಿಗಳು 10 ಬಾರಿ ಪಂದ್ಯ ಗೆದ್ದಿದ್ದಾರೆ. ಇನ್ನುಳಿದ 15 ಪಂದ್ಯ ಡ್ರಾ ಆಯಿತು. ಮೊದಲು ಬ್ಯಾಟ್ ಮಾಡಿದ ತಂಡ 18 ಪಂದ್ಯಗಳನ್ನು ಗೆದ್ದಿದೆ ಮತ್ತು ಎರಡನೇ ಬ್ಯಾಟಿಂಗ್ ಮಾಡಿದ ತಂಡ 20 ಬಾರಿ ಗೆದ್ದಿದೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಪ್ರಮುಖ ಎಚ್ಚರಿಕೆ ನೀಡಿದ ಅಜಿತ್ ಅಗರ್ಕರ್

ಇಂಗ್ಲೆಂಡ್ ಟೆಸ್ಟ್‌ ಸ್ಕ್ವಾಡ್‌

ಇಂಗ್ಲೆಂಡ್ ಟೆಸ್ಟ್‌ ಸ್ಕ್ವಾಡ್‌

ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರಾಕ್, ಜಾಕ್ ಕ್ರೌಲಿ, ಬೆನ್ ಫಾಕ್ಸ್, ಜ್ಯಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್‌ಟನ್, ಜೇಮೀ ಓವರ್‌ಟನ್, ಮ್ಯಾಥ್ಯೂ ಪಾಟ್ಸ್, ಓಲಿ ಪೋಪ್, ಜೋ ರೂಟ್

ಟೀಂ ಇಂಡಿಯಾ ಸ್ಕ್ವಾಡ್‌

ಟೀಂ ಇಂಡಿಯಾ ಸ್ಕ್ವಾಡ್‌

ರೋಹಿತ್ ಶರ್ಮಾ/ ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್, ಕೆ.ಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ

Story first published: Thursday, June 30, 2022, 9:38 [IST]
Other articles published on Jun 30, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+