ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಪ್ರಮುಖ ಎಚ್ಚರಿಕೆ ನೀಡಿದ ಅಜಿತ್ ಅಗರ್ಕರ್

India vs England: Ajit Agarkar said Don’t think India will match England’s playstyle

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಜುಲೈ 1ರಿಂದ ಈ ಪಂದ್ಯ ಆರಂಭವಾಗಲಿದ್ದು ಭಾರತ 2-1 ಅಂತರದಿಂದ ಮುನ್ನಡೆಯೊಂದಿಗೆ ಪಂದ್ಯವನ್ನಾಡಲಿದೆ. ಆದರೆ ಈ ಪಂದ್ಯದ ಆರಂಭಕ್ಕೆ ಮುನ್ನ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಮಹತ್ವದ ಎಚ್ಚರಿಕೆಯೊಂದನ್ನು ಭಾರತೀಯ ತಂಡಕ್ಕೆ ನೀಡಿದ್ದಾರೆ.

ಇಂಗ್ಲೆಂಡ್ ತಂಡದ ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ ತಂಡದ ನಾಯಕನಾಗಿ ಬೆನ್ ಸ್ಟೋಕ್ಸ್ ಹಾಗೂ ಕೋಚ್ ಮೆಕ್ಕಲಮ್ ಜವಾಬ್ಧಾರಿ ವಹಿಸಿಕೊಂಡ ಬಳಿಕ ತಂಡ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಜಿತ್ ಅಗರ್ಕರ್ ಭಾರತೀಯ ತಮಡಕ್ಕೆ ನೀಡಿರುವ ಎಚ್ಚರಿಕೆ ಸಂದೇಶ ಮಹತ್ವ ಪಡೆದುಕೊಂಡಿದೆ.

Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್

ಇಂಗ್ಲೆಂಡ್ ಆಡುವ ಶೈಲಿಗೆ ಹೊಂದಾಣಿಗೆ ಅಗತ್ಯವಿಲ್ಲ

ಇಂಗ್ಲೆಂಡ್ ಆಡುವ ಶೈಲಿಗೆ ಹೊಂದಾಣಿಗೆ ಅಗತ್ಯವಿಲ್ಲ

ಭಾರತದ ವಿರುದ್ಧದ ಸರಣಿಯಲ್ಲಿಯೂ ಇಂಗ್ಲೆಂಡ್ ತಂಡ ನ್ಯೂಜಿಲೆಮಡ್ ವಿರುದ್ಧದ ಸರಣಿಯ ಶೈಲಿಯಲ್ಲಿಯೇ ತನ್ನ ಪ್ರದರ್ಶನವನ್ನು ಮುಂದುವರಿಸುವ ಯೋಜನೆಯಿಟ್ಟುಕೊಂಡಿರುವುದು ಸ್ಪಷ್ಟವಾಗಿದೆ. ಆದರೆ ಭಾರತ ಇಂಗ್ಲೆಂಡ್ ತಂಡ ಇಂಗ್ಲೆಂಡ್ ತಂಡದ ಆಟದ ಶೈಲಿಯನ್ನು ತಾನು ಕೂಡ ಅಳವಡಿಸಿಕೊಳ್ಳಬೇಕಾಗಿಲ್ಲ ಎಂದಿದ್ದಾರೆ ಅಗರ್ಕರ್. ಭಾರತ ಈವರೆಗೆ ಯಾವ ರೀತಿಯಲ್ಲಿ ಪ್ರದರ್ಶನ ನಿಡುತ್ತಾ ಬಂದಿದೆಯೋ ಅದನ್ನೇ ಮುಂದುವಿಸಿಕೊಂಡು ಹೋಗಬೇಕಿದೆ ಎಂದಿದ್ದಾರೆ ಅಜಿತ್ ಅಗರ್ಕರ್.

ಇಂಗ್ಲೆಂಡ್ ಶೈಲಿಯಲ್ಲಿ ಭಾರತ ಯಾಕೆ ಆಡಬೇಕು?

ಇಂಗ್ಲೆಂಡ್ ಶೈಲಿಯಲ್ಲಿ ಭಾರತ ಯಾಕೆ ಆಡಬೇಕು?

ಭಾರತ ಇಂಗ್ಲೆಂಡ್ ಆಡಿದ ರೀತಿಯಲ್ಲಿ ಆಡಲು ಪ್ರಯತ್ನಿಸಬೇಕು ಅಥವಾ ಆ ಶೈಲಿಯನ್ನು ಯಾಕಾಗಿ ಅಳವಡಿಸಿಕೊಳ್ಳಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 56 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅದಾದ ಬಳಿಕ ಕೆಲ ಉತ್ತಮ ಜೊತೆಯಾಟ ಅದಕ್ಕೆ ದೊರೆಯಿತು. ಭಾರತ ಹೇಗೆ ಆಡಬೇಕೆಂದು ಭಾರತ ತಂಡಕ್ಕೆ ಗೊತ್ತಿದೆ. ಬೇರೆ ತಂಡಕ್ಕೆ ತಕಗಕನಾಗಿ ಆಡುವ ಅಗತ್ಯವಿಲ್ಲ. ಅಂತಿಮವಾಗಿ ನೀವು ಎದುರಾಳಿಗಿಂತ ಉತ್ತಮವಾಗಿ ಆಡಬೇಕಾಗುತ್ತದೆ" ಎಂದಿದ್ದಾರೆ ಅಜಿತ್ ಅಗರ್ಕರ್.

ಅಭ್ಯಾಸ ಪಂದ್ಯವನ್ನಾಡಿ ಸಜ್ಜಾಗಿದೆ ಭಾರತ

ಅಭ್ಯಾಸ ಪಂದ್ಯವನ್ನಾಡಿ ಸಜ್ಜಾಗಿದೆ ಭಾರತ

ಇನ್ನು ಭಾರತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಒಂದು ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿದೆ. ಈ ಪಂದ್ಯದಲ್ಲಿ ಭಾರತದ ಬಹುತೇಕ ಆಟಗಾರರು ಉತ್ತಮ ಪ್ರದರ್ಶನ ನೀಡಿ ಸರಣಿಗೆ ಸಜ್ಜಾಗಿರುವುದನ್ನು ಖಚಿತಪಡಿಸಿದ್ದಾರೆ. ಇನ್ನು ತಮಡದ ನಾಯಕನಾಗಿರುವ ರೋಹಿತ್ ಶರ್ಮಾ ಮಾತ್ರ ಕೊರೊನಾವೈರಸ್‌ನ ಕಾರಣದಿಂದಾಗಿ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ.

ಇಯಾನ್‌ ಮಾರ್ಗನ್ ನಿವೃತ್ತಿ ನಂತರ ಜೋಸ್‌ ಬಟ್ಲರ್ ಗೆ ಇಂಗ್ಲೆಂಡ್ ನಾಯಕತ್ವ | Oneindia Kannada
ಭಾರತ ಸ್ಕ್ವಾಡ್ ಹೀಗಿದೆ

ಭಾರತ ಸ್ಕ್ವಾಡ್ ಹೀಗಿದೆ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

Story first published: Wednesday, June 29, 2022, 17:30 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X