For Quick Alerts
ALLOW NOTIFICATIONS  
For Daily Alerts
 

Ind vs Eng 5th Test: ಮೊದಲ ದಿನದಾಟದಲ್ಲಿ ವರುಣನ ಕಾಟ, ಟೀಂ ಇಂಡಿಯಾ 53/2

Edgbaston

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಳೆಯ ಕಾಟದಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು, ಮುಂಚಿತವಾಗಿ ಊಟದ ವಿರಾಮ ತೆಗೆದುಕೊಂಡರೂ ಸಹ ಮಳೆ ಮತ್ತೆ ಅಡ್ಡಿಪಡಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿರುವ ಟೀಂ ಇಂಡಿಯಾ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 53ರನ್ ಕಲೆಹಾಕಿದೆ. ಓಪನಿಂಗ್ ಬ್ಯಾಟರ್‌ಗಳಾಗಿ ಕಣಕ್ಕಿಳಿದಿದ್ದ ಶುಭಮನ್ ಗಿಲ್ 24 ಎಸೆತಗಳಲ್ಲಿ 17ರನ್ ಕಲೆಹಾಕಿ ಎದುರಾಳಿ ಬೌಲರ್ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ರೆ, ಅತ್ಯಂತ ತಾಳ್ಮೆಯುತವಾಡಿದ ಪೂಜಾರ ಕೂಡ 13ರನ್‌ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ ಭಾರತದ ಓಪನರ್‌ಗಳಿಬ್ಬರನ್ನ ಆ್ಯಂಡರ್ಸನ್ ಪೆವಿಲಿಯನ್‌ಗೆ ಅಟ್ಟಿದ್ದಾರೆ.

ಇಂಗ್ಲೆಂಡ್‌ ಪಂದ್ಯಗಳ ಸರಣಿಯಲ್ಲಿ ಪೂಜಾರ ಕಳಪೆ ಆಟ

ಇಂಗ್ಲೆಂಡ್‌ ಪಂದ್ಯಗಳ ಸರಣಿಯಲ್ಲಿ ಪೂಜಾರ ಕಳಪೆ ಆಟ

ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 46 ಎಸೆತಗಳನ್ನ ಎದುರಿಸಿ 13 ರನ್‌ಗೆ ಔಟಾದ ಚೇತೇಶ್ವರ ಪೂಜಾರ ಇದಕ್ಕೂ ಮೊದಲು ನಡೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲೂ ಕಳಪೆ ಆಟವಾಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಕಳೆದ ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಐದು ಇನ್ನಿಂಗ್ಸ್‌ನಲ್ಲಿ ಪೂಜಾರ ಜೇಮ್ಸ್‌ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ 4,9,1,4,13 ರನ್‌ಗೆ ಆ್ಯಂಡರ್ಸನ್‌ಗೆ ಔಟಾಗಿದ್ದರು.

ಭಾರತ ವರ್ಸಸ್ ಡರ್ಬಿಶೈರ್ ಟಿ20 ಅಭ್ಯಾಸ ಪಂದ್ಯ: ಪಂದ್ಯದ ಪ್ರಿವ್ಯೂ, ಸ್ಕ್ವಾಡ್‌

ಟೆಸ್ಟ್ ಕ್ರಿಕೆಟ್‌ನಲ್ಲಿ ಆ್ಯಂಡರ್ಸನ್‌ಗೆ ಅತಿ ಹೆಚ್ಚು ಬಾರಿ ಔಟಾದ ಬ್ಯಾಟರ್ ಪೂಜಾರ

ಇನ್ನೂ ಚೇತೇಶ್ವರ್ ಪೂಜಾರ ಇಂಗ್ಲೆಂಡ್‌ನ ಲೆಜೆಂಡ್ ಬೌಲರ್ ಜೇಮ್ಸ್ ಆ್ಯಂಡರ್ಸನ್‌ಗೆ ಬಲಿಯಾದ ಬ್ಯಾಟರ್ ಎಂಬ ಕುಖ್ಯಾತಿಗೆ ಕಾರಣವಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಜೇಮ್ಸ್‌ ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಅತಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಬ್ಯಾಟರ್‌ ಆಗಿ ಚೇತೇಶ್ವರ ಪೂಜಾರ ಹೊರಹೊಮ್ಮಿದ್ದಾರೆ.

ಇದುವರೆಗೂ ಪೂಜಾರ ಟೆಸ್ಟ್‌ನಲ್ಲಿ 12 ಬಾರಿ ಆ್ಯಂಡರ್ಸನ್‌ಗೆ ಔಟಾಗಿದ್ದಾರೆ. ಇವರ ನಂತರದಲ್ಲಿ ಆಸ್ಟ್ರೇಲಿಯಾದ ಬೌಲರ್ ಪೀಟರ್ ಸಿಡ್ಲ್‌ 11, ಡೇವಿಡ್ ವಾರ್ನರ್ 10, ಸಚಿನ್ ತೆಂಡೂಲ್ಕರ್, ಮೈಕಲ್ ಕ್ಲಾರ್ಕ್‌ ಹಾಗೂ ಅಜರ್ ಅಲಿ 9 ಬಾರಿ ತಮ್ಮ ವಿಕೆಟ್ ನೀಡಿದ್ದಾರೆ.

ಭಾರತ ವಿರುದ್ಧದ ಸೀಮಿತ ಓವರ್ ಸರಣಿಗಳಿಗೆ 2 ಪ್ರತ್ಯೇಕ ತಂಡ ಪ್ರಕಟಿಸಿದ ಇಂಗ್ಲೆಂಡ್; ಹೊಸ ನಾಯಕನ ನೇಮಕ

Cheteshwar Pujara ಅವರ ವಿರುದ್ಧ ಅಭಿಮಾನಿಗಳ ಆಕ್ರೋಶ | *Cricket | OneIndia Kannada
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ(ನಾಯಕ)

ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್

Story first published: Friday, July 1, 2022, 18:57 [IST]
Other articles published on Jul 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+