
98ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ
ಮೊದಲ ದಿನ ಭಾರತ 27.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಶುಭಮನ್ ಗಿಲ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬಹುಬೇಗ ನಿರ್ಗಮಿಸಿ ಪೆವಿಲಿಯನ್‌ಗೆ ತೆರಳಿದರು. ಈ ವೇಳೆ ಆರನೇ ವಿಕೆಟ್‌ಗೆ ಜೊತೆಯಾದ ರಿಷಭ್ ಪಂತ್ ಮತ್ತು ಜಡೇಜಾ 222 ರನ್‌ಗಳ ದಾಖಲೆಯ ಜೊತೆಯಾಟವಾಡಿ ತಂಡಕ್ಕೆ ಆಧಾರವಾದರು.
ಅದ್ರಲ್ಲೂ ಇಂಗ್ಲೆಂಡ್ ಪಿಚ್ ಪರಿಸ್ಥಿತಿಗಳಲ್ಲಿ ಯಾವುದೇ ಬ್ಯಾಟ್ಸ್‌ಮನ್ ಬಹಳ ಎಚ್ಚರಿಕೆಯಿಂದ ಆಡುವ ಮೂಲಕ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸುತ್ತಾನೆ. ಆದರೆ ಪಂತ್ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ಶೈಲಿಯಲ್ಲಿ ಆಕ್ರಮಣಕಾರಿ ಆಟವಾಡಿದರು ಮತ್ತು ಸ್ಕೋರ್ ಬೋರ್ಡ್ ಅನ್ನು ಓಡಿಸಿದರು. ಇವರೊಂದಿಗೆ ಜಡೇಜಾ ಮತ್ತೊಂದೆಡೆ ವಿಕೆಟ್ ಉಳಿಸಿಕೊಂಡು ಮಿಂಚಿದರು. ಇದೀಗ ಎರಡನೇ ದಿನವೂ ಶತಕ ಪೂರೈಸಿದ್ದಾರೆ.
ಟೆಸ್ಟ್ ಕ್ರಿಕೆಟ್: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್, ರನ್ ನೀಡಿದ ಬೌಲರ್ಸ್ ಪಟ್ಟಿ

ಸರ್ ಜಡೇಜಾ ಇನ್ನಿಂಗ್ಸ್ ಉತ್ತಮವಾಗಿತ್ತು
ಆಕಾಶ್ ಚೋಪ್ರಾ ಜಡೇಜಾ ಬೆಳವಣಿಗೆ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ. ''ಸರ್ ಜಡೇಜಾ ಬ್ಯಾಟ್ಸ್‌ಮನ್ ಆಗಿದ್ದು, ಫೈಟ್ ಮಾಡಲು ಇಷ್ಟಪಡುತ್ತಾರೆ. ಅವರು ತಮ್ಮ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ಅತ್ಯುತ್ತಮವಾಗಿದ್ದರು. ಕಷ್ಟದ ಹಂತಗಳಲ್ಲಿ ಅವರ ತಂತ್ರ ಮತ್ತು ತಾಳ್ಮೆಯನ್ನು ಮೆಚ್ಚಬೇಕು ಮತ್ತು ನಂಬಬೇಕು'' ಎಂದು ಹೇಳಿದರು.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 78 ರನ್ ಸೇರಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 416ರನ್‌ಗಳನ್ನು ಕಲೆಹಾಕಿದೆ. ಆರಂಭದಲ್ಲಿ ಜಡೇಜಾ ಮತ್ತು ಶಮಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ಇದಾದ ಬಳಿಕ ರವೀಂದ್ರ ಜಡೇಜಾ 183ನೇ ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಅಮೋಘ ಇನ್ನಿಂಗ್ಸ್ ಪ್ರದರ್ಶಿಸಿದರು.
ಮೊದಲ ಸೆಷನ್‌ನಲ್ಲಿ ಶಮಿ (16 ರನ್, 31 ಎಸೆತಗಳಲ್ಲಿ 3 ಬೌಂಡರಿ) ಸ್ವಲ್ಪ ಹೊತ್ತು ಮನರಂಜನೆ ನೀಡಿದರೂ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 35ರನ್ ನೀಡಿದ ಸ್ಟುವರ್ಟ್ ಬ್ರಾಡ್: ಬುಮ್ರಾ ವಿಶ್ವದಾಖಲೆ

ಒಂದೇ ಓವರ್‌ನಲ್ಲಿ 35 ರನ್!
ಭಾರತದ 36ನೇ ಟೆಸ್ಟ್ ಫಾರ್ಮೆಟ್ ನಾಯಕನಾಗಿರುವ ಜಸ್ಪ್ರೀತ್ ಬುಮ್ರಾ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಜಡೇಜಾ ಔಟಾದ ನಂತರದ ಓವರ್‌ನಲ್ಲಿ ಬ್ರಾಡ್ ಓವರ್‌ನಲ್ಲಿ 35ರನ್‌ಗಳು ಹರಿದುಬಂದಿವೆ.
ಇನ್ನಿಂಗ್ಸ್ ನ 84ನೇ ಓವರ್ ಬೌಲಿಂಗ್ ಮಾಡಿದ ಸ್ಟುವರ್ಟ್ ಬ್ರಾಡ್ 4, 5(ವೈಡ್), 6(ನೋ ಬಾಲ್), 4, 4, 4, 1 ರನ್ ಸೇರಿ ಒಟ್ಟಾರೆ ಒಂದೇ ಓವರ್‌ನಲ್ಲಿ ಬರೋಬ್ಬರಿ 35ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 400ರ ಗಡಿದಾಟಿಸಿದ್ದಾರೆ. ಕೊನೆಗೆ 16 ಎಸೆತಗಳಲ್ಲಿ ಅಜೇಯ 31 ರನ್ ಕಲೆಹಾಕಿದ್ದಾರೆ.


Click it and Unblock the Notifications












