
ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಅಬ್ಬರಿಸಿದ ಬುಮ್ರಾ
ಭಾರತದ 36ನೇ ಟೆಸ್ಟ್ ಫಾರ್ಮೆಟ್ ನಾಯಕನಾಗಿರುವ ಜಸ್ಪ್ರೀತ್ ಬುಮ್ರಾ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಜಡೇಜಾ ಔಟಾದ ನಂತರದ ಓವರ್‌ನಲ್ಲಿ ಬ್ರಾಡ್‌ಗೆ 35ರನ್‌ಗಳು ಹರಿದುಬಂದಿವೆ.
ಇನ್ನಿಂಗ್ಸ್ ನ 84ನೇ ಓವರ್ ಬೌಲಿಂಗ್ ಮಾಡಿದ ಸ್ಟುವರ್ಟ್ ಬ್ರಾಡ್ 4, 5(ವೈಡ್), 6(ನೋ ಬಾಲ್), 4, 4, 4, 1 ರನ್ ಸೇರಿ ಒಟ್ಟಾರೆ ಒಂದೇ ಓವರ್‌ನಲ್ಲಿ ಬರೋಬ್ಬರಿ 35ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 400ರ ಗಡಿದಾಟಿಸಿದ್ದಾರೆ. ಕೊನೆಗೆ 16 ಎಸೆತಗಳಲ್ಲಿ ಅಜೇಯ 31 ರನ್ ಕಲೆಹಾಕಿದ್ದಾರೆ. ಈ ಮೂಲಕ ಚೊಚ್ಚಲ ನಾಯಕತ್ವದ ಪಂದ್ಯದಲ್ಲಿಯೇ 10 ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ನಾಯಕರಾಗಿ ಹೊರಹೊಮ್ಮಿದ್ದಾರೆ.
Ind vs Eng 5th Test: ಅಮೋಘ ಶತಕ ದಾಖಲಿಸಿದ ರವೀಂದ್ರ ಜಡೇಜಾ ದಾಖಲೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದಾಖಲೆ
ಇನ್ನು ಸ್ಟುವರ್ಟ್ ಬ್ರಾಡ್ ಓವರ್ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಓವರ್ ಆಗಿ ಪರಿಣಮಿಸಿದೆ. ಒಂದೇ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್ 35ರನ್‌ಗಳನ್ನು ನೀಡುವ ಮೂಲಕ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೊದಲು ಪೀಟರ್ಸನ್ ಬೌಲಿಂಗ್‌ನಲ್ಲಿ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ 28, ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಅಷ್ಟೇ ಮೊತ್ತವನ್ನ ಒಂದು ಓವರ್‌ನಲ್ಲಿ ಕಲೆಹಾಕಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಹೆಚ್ಚಿನ ರನ್‌ಗಳು
35 ಜೆ ಬುಮ್ರಾ ಆಫ್ ಎಸ್ ಬ್ರಾಡ್ ಬರ್ಮಿಂಗ್ಹ್ಯಾಮ್ 2022 *
28 ಬಿ ಲಾರಾ ಆಫ್ ಆರ್ ಪೀಟರ್ಸನ್ ಜೋಹಾನ್ಸ್‌ಬರ್ಗ್ 2003
28 ಜಿ ಬೈಲಿ ಆಫ್ ಜೆ ಆಂಡರ್ಸನ್ ಪರ್ತ್ 2013
28 ಕೆ ಮಹಾರಾಜ್ ಆಫ್ ಜೆ ರೂಟ್ ಪೋರ್ಟ್ ಎಲಿಜಬೆತ್ 2020
ಇಂಗ್ಲೆಂಡ್ ವಿರುದ್ಧ ರಿಷಭ್ ಅದ್ಭುತ ಶತಕ: ಕೋಚ್ ರಾಹುಲ್ ದ್ರಾವಿಡ್ ಸೆಲೆಬ್ರೆಷನ್ ವೈರಲ್
ಟೆಸ್ಟ್‌ನಲ್ಲಿ ಅಷ್ಟೇ ಅಲ್ಲ ಟಿ20ಯಲ್ಲೂ 36ರನ್ ನೀಡಿದ್ದ ಸ್ಟುವರ್ಟ್ ಬ್ರಾಡ್
2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಬ್ಯಾಟಿಂಗ್ ಅನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದ ಯುವರಾಜ್ 36 ರನ್ ಸಿಡಿಸಿದ್ದ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಆದ್ರೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ ಆರು ಸಿಕ್ಸರ್ ದಾಖಲಿಸದಿದ್ದರೂ 35ರನ್‌ಗಳ ದುಬಾರಿ ಓವರ್ ಮೂಲಕ ಬ್ರಾಡ್‌ಗೆ ಯುವಿಯನ್ನ ಮತ್ತೆ ನೆನಪಿಸಿದ್ದಾರೆ.


Click it and Unblock the Notifications












