ಮೊನಚಿಲ್ಲದ ಭಾರತದ ಬೌಲಿಂಗ್ ದಾಳಿಯನ್ನ ಟೀಕಿಸಿದ ವೀರೇಂದ್ರ ಸೆಹ್ವಾಗ್

ಇಂಗ್ಲೆಂಡ್ ವಿರುದ್ಧದ ಮರು ನಿಗದಿತ ಪಂದ್ಯದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾ ವಿರುದ್ಧ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ. ಕೆಟ್ಟ ಬೌಲಿಂಗ್ ನಿಂದ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಸೋತರು ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಅದ್ಭುತ ಪ್ರದರ್ಶನದ ಮೂಲಕ ದಾಖಲೆಯ ಗುರಿಯನ್ನ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು ಸಹ ಪ್ರಶಂಸಿಸಿದರು. ಮಂಗಳವಾರ ಅಂತ್ಯಗೊಂಡ ಮರು ನಿಗದಿತ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳ ಸೋಲು ಕಂಡಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಮೂರು ದಿನಗಳ ಕಾಲ ಸಂಪೂರ್ಣ ಮೇಲುಗೈ ಸಾಧಿಸಿದ ಟೀಂ ಇಂಡಿಯಾ ಕೊನೆಯ ಎರಡು ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿ ಬೆಲೆ ತೆತ್ತಿದೆ.

ಟೀಂ ಇಂಡಿಯಾ ಬ್ಯಾಟಿಂಗ್ ಕುರಿತು ಸೆಹ್ವಾಗ್ ಕಿಡಿ
ಈ ವಿಚಾರವಾಗಿ ಟೀಂ ಇಂಡಿಯಾ ವೈಫಲ್ಯದ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸೆಹ್ವಾಗ್, ಸೋಲಿಗೆ ಕಾರಣಗಳನ್ನು ಎತ್ತಿ ತೋರಿಸಿದ್ದಾರೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ತೀರಾ ಕಳಪೆಯಾಗಿತ್ತು. ಗೆಲ್ಲುವ ಛಲ ಬೌಲರ್‌ಗಳಲ್ಲಿ ಕಾಣುತ್ತಿಲ್ಲ ಎಂದರು.
"ದಾಖಲೆಯ ಗೆಲುವು ಗಳಿಸಿದ ಇಂಗ್ಲೆಂಡ್‌ಗೆ ಅಭಿನಂದನೆಗಳು. ಭಾರತ ಕೂಡಲೇ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಅಗ್ರ 6 ಬ್ಯಾಟ್ಸ್‌ಮನ್‌ಗಳ ಪೈಕಿ ಚೇತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಹೊರತುಪಡಿಸಿ ಉಳಿದವರು ವಿಫಲರಾಗಿದ್ದಾರೆ. ಕೆಳ ಕ್ರಮಾಂಕದಲ್ಲಿ ಜಡೇಜಾ ಅದ್ಭುತ ಬ್ಯಾಟಿಂಗ್ ಮಾಡಿದರು. ತಂಡಕ್ಕೆ ಇನ್ ಫಾರ್ಮ್ ಬ್ಯಾಟ್ಸ್ ಮನ್ ಅಗತ್ಯವಿದೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ತುಂಬಾ ಆಲಸ್ಯದಿಂದ ಕೂಡಿತ್ತು'' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ನಾವು ಕಠಿಣ ಹೋರಾಟ ನಡೆಸಿದೆವು: ಎಡ್ಜ್‌ಬಾಸ್ಟನ್ ಸೋಲಿನ ಬಳಿಕ ತಂಡದ ಪೈಪೋಟಿಯನ್ನು ಹೊಗಳಿದ ಜಡೇಜಾ

ಜೋ ರೂಟ್ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟರ್
ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಹೆಸರನ್ನು ಹೇಳುತ್ತೇನೆ ಎಂದು ಇದೇ ವೇಳೆಯಲ್ಲಿ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ. ಸರಣಿಯಲ್ಲಿ ನಾಲ್ಕು ಶತಕ ಬಾರಿಸಿದ್ದು ಅದ್ಭುತ ಎಂದು ಶ್ಲಾಘಿಸಿದರು. ರೂಟ್ ರನ್ ಮಷಿನ್ ಎಂದು ಸೆಹ್ವಾಗ್ ಹೊಗಳಿದ್ದಾರೆ.
ಇದೇ ವೇಳೆಯಲ್ಲಿ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಇಂಗ್ಲೆಂಡ್ ತಂಡದ ಯಶಸ್ಸನ್ನು ಶ್ಲಾಘಿಸಿದ್ದಾರೆ. ''ಇದು ಇಂಗ್ಲೆಂಡ್ ನ ವಿಶೇಷ ಯಶಸ್ಸು. ಜಾನಿ ಬೈರ್ ಸ್ಟೋ ಮತ್ತು ಜೋ ರೂಟ್ ಅವರ ಅದ್ಬುತ ಪ್ರದರ್ಶನದಿಂದ ಬ್ಯಾಟಿಂಗ್ ತುಂಬಾ ಸುಲಭವಾಯಿತು ಎಂದು ಚಾಟಿ ಬೀಸಿದರು. ಸ್ಮರಣೀಯ ಗೆಲುವಿಗಾಗಿ ಇಂಗ್ಲೆಂಡ್‌ಗೆ ಅಭಿನಂದನೆಗಳು'' ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಒಟ್ಟು 53 ಟೆಸ್ಟ್ ಪಂದ್ಯಗಳಲ್ಲಿ 350+ ರನ್ ಗುರಿ ನೀಡಿದೆ ಭಾರತ; ಗೆದ್ದದ್ದು ಎಷ್ಟರಲ್ಲಿ? ಬಿದ್ದದ್ದು ಎಷ್ಟರಲ್ಲಿ?

ಇಂಗ್ಲೆಂಡ್ ಕುರಿತು ಬ್ರಾಡ್ ಹಾಗ್ ಹೇಳಿದ್ದೇನು?
ಎರಡೂ ತಂಡಗಳ ಕೋಚ್ ಮತ್ತು ನಾಯಕರ ಬದಲಾವಣೆಯೊಂದಿಗೆ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದೆ ಎಂದು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಬ್ರಾಡ್ ಹೌಗ್ ಹೇಳಿದ್ದಾರೆ. ಇದೊಂದು ಅದ್ಭುತ ಟೆಸ್ಟ್ ಪಂದ್ಯ ಎಂದು ಆಸೀಸ್ ಲೆಜೆಂಡ್ ಕೊಂಡಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪ್ರಾಬಲ್ಯ ಮೆರೆದಿರುವುದನ್ನು ಶ್ಲಾಘಿಸಿದ್ದಾರೆ. ಇದು ಹೊಸ ತಂಡವಾಗಿದ್ದು, ಈ ಪ್ರಯಾಣವನ್ನು ಆನಂದಿಸೋಣ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ನಾಲ್ಕನೇ ಬಾರಿಗೆ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶವಿತ್ತು
ಹೌದು ಟೀಂ ಇಂಡಿಯಾ ಆಂಗ್ಲರ ನೆಲದಲ್ಲಿ ನಾಲ್ಕನೇ ಬಾರಿಗೆ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶವಿತ್ತು. 1971, 1986, 2007ರಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನ ಇಂಗ್ಲೆಂಡ್‌ನಲ್ಲಿ ಗೆದ್ದಿದ್ದು, ನಾಲ್ಕನೇ ಬಾರಿಗೆ ಟ್ರೋಫಿ ಗೆಲ್ಲಬಹುದಿತ್ತು. 1971ರಲ್ಲಿ ಅಜಿತ್ ವಾಡೇಕರ್ ನಾಯಕತ್ವದಲ್ಲಿ 1-0 ಅಂತರದಲ್ಲಿ, 1986ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ 2-0 ಹಾಗೂ 2007ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 1-0 ಅಂತರದಲ್ಲಿ ಸರಣಿ ಗೆದ್ದಿತು. ಈ ಸರಣಿಯಲ್ಲಿ ಅನಿಲ್ ಕುಂಬ್ಳೆ ಸೆಂಚುರಿ ಸಿಡಿಸಿದ ಏಕೈಕ ಆಟಗಾರರಾಗಿದ್ದರು.
ಆದ್ರೆ 378ರನ್‌ಗಳ ದಾಖಲಿಸಿದ್ದರೂ ಸಹ ಗೆಲ್ಲುವ ಅವಕಾಶ ಕಳೆದುಕೊಂಡ ಟೀಂ ಇಂಡಿಯಾ 2-2ರ ಸರಣಿ ಸಮಬಲಕ್ಕೆ ತೃಪ್ತಿಪಟ್ಟಿತು. ನಾಲ್ಕನೇ ವಿಕೆಟ್‌ಗೆ ಜಾನಿ ಬೈಸ್ಟ್ರೋವ್ ಮತ್ತು ಜೋ ರೂಟ್ ಅಜೇಯ 269 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications