ಇಂಗ್ಲೆಂಡ್‌ನಲ್ಲಿ ಹೆಚ್ಚು ಟೆಸ್ಟ್ ರನ್ ಬಾರಿಸಿರುವ ಭಾರತೀಯರ ಟಾಪ್ 5 ಪಟ್ಟಿ; ಈಗಿನ ತಂಡದ ಒಬ್ಬನೇ ಆಟಗಾರ!

ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ನಂತರ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ಮುಖಮಾಡಿದ್ದು. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿ ನಡೆಯುತ್ತಿದೆ. ಈ ಸರಣಿ ಮುಕ್ತಾಯದ ನಂತರ ಇದೇ ತಿಂಗಳ ಕೊನೆಯಲ್ಲಿ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದ್ದು, ರೋಹಿತ್ ಶರ್ಮಾ ನಾಯಕತ್ವದ ತಂಡ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಒಂದು ಟೆಸ್ಟ್ ಪಂದ್ಯ, ಮೂರು ಟಿ ಟ್ವೆಂಟಿ ಪಂದ್ಯಗಳು ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.
ಕಳೆದ ವರ್ಷ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಆಯೋಜನೆಯಾಗಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಕೊರೊನಾ ವೈರಸ್ ಕಾರಣದಿಂದಾಗಿ ಅಂತಿಮ ಪಂದ್ಯ ಮುಂದೂಡಲ್ಪಟ್ಟು ಜುಲೈ 1ಕ್ಕೆ ಮರು ಆಯೋಜನೆಯಾಗಿದೆ. ಇನ್ನು ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದರೆ ಅಥವಾ ಪಂದ್ಯ ಡ್ರಾ ಆದರೆ ಟೀಮ್ ಇಂಡಿಯಾ ಸರಣಿಯ ವಿಜೇತ ಎನಿಸಿಕೊಳ್ಳಿದೆ ಅಥವಾ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಸರಣಿಯಲ್ಲಿ ಎರಡೂ ತಂಡಗಳೂ ಸಮಬಲ ಸಾಧಿಸಲಿವೆ. ಹೀಗಾಗಿ ಈ ಪಂದ್ಯ ಎರಡೂ ತಂಡಗಳಿಗೂ ಮಹತ್ವದ್ದಾಗಿದ್ದು, ಯಾವ ತಂಡ ಗೆಲ್ಲಲಿದೆ ಎಂಬ ಕುತೂಹಲ ಮೂಡಿದೆ.
ಇನ್ನು ಇಂಗ್ಲೆಂಡ್ ನೆಲದಲ್ಲಿ ಇಲ್ಲಿಯವರೆಗೂ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಭಾರತದ ಪರ ಯಾವ ಆಟಗಾರ ಅತಿಹೆಚ್ಚು ರನ್ ಕಲೆಹಾಕಿದ್ದಾರೆ ಹಾಗೂ ಇಂಗ್ಲೆಂಡ್‌ನಲ್ಲಿ ಹೆಚ್ಚು ರನ್ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 5 ಪಟ್ಟಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಟಾಪ್ 5 ಪಟ್ಟಿ
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೂ ಇಂಗ್ಲೆಂಡ್ ನೆಲದಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಅತಿಹೆಚ್ಚು ರನ್ ಬಾರಿಸಿರುವ ಟಾಪ್ 5 ಭಾರತೀಯ ಕ್ರಿಕೆಟಿಗರ ಪಟ್ಟಿ ಕೆಳಕಂಡಂತಿದೆ.
1. ಸಚಿನ್ ತೆಂಡೂಲ್ಕರ್ - 1575 ರನ್ ( 17 ಪಂದ್ಯಗಳು )
2. ರಾಹುಲ್ ದ್ರಾವಿಡ್ - 1376 ರನ್ ( 13 ಪಂದ್ಯಗಳು )
3. ಸುನಿಲ್ ಗವಾಸ್ಕರ್ - 1152 ರನ್ ( 16 ಪಂದ್ಯಗಳು )
4. ವಿರಾಟ್ ಕೊಹ್ಲಿ - 1002 ರನ್ ( 15 ಪಂದ್ಯಗಳು )
5. ದಿಲೀಪ್ ವೆಂಗ್‌ಸರ್ಕಾರ್ - 960 ರನ್ ( 13 ಪಂದ್ಯಗಳು )

ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ ದಾಖಲೆ
ಇಂಗ್ಲೆಂಡ್ ನೆಲದಲ್ಲಿ ಅತಿಹೆಚ್ಚು ಟೆಸ್ಟ್ ರನ್ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಇಂಗ್ಲೆಂಡ್‌ನಲ್ಲಿ ಒಟ್ಟು 17 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 1575 ರನ್ ಕಲೆಹಾಕಿದ್ದು, 4 ಶತಕ ಮತ್ತು 8 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಪಟ್ಟಿಯಲ್ಲಿರುವ ಈಗಿನ ತಂಡದ ಏಕೈಕ ಆಟಗಾರ ಕೊಹ್ಲಿ
ಇನ್ನು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಸಕ್ರಿಯ ಭಾರತೀಯ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ಇಂಗ್ಲೆಂಡ್ ನೆಲದಲ್ಲಿ ಒಟ್ಟು 15 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 1002 ರನ್ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ 2 ಶತಕ ಮತ್ತು 5 ಅರ್ಧಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications