ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ ಕ್ರೀಡಾಂಗಣದಲ್ಲಿಯೂ ಡಿಕೆಗೆ ಜೈಕಾರ; ದಿನೇಶ್ ಕಾರ್ತಿಕ್ ಕ್ರೇಜ್ ವಿಡಿಯೋ ಹಂಚಿಕೊಂಡ ಐರ್ಲೆಂಡ್ ಕ್ರಿಕೆಟಿಗ

IND vs IRE: Dublin ground crowd goes crazy when Dinesh Karthik came to bat in the 1st T20

ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ 2 ಟಿ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿದಿದೆ.

ಭಾರತ vs ಐರ್ಲೆಂಡ್ 2ನೇ ಟಿ20: ಪಿಚ್ ವರದಿ, ಸಂಭಾವ್ಯ ಆಡುವ ಬಳಗ ಮತ್ತು ನೇರಪ್ರಸಾರದ ಮಾಹಿತಿಭಾರತ vs ಐರ್ಲೆಂಡ್ 2ನೇ ಟಿ20: ಪಿಚ್ ವರದಿ, ಸಂಭಾವ್ಯ ಆಡುವ ಬಳಗ ಮತ್ತು ನೇರಪ್ರಸಾರದ ಮಾಹಿತಿ

ಹೌದು, ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, ಅನುಭವಿ ಆಟಗಾರರು ಹಾಗೂ ಫಾರ್ಮ್ ಹೊಂದಿರುವ ಹಲವು ಟೀಮ್ ಇಂಡಿಯಾ ಆಟಗಾರರು ಈ ಇಂಗ್ಲೆಂಡ್ ಪ್ರವಾಸದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಯುವ ಆಟಗಾರರನ್ನೊಳಗೊಂಡ ಹಾಗೂ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಮರಳಿರುವ ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ರಚಿಸಿದ್ದು, ಐರ್ಲೆಂಡ್ ಪ್ರವಾಸಕ್ಕೆ ಕಳುಹಿಸಿದೆ.

ಭಾರತ vs ಐರ್ಲೆಂಡ್: ಆಡಿರುವ 4 ಟಿ20 ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯ ಗೆದ್ದಿದೆ? ಇಲ್ಲಿದೆ ಮಾಹಿತಿಭಾರತ vs ಐರ್ಲೆಂಡ್: ಆಡಿರುವ 4 ಟಿ20 ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯ ಗೆದ್ದಿದೆ? ಇಲ್ಲಿದೆ ಮಾಹಿತಿ

ಹೀಗೆ ಐರ್ಲೆಂಡ್ ಪ್ರವಾಸಕ್ಕೆ ಪ್ರಕಟವಾದ ಟೀಮ್ ಇಂಡಿಯಾದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹಾಗೂ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ ದಿನೇಶ್ ಕಾರ್ತಿಕ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದು, ಇತ್ತಂಡಗಳ ನಡುವೆ ನಡೆದ ಪ್ರಥಮ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದಾರೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ದಿನೇಶ್ ಕಾರ್ತಿಕ್ ಕಣಕ್ಕಿಳಿದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳು ಡಿಕೆ ಡಿಕೆ ಎಂದು ಕೂಗಿದ್ದಾರೆ. ಈ ವಿಡಿಯೋವನ್ನು ಐರ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಿಯಾಲ್ ಜಾನ್ ಒ ಬ್ರಿಯನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಡಿಕೆ ದ ಕ್ರೌಡ್ ಫೇವರಿಟ್

ಡಿಕೆ ದ ಕ್ರೌಡ್ ಫೇವರಿಟ್

ದಿನೇಶ್ ಕಾರ್ತಿಕ್ ಐರ್ಲೆಂಡ್ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಮೈದಾನವನ್ನು ಪ್ರವೇಶಿಸುವಾಗ ಸ್ಟೇಡಿಯಂನಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳು 'ಡಿಕೆ ಡಿಕೆ' ಎಂದು ಕೆಲ ಸಮಯ ನಿರಂತರವಾಗಿ ಕೂಗಿದ್ದಾರೆ. ಈ ವಿಡಿಯೋವನ್ನು ಒ ಬ್ರಿಯನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಮೈದಾನದಲ್ಲಿ ನೆರೆದಿರುವ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಆಟಗಾರ ದಿನೇಶ್ ಕಾರ್ತಿಕ್ ( ಡಿಕೆ ದ ಕ್ರೌಡ್ ಫೇವರಿಟ್ ) ಎಂದು ಬರೆದುಕೊಂಡಿದ್ದಾರೆ.

ಅಜೇಯನಾಗಿ ಉಳಿದ ಕಾರ್ತಿಕ್, ಪಂದ್ಯ ಗೆದ್ದ ಭಾರತ

ಅಜೇಯನಾಗಿ ಉಳಿದ ಕಾರ್ತಿಕ್, ಪಂದ್ಯ ಗೆದ್ದ ಭಾರತ

ಇನ್ನು ಈ ಪಂದ್ಯದಲ್ಲಿ ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ 4 ಎಸೆತಗಳಲ್ಲಿ ಅಜೇಯ 5 ರನ್ ಕಲೆ ಹಾಕಿದರು ಹಾಗೂ ಈ ಸಂದರ್ಭದಲ್ಲಾಗಲೇ ಟೀಮ್ ಇಂಡಿಯಾ ಐರ್ಲೆಂಡ್ ನೀಡಿದ್ದ ಗುರಿಯನ್ನು ತಲುಪಿ ಗೆಲುವಿನ ಕೇಕೆ ಹಾಕಿತ್ತು. 9.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಚಚ್ಚಿದ್ದ ಟೀಮ್ ಇಂಡಿಯಾ 7 ವಿಕೆಟ್‍ಗಳ ಭರ್ಜರಿ ಗೆಲುವು ಕಂಡಿತು.

ಅಬ್ಬರಿಸಿದ ದೀಪಕ್ ಹೂಡಾ

ಅಬ್ಬರಿಸಿದ ದೀಪಕ್ ಹೂಡಾ

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡ ದೀಪಕ್ ಹೂಡಾ ಇಶಾನ್ ಕಿಶನ್ ಜತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 29 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ ಅಜೇಯ 47 ರನ್ ಚಚ್ಚಿದರು. ಈ ಇನ್ನಿಂಗ್ಸ್ ಮೂಲಕ ದೀಪಕ್ ಹೂಡಾ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.

Story first published: Monday, June 27, 2022, 20:04 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X