Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಕ್ಲೆಂಡ್ ಬೌಂಡರಿ ಕೇವಲ 45 ಮೀಟರ್: ಡಬಲ್ ಸೆಂಚುರಿ ಸಿಡಿಸ್ತಾರ ಸೂರ್ಯಕುಮಾರ್ ಯಾದವ್?

Suryakumar yadav

ಚುಟುಕು ಕ್ರಿಕೆಟ್ ಸರಣಿಯನ್ನ ಗೆದ್ದ ಬಳಿಕ ಭಾರತ, ಶುಕ್ರವಾರದಿಂದ (ನ.25) ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮುನ್ನಡೆಯಲಿದೆ. ಟಿ20 ಸರಣಿಯನ್ನ 1-0 ಅಂತರದಲ್ಲಿ ಜಯಿಸಿದ ಬಳಿಕ, ಇದೀಗ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ.

ಈ ಸರಣಿಯಲ್ಲಿ ಕೆಲವೊಬ್ಬರು ಪ್ರತಿಭಾನ್ವಿತ ಯುವ ಆಟಗಾರರು ಪದಾರ್ಪಣೆಗೆ ಸಜ್ಜಾಗಿದ್ದಾರೆ. ಉಮ್ರಾನ್ ಮಲಿಕ್ , ಅರ್ಷ್‌ದೀಪ್ ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಪ್ರಮುಖರಾಗಿದ್ದಾರೆ.

ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರಿಸುವುದನ್ನ ಕಾಣಬಹುದು. ಅದ್ರಲ್ಲೂ ಶುಕ್ರವಾರ ನಡೆಯುವ ಪಂದ್ಯದ ಆತಿಥ್ಯ ವಹಿಸಿರುವ ಆಕ್ಲೆಂಡ್‌ನ ಈಡೆನ್ ಪಾರ್ಕ್‌ ಚಿಕ್ಕ ಬೌಂಡರಿಗಳನ್ನ ಹೊಂದಿದ್ದು, ಸೂರ್ಯನಂತಹ 360 ಡಿಗ್ರಿ ಬ್ಯಾಟರ್‌ಗೆ ಹೇಳಿ ಮಾಡಿಸಿದ ಹಾಗಿದೆ.

ಈಡನ್ ಪಾರ್ಕ್‌ನ ಬೌಂಡರಿ ಕುರಿತಾಗಿ ನೋಡುವುದಾದ್ರೆ ಸ್ಟ್ರೈಟ್ ಬೌಂಡರಿ 50 ಮೀಟರ್‌ಗಿಂತ ಕಡಿಮೆಯಿದೆ. ಸೈಡ್ ಬೌಂಡರ್ ಕೇವಲ 65 ಮೀಟರ್‌ ಇದ್ದು, ಸೂರ್ಯಕುಮಾರ್ ಯಾದವ್ ವಿಕೆಟ್ ಕೀಪರ್ ಹಿಂಬದಿ ಸಿಕ್ಸರ್ ಅನ್ನು ಸುಲಭವಾಗಿ ಸಿಡಿಸಲಿದ್ದಾರೆ.

ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್‌ಗೆ ಶುಕ್ರವಾರ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ ಬಳಿ, ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ದ್ವಿತಶಕ ಸಿಡಿಸಲಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದು, ಈ ಕೆಳಗಿನಂತೆ ಟ್ವೀಟ್ ಮಾಡಿದ್ದಾರೆ.

Story first published: Thursday, November 24, 2022, 23:37 [IST]
Other articles published on Nov 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+