Ind vs Nz 1st ODI: ಟಾಮ್ ಲಥಾಮ್ ಅಬ್ಬರದ ಶತಕ, ಭಾರತಕ್ಕೆ ಸೋಲು

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಭಾರತ ನೀಡಿದ್ದ 307 ರನ್ ಗುರಿಯನ್ನ ಯಶಸ್ವಿಯಾಗಿ ಬೆನ್ನಟ್ಟಿದ ನ್ಯೂಜಿಲೆಂಡ್ ಅಮೋಘ ಗೆಲುವು ಸಂಪಾದಿಸಿದೆ.
ನ್ಯೂಜಿಲೆಂಡ್ ಪರ ಭರ್ಜರಿ ಶತಕ ದಾಖಲಿಸಿದ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲಥಾಮ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರೆ, ನಾಯಕ ಕೇನ್ ವಿಲಿಯಮ್ಸನ್ ಆ್ಯಂಕರ್ ಇನ್ನಿಂಗ್ಸ್ ಆಡಿದ್ರು

ಟಾಮ್ ಲಥಾಮ್ ಅಬ್ಬರಕ್ಕೆ ನಲುಗಿದ ಟೀಂ ಇಂಡಿಯಾ ಬೌಲರ್ಸ್
ಟೀಂ ಇಂಡಿಯಾ ನೀಡಿದ್ದ ಗುರಿಯನ್ನ ಬೆನ್ನಟ್ಟಿದ ಆತಿಥೇಯ ಕಿವೀಸ್ ಪರ ಫಿನ್ ಅಲೆನ್ 25, ಡೆವೊನ್ ಕಾನ್ವೆ 24, ಡೆರಿಲ್ ಮಿಚೆಲ್ 11ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಓಪನಿಂಗ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲಥಾಮ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ನಾಲ್ಕನೇ ವಿಕೆಟ್‌ಗೆ ಮುರಿಯದ ಜೊತೆಯಾಟವಾಡುವ ಮೂಲಕ ಅಬ್ಬರಿಸಿದರು.
ಕೇವಲ 76 ಎಸೆತಗಳಲ್ಲಿ ಶತಕ ದಾಖಲಿಸಿದ ಟಾಮ್ ಲಥಾಮ್ ಮಿಂಚಿನಾಟವಾಡುವ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಶಾದೂಲ್ ಠಾಕೂರ್‌ನ ಒಂದೇ ಓವರ್‌ನಲ್ಲಿ 25ರನ್ ಚಚ್ಚಿದ ಟಾಮ್ ಲಥಾಮ್ ಒಟ್ಟಾರೆ 104 ಎಸೆತಗಳಲ್ಲಿ ಅಜೇಯ 145 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 139.42ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಲಥಾಮ್ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು.
ಇನ್ನು ಲಥಾಮ್‌ಗೆ ಉತ್ತಮ ಸಾಥ್ ಕೊಟ್ಟ ನಾಯಕ ಕೇನ್ ವಿಲಿಯಮ್ಸನ್ ತಾಳ್ಮೆಯುತ ಆಟವಾಡುವ ಮೂಲಕ 98 ಎಸೆತಗಳಲ್ಲಿ ಅಜೇಯ 94 ರನ್ ಕಲೆಹಾಕಿ ಗೆಲುವಿನ ರನ್ ಬಾರಿಸಿದ್ರು. ಕೇವಲ 6 ರನ್‌ಗಳಲ್ಲಿ ಶತಕ ವಂಚಿತರಾದ ವಿಲಿಯಮ್ಸನ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ನ್ಯೂಜಿಲೆಂಡ್ 47.1 ಓವರ್‌ಗಳಲ್ಲಿಯೇ ಗುರಿ ತಲುಪುವ ಮೂಲಕ 7 ವಿಕೆಟ್‌ಗಳ ಜಯ ಸಾಧಿಸಿತು.
ಭಾರತದ ಪರ ಚೊಚ್ಚಲ ಪಂದ್ಯದಲ್ಲೇ ಉಮ್ರಾನ್ ಮಲಿಕ್ 2 ವಿಕೆಟ್ ಕಬಳಿಸಿದ್ರೆ, ಶಾದೂಲ್ ಠಾಕೂರ್ 1 ವಿಕೆಟ್ ಪಡೆದರು.

ಭಾರತದ ಪರ ಅರ್ಧಶತಕ ದಾಖಲಿಸಿದ ಗಬ್ಬರ್, ಶುಭಮನ್, ಶ್ರೇಯಸ್ ಅಯ್ಯರ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಅರ್ಧಶತಕ ದಾಖಲಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಶುಭಮನ್ 50ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಶಿಖರ್ ಧವನ್ 72 ರನ್ ಕಲೆಹಾಕಿ ಸೌಥಿ ಬೌಲಿಂಗ್‌ನಲ್ಲಿ ಔಟಾದರು.
ಎರಡು ವಿಕೆಟ್ ಉರುಳಿದ ಬೆನ್ನಲ್ಲೇ ಭಾರತ ಇನ್ನೆರಡು ವಿಕೆಟ್ ಬಹುಬೇಗನೆ ಕಳೆದುಕೊಂಡಿತು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಷಭ್ ಪಂತ್ 15, ಸೂರ್ಯಕುಮಾರ್ ಯಾದವ್ 4ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಆದ್ರೆ ಐದನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ತಂಡವನ್ನು 300ರ ಗಡಿ ದಾಟಿಸುವಲ್ಲಿ ನೆರವಾದ್ರು. 76 ಎಸೆತಗಳಲ್ಲಿ 80 ರನ್ ಕಲೆಹಾಕಿದ ಅಯ್ಯರ್ ತಲಾ ನಾಲ್ಕು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದ್ರೆ, ಸ್ಯಾಮ್ಸನ್ 36 ರನ್ ಕಲೆಹಾಕಿ ಅಂತಿಮ ಹಂತದಲ್ಲಿ ವಿಕೆಟ್ ಒಪ್ಪಿಸಿದ್ರು.
ಆದ್ರೆ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 16 ಎಸೆತಗಳಲ್ಲಿ 37 ರನ್ ಸಿಡಿಸುವ ಮೂಲಕ ತಂಡದ ಸ್ಕೋರ್ 300ರ ಗಡಿದಾಟಿತು. ಅಂತಿಮವಾಗಿ ಭಾರತ ಏಳು ವಿಕೆಟ್ ನಷ್ಟಕ್ಕೆ 306 ರನ್ ಕಲೆಹಾಕಿತು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ ಹಾಗೂ ಲ್ಯೂಕಿ ಫರ್ಗುಸನ್ ತಲಾ 3 ವಿಕೆಟ್ ಪಡೆದರು. ಆ್ಯಡಂ ಮಿಲ್ನೆ 1 ವಿಕೆಟ್ ಪಡೆದರು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜವೇಂದ್ರ ಚಾಹಲ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲ್ಯೂಕಿ ಫರ್ಗುಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications