IND vs NZ 1st ODI: ದ್ವಿಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆ ಮುರಿದ ಶುಭ್ಮನ್ ಗಿಲ್

ಬುಧವಾರ, ಜನವರಿ 18ರಂದು ಹೈದರಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಭಾರತದ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ದಾಖಲೆ ಬರೆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಶುಭ್ಮನ್ ಗಿಲ್ ಕೇವಲ 149 ಎಸೆತಗಳಲ್ಲಿ 208 ರನ್ ಬಾರಿಸಿದರು.
ಶುಭ್ಮನ್ ಗಿಲ್ ಅವರ ಚೊಚ್ಚಲ ಮತ್ತು ಭಾರತ ತಂಡದ ಪರ ಏಳನೇ ಏಕದಿನ ದ್ವಿಶತಕದ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 349 ರನ್‌ಗಳನ್ನು ಗಳಿಸಿದರು. ಶುಭ್ಮನ್ ಗಿಲ್ ಹೊರತುಪಡಿಸಿ ಬೇರಾವ ಬ್ಯಾಟರ್‌ಗಳ 50ರ ಗಡಿ ದಾಟಲಿಲ್ಲ. ರೋಹಿತ್ ಶರ್ಮಾ ಗಳಿಸಿದ 34 ರನ್ ಭಾರತದ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.
ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಕಿವೀಸ್ ಬೌಲರ್‌ಗಳ ವಿರುದ್ಧ ದೊಡ್ಡ ಮೊತ್ತ ಗಳಿಸದೆ ಕಳಪೆಯಾಗಿ ಔಟ್ ಆದರು. ಇನ್ನು ಶುಭ್ಮನ್ ಗಿಲ್ 208 ರನ್ ಗಳಿಸಿ ಅನೇಕ ದಾಖಲೆಗಳನ್ನು ಮುರಿದ್ದಿದ್ದು, ಅವುಗಳು ಇಲ್ಲಿವೆ.

ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ರನ್ ದಾಖಲಿಸಿದ ಶುಭ್ಮನ್ ಗಿಲ್
ಶುಭ್ಮನ್ ಗಿಲ್ ತಮ್ಮ 208 ರನ್‌ಗಳ ಹಾದಿಯಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಒಂದು ವಿಶಿಷ್ಟ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಮುರಿದರು.
ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸಚಿನ್ ತೆಂಡೂಲ್ಕರ್ 1999ರಲ್ಲಿ 186 ರನ್‌ಗಳ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಶುಭ್ಮನ್ ಗಿಲ್ ಅಳಿಸಿ ಹಾಕಿದರು.
ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ವೈಯಕ್ತಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಶುಭ್ಮನ್ ಗಿಲ್ ಇದೀಗ ಮೊದಲ ಸ್ಥಾನದಲ್ಲಿದ್ದು, ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ 2007ರಲ್ಲಿ 181 ರನ್ ಗಳಿಸಿರುವ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಇದ್ದಾರೆ ಮತ್ತು 1994ರಲ್ಲಿ 169 ರನ್ ಗಳಿಸಿರುವ ಡಿ ಕ್ಯಾಲಘನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್
ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಶಾನ್ ಕಿಶನ್ 24 ವರ್ಷ 145 ದಿನಗಳಲ್ಲಿ ಬಾಂಗ್ಲಾದೇಶ ವಿರುದ್ಧ ಡಬಲ್ ಶತಕ ಸಿಡಿಸಿದ್ದು ಹಿಂದಿನ ದಾಖಲೆಯಾಗಿತ್ತು.
ಇದೀಗ ಶುಭ್ಮನ್ ಗಿಲ್ ಈಗ 23 ವರ್ಷ ಮತ್ತು 132 ದಿನಗಳಲ್ಲಿ ಇದನ್ನು ಮಾಡಿದ್ದಾರೆ. ರೋಹಿತ್ ಶರ್ಮಾ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 26 ವರ್ಷ ಮತ್ತು 186 ದಿನಗಳಲ್ಲಿ ದ್ವಿಶತಕ ಸಿಡಿಸಿ ಮೂರನೇ ಕಿರಿಯ ಆಟಗಾರರಾಗಿದ್ದಾರೆ.

ವಿರಾಟ್ ಕೊಹ್ಲಿ ವೇಗದ 1000 ರನ್ ದಾಖಲೆ ಮುರಿದ ಶುಭ್ಮನ್ ಗಿಲ್
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಬಾರಿಸಿ ಶುಭ್ಮನ್ ಗಿಲ್ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಶುಭ್ಮನ್ ಗಿಲ್ ಕೇವಲ 19 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದರು. 24 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಹೆಗ್ಗುರುತನ್ನು ತಲುಪಿದ ಅತ್ಯಂತ ವೇಗದ ಭಾರತೀಯ ಆಟಗಾರನಾಗಿದ್ದಾರೆ.
ಪಾಕಿಸ್ತಾನದ ಫಖರ್ ಜಮಾನ್ 18 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ. ಶುಭ್ಮನ್ ಗಿಲ್ ಮತ್ತು ಇಮಾಮ್-ಉಲ್-ಹಕ್ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವಿವ್ ರಿಚರ್ಡ್ಸ್, ಕೆವಿನ್ ಪೀಟರ್ಸನ್, ಜೊನಾಥನ್ ಟ್ರಾಟ್, ಕ್ವಿಂಟನ್ ಡಿ ಕಾಕ್, ಬಾಬರ್ ಅಜಂ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 21 ಇನ್ನಿಂಗ್ಸ್‌ಗಳಲ್ಲಿ 1000 ರನ್ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications