For Quick Alerts
ALLOW NOTIFICATIONS  
For Daily Alerts
 

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ 5 ವಿಕೆಟ್‌ಗಳಷ್ಟೇ ಬಾಕಿ!

Team india

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಬಳಗ ಜಯದ ಗೆಲುವಿನ ಗೆರೆಯನ್ನ ಸಮೀಪಿಸಿದೆ. ಭಾರತ ನೀಡಿರುವ 540 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿರುವ ನ್ಯೂಜಿಲೆಂಡ್ ಅದಾಗಲೇ ಐದು ವಿಕೆಟ್ ನಷ್ಟಕ್ಕೆ 140 ರನ್‌ ಕಲೆಹಾಕಿದೆ. ಗೆಲುವಿಗೆ ಇನ್ನೂ 400 ರನ್‌ ಬಾಕಿ ಇದೆ.

ಭಾರತದ ಬೆಟ್ಟದಂತಹ ಮೊತ್ತವನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಆರಂಭದಲ್ಲೇ ಆರ್.ಅಶ್ವಿನ್ ಆಘಾತ ನೀಡಿದ್ರು. ಕಿವೀಸ್ ನಾಯಕ ಟಾಮ್ ಲಥಾಮ್ ಕೇವಲ 6ರನ್‌ಗೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದಿದ್ದಲ್ಲದೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ 8ನೇ ಬಾರಿಗೆ ವಿಕೆಟ್ ಒಪ್ಪಿಸಿದ್ರು.

ಇದ್ರ ಬೆನ್ನಲ್ಲೇ ವಿಲ್‌ಯಂಗ್ ಕೊಂಚ ಸೆಟಲ್ ಆದ್ರೂ ಅನ್ನುವಷ್ಟರಲ್ಲಿ ಮತ್ತೊಮ್ಮೆ ಅಶ್ವಿನ್ ದಾಳಿಯಲ್ಲಿ ಸಬ್ ಫೀಲ್ಡರ್ ಸೂರ್ಯಕುಮಾರ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ರು. ಅನುಭವಿ ರಾಸ್‌ ಟೇಲರ್ ಕೂಡ ಅಶ್ವಿನ್ ಸ್ಪಿನ್ ಮಂತ್ರಕ್ಕೆ ತಲೆಬಾಗಿದ್ರು. ಆದ್ರೆ ಡೆರಿಲ್ ಮಿಚೆಲ್ 60 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಅಕ್ಷರ್‌ ಪಟೇಲ್‌ ವಿಕೆಟ್‌ಗೆ ವಿಕೆಟ್ ಒಪ್ಪಿಸಿ ನಿರಾಸೆಯಿಂದ ಪೆವಿಲಿಯನ್ ಸೇರಿಕೊಂಡ್ರು. ಹೆನ್ರಿ ನಿಕೋಲ್ಸ್‌ ಅಜೇಯ 36ರನ್‌ಗಳಿಸಿ ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಆದ್ರೆ ನ್ಯೂಜಿಲೆಂಡ್ ಅದಾಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ಭಾರತದ ಗೆಲುವಿಗೆ ಇನ್ನು ಐದು ವಿಕೆಟ್‌ಗಳಷ್ಟೇ ಬಾಕಿ ಉಳಿದಿದೆ.

276 ರನ್‌ಗೆ ಡಿಕ್ಲೇರ್ ಮಾಡಿಕೊಂಡ ಭಾರತ

276 ರನ್‌ಗೆ ಡಿಕ್ಲೇರ್ ಮಾಡಿಕೊಂಡ ಭಾರತ

ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮುಂದುವರಿಸಿತು. ಉತ್ತಮ ಲೀಟ್‌ನೊಂದಿಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 276 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಭಾರತವು 539 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.

ಭಾರತದ ಮೊದಲ ಇನ್ನಿಂಗ್ಸ್‌ 325 ರನ್‌ಗಳಿಗೆ ಉತ್ತರವಾಗಿ ಬೌಲಿಂಗ್ ಮಾಡಿದ ಕಿವೀಸ್ ಪಡೆ ಸಿರಾಜ್ ಮತ್ತು ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿ 62 ರನ್‌ಗಳಿಗೆ ಆಲೌಟ್‌ ಆಗಿ ಹೀನಾಯವಾಗಿ ಹಿನ್ನಡೆ ಕಂಡಿತ್ತು. ಇದಕ್ಕೆ ಉತ್ತರವಾಗಿ ನಿನ್ನೆ(2ನೇ ದಿನದಾಟ) ಬ್ಯಾಟಿಂಗ್ ಮಾಡಿದ್ದ ಭಾರತ ವಿಕೆಟ್ ನಷ್ಟವಿಲ್ಲದೆ 69 ರನ್ ಕಲೆಹಾಕಿತು. ಜೊತೆಗೆ 332ರನ್ ಲೀಡ್ ಪಡೆದುಕೊಂಡಿತ್ತು.

ಭಾರತ vs ನ್ಯೂಜಿಲೆಂಡ್: ಪೂಜಾರ ಕಳಪೆ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಲಕ್ಷ್ಮಣ್

ಟಾಪ್‌ ಆರ್ಡರ್ ಬ್ಯಾಟ್ಸ್‌ಮನ್‌ಗಳ ಉತ್ತಮ ಬ್ಯಾಟಿಂಗ್

ಟಾಪ್‌ ಆರ್ಡರ್ ಬ್ಯಾಟ್ಸ್‌ಮನ್‌ಗಳ ಉತ್ತಮ ಬ್ಯಾಟಿಂಗ್

ಮೂರನೇ ದಿನದಾಟ ಕೊಂಚ ನಿಧಾನವಾಗಿ ಆರಂಭಗೊಂಡರೂ, ಭಾರತದ ಬ್ಯಾಟ್ಸ್‌ಮನ್‌ಗಳು ತಮ್ಮ ಸೊಗಸಾದ ಬ್ಯಾಟಿಂಗ್ ಮುಂದುವರಿಸಿದ್ರು. ಮೊದಲ ಇನ್ನಿಂಗ್ಸ್‌ 150 ರನ್‌ಸಿಡಿಸಿದ್ದ ಓಪನರ್ ಮಯಾಂಕ್ ಅಗರ್ವಾಲ್ ಮತ್ತೊಂದು ಅರ್ಧಶತಕವನ್ನ ತಮ್ಮ ಹೆಸರಿಗೆ ದಾಖಲಿಸಿಕೊಂಡ್ರು.

ಮಯಾಂಕ್‌ಗೆ ಉತ್ತಮ ಸಾಥ್ ನೀಡಿದ್ದ ಚೇತೇಶ್ವರ ಪೂಜಾರ ಸ್ವಲ್ಪ ಅಗ್ರೆಸ್ಸಿವ್ ಆಗಿಯೇ ಬ್ಯಾಟ್‌ ಬೀಸಿದ್ರು. ಆದ್ರೆ ಅರ್ಧಶತಕಕ್ಕೆ ಮೂರು ರನ್‌ಗಳಿರುವಂತೆ ಅಜಾಜ್ ಪಟೇಲ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. ಇದಕ್ಕೂ ಮೊದಲು ಮಯಾಂಕ್ ಅಗರ್ವಾಲ್ 62ರನ್‌ ದಾಖಲಿಸಿ ಅಜಾಜ್ ಪಟೇಲ್‌ಗೆ ಪಂದ್ಯದಲ್ಲಿ 12ನೇ ಬಲಿಯಾದ್ರು.

ಇನ್ನು ಮೊಣಕೈ ನೋವಿನಿಂದಾಗಿ ಓಪನಿಂಗ್ ಇಳಿಯದ ಶುಭ್ಮನ್ ಗಿಲ್ ಕೂಡ 75 ಎಸೆತಗಳಲ್ಲಿ 47ರನ್‌ ಸಿಡಿಸಿ ಅರ್ಧಶತಕಕ್ಕೆ ಮೂರು ರನ್‌ಗಳಿರುವಂತೆ ಅಜಾಜ್ ಪಟೇಲ್‌ಗೆ ಔಟಾಗಿ ಬೇಸರ ಮೂಡಿಸಿದ್ರು. ನಾಯಕ ವಿರಾಟ್ ಕೊಹ್ಲಿ ಆಟವೂ 36 ರನ್‌ಗೆ ಕೊನೆಗೊಂಡಿತು.

ಒಮಿಕ್ರೋನ್ ವೈರಸ್ ಭೀತಿ: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಒಂಭತ್ತು ದಿನ ಮುಂದೂಡಿಕೆ

ಅರ್ಧಶತಕ ದಾಖಲಿಸಲು ಸಾಧ್ಯವಾಗದ ವಿರಾಟ್!

ಅರ್ಧಶತಕ ದಾಖಲಿಸಲು ಸಾಧ್ಯವಾಗದ ವಿರಾಟ್!

ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ವಿರಾಟ್‌, ಎರಡನೇ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಮುಟ್ಟುವಲ್ಲಿ ವಿಫಲಗೊಂಡ್ರು. ರಚಿನ್ ರವೀಂದ್ರ ಬೌಲಿಂಗ್‌ನಲ್ಲಿ ಔಟ್‌ಸೈಡ್ ಹೋಗುತ್ತಿದ್ದ ಚೆಂಡನ್ನ ಕೆಣಕಲು ಹೋಗಿ ಇನ್‌ಸೈಡ್ ಎಡ್ಜ್‌ ಆಗಿ ಬೌಲ್ಡ್ ಆದ್ರು. ಕೊಹ್ಲಿ 36ರನ್‌ಗಳ ಕೊಡುಗೆ ನೀಡಿ ಪೆವಿಲಿಯನ್ ಸೇರಿಕೊಂಡ್ರು.

ಮೊದಲ ಟೆಸ್ಟ್‌ನ ಸೆಂಚುರಿ ಸರದಾರ ಶ್ರೇಯಸ್ ಅಯ್ಯರ್ 14ರನ್, ವೃದ್ದಿಮಾನ್ ಸಾಹಾ 13ರನ್‌ಗೆ ತಮ್ಮ ಇನ್ನಿಂಗ್ಸ್‌ ಮುಗಿಸಿದ್ರು. ಆದ್ರೆ ಒಂದೆಡೆ ಸ್ಫೋಟಕ ಆಟವಾಡಿದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕೇವಲ 26 ಎಸೆತಗಳಲ್ಲಿ ಅಜೇಯ 41ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ಗಳಿದ್ದವು.

ಒಂದು ಸಿಕ್ಸರ್ ಸಿಡಿಸಿದ್ದ ಜಯಂತ್ ಯಾದವ್ ಅಜಾಜ್ ಪಟೇಲ್‌ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಣೆ ಮಾಡಿಕೊಂಡ್ರು. ಭಾರತವು ಎರಡನೇ ಇನ್ನಿಂಗ್ಸ್ ಏಳು ವಿಕೆಟ್ ನಷ್ಟಕ್ಕೆ 276ರನ್ ಕಲೆಹಾಕಿತು. ಈ ಮೂಲಕ 539ರನ್‌ಗಳ ಬೃಹತ್ ಲೀಡ್ ಪಡೆಯಿತು.

ಆಟ ನಿಲ್ಲಲು ಕಾರಣವಾದ ಕ್ಯಾಮೆರಾ ಎದುರು ಟೀಮ್ ಇಂಡಿಯಾ ಮಸ್ತಿ | Oneindia Kannada
ಅಜಾಜ್ ಪಟೇಲ್ ದಾಖಲೆ

ಅಜಾಜ್ ಪಟೇಲ್ ದಾಖಲೆ

ನ್ಯೂಜಿಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಸ್ಪಿನ್ನರ್ ಅಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ಜೊತೆಗೆ ಒಟ್ಟಾರೆ ಮ್ಯಾಚ್‌ನಲ್ಲಿ 14 ವಿಕೆಟ್‌ ತಮ್ಮದಾಗಿಸಿಕೊಂಡಿದ್ದಾರೆ. ಇದು ನ್ಯೂಜಿಲೆಂಡ್ ಪರ ಎರಡನೇ ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ. ಭಾರತದ ನೆಲದಲ್ಲಿ ವಿದೇಶಿ ಬೌಲರ್‌ನ ಬೆಸ್ಟ್ ಬೌಲಿಂಗ್ ಫಿಗರ್ ಕೂಡ ಇದಾಗಿದೆ.

ಈ ಮೊದಲು 1980ರಲ್ಲಿ ಇಯಾನ್ ಬಾಥಮ್ 13 ವಿಕೆಟ್ ಕಬಳಿಸಿದ್ರು. ಆದ್ರೆ ಅಜಾಜ್ ಪಟೇಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಸೂಪರ್ ಬೌಲಿಂಗ್ ಮಾಡಿದ್ದಾರೆ. ಇದರ ಜೊತೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಯಾವುದೇ ಬೌಲರ್‌ ಗಳಿಸಿದ ಬೆಸ್ಟ್ ಬೌಲಿಂಗ್ ಇದಾಗಿದೆ.

ಅಜಾಜ್ ಪಟೇಲ್ ಬೌಲಿಂಗ್ ರೆಕಾರ್ಡ್‌
ಓವರ್‌: 73.5
ಮೇಡನ್: 15
ರನ್: 225
ವಿಕೆಟ್: 14

Story first published: Sunday, December 5, 2021, 17:27 [IST]
Other articles published on Dec 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+