NZ vs IND: ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಸಾಲಿಗೆ ಸೇರಿದ ಶಿಖರ್ ಧವನ್

ಭಾರತ ಏಕದಿನ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಶಿಖರ್ ಧವನ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ. ಆದರೂ ಭಾರತದ ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ತಾವು ಆಡುತ್ತಿರುವ ಏಕದಿನ ಸ್ವರೂಪದಲ್ಲಿ ಪ್ರತಿ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ.
ನವೆಂಬರ್ 25ರ ಶುಕ್ರವಾರದಂದು ಅನುಭವಿ ಬ್ಯಾಟರ್ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದರು. ಭಾರತ ಸ್ಟ್ಯಾಂಡ್-ಇನ್ ನಾಯಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ ಭಾರತದ 7ನೇ ಬ್ಯಾಟರ್ ಆಗಿದ್ದಾರೆ.
ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿ ಸರಣಿಯ ಮೊದಲ ಪಂದ್ಯದಲ್ಲಿ 77 ಎಸೆತಗಳಲ್ಲಿ 72 ರನ್ ಗಳಿಸುವ ಮೂಲಕ ಶಿಖರ್ ಧವನ್ ಈ ಮೈಲಿಗಲ್ಲನ್ನು ಸಾಧಿಸಿದರು. ಶಿಖರ್ ಧವನ್ 12,000 ರನ್ ಗಳಿಸಲು 43 ರನ್ ಅಗತ್ಯವಿತ್ತು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಧವನ್ ನಂತರ ಈ ಸಾಧನೆ ಮಾಡಿದರು.

2023ರ ವಿಶ್ವಕಪ್‌ಗೆ ಭಾರತ ತಂಡದ ತಯಾರಿ
ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ 2023ರ ವಿಶ್ವಕಪ್‌ಗೆ ಭಾರತ ತನ್ನ ತಯಾರಿಯನ್ನು ಆರಂಭಿಸುತ್ತಿದ್ದು, ಈ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಗೆಲ್ಲುವ ಮೂಲಕ ಇನ್ನಷ್ಟು ಆತ್ಮವಿಶ್ವಾಸ ಗಳಿಸುವ ನಿರೀಕ್ಷೆ ಇದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಶಿಖರ್ ಧವನ್ ತಮ್ಮ 297ನೇ ಲಿಸ್ಟ್ ಎ ಪಂದ್ಯದಲ್ಲಿ 12,000 ರನ್ ಮೈಲುಗಲ್ಲು ಸಾಧಿಸಿದರು. ಧವನ್ 162 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 17 ಶತಕ ಮತ್ತು 30 ಅರ್ಧಶತಕಗಳನ್ನು ಒಳಗೊಂಡಂತೆ 6744 ರನ್ ಗಳಿಸಿದ್ದಾರೆ. ಕಳೆದ ಅನೇಕ ವರ್ಷಗಳಲ್ಲಿ ಶಿಖರ್ ಧವನ್ ದೇಶೀಯ ಸರ್ಕ್ಯೂಟ್‌ನಲ್ಲಿ ದೆಹಲಿ ತಂಡಕ್ಕಾಗಿ ಹೆಚ್ಚಿನ ರನ್ ಗಳಿಸಿದ್ದಾರೆ.

ಭಾರತ ತಂಡವನ್ನು ಹಲವು ಬಾರಿ ಶಿಖರ್ ಧವನ್ ಮುನ್ನಡೆಸಿದ್ದಾರೆ
ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೊನೆಯದಾಗಿ 2021ರಲ್ಲಿ ಟಿ20 ಮತ್ತು 2018ರಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಆದರೆ ಏಕದಿನ ತಂಡದಲ್ಲಿ ನಿರಂತರವಾಗ ಆಡುತ್ತಿದ್ದಾರೆ.
2022ರಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಹಲವು ಬಾರಿ ಶಿಖರ್ ಧವನ್ ಮುನ್ನಡೆಸಿದ್ದಾರೆ. ಇದೇ ವೇಳೆ ಅಗ್ರ ಕ್ರಮಾಂಕದಲ್ಲಿ ಭಾರೀ ಪೈಪೋಟಿಯ ಹೊರತಾಗಿಯೂ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಲಿಸ್ಟ್ ಎ ಮತ್ತು ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ರನ್ ಸ್ಕೋರರ್
ಸಚಿನ್ ತೆಂಡೂಲ್ಕರ್ - 551 ಪಂದ್ಯಗಳಲ್ಲಿ 21,999 ರನ್
ಸೌರವ್ ಗಂಗೂಲಿ - 437 ಪಂದ್ಯಗಳಲ್ಲಿ 15, 622 ರನ್
ರಾಹುಲ್ ದ್ರಾವಿಡ್ - 449 ಪಂದ್ಯಗಳಲ್ಲಿ 15,271 ರನ್
ವಿರಾಟ್ ಕೊಹ್ಲಿ - 296 ಪಂದ್ಯಗಳಲ್ಲಿ 13,786 ರನ್
ಎಂಎಸ್ ಧೋನಿ - 423 ಪಂದ್ಯಗಳಲ್ಲಿ 13,353 ರನ್
ಯುವರಾಜ್ ಸಿಂಗ್ - 423 ಪಂದ್ಯಗಳಲ್ಲಿ 12,633 ರನ್
ಶಿಖರ್ ಧವನ್ - 297* ಪಂದ್ಯಗಳಲ್ಲಿ 12,025 ರನ್

ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೋಡಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ನಾಯಕ ಶಿಖರ್ ಧವನ್ (72), ಶುಭಮನ್ ಗಿಲ್ (50) ಮತ್ತು ಶ್ರೇಯಸ್ ಅಯ್ಯರ್ (80) ಅವರ ಅಮೋಘ ಅರ್ಧಶತಕದಾಟಗಳ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟಕ್ಕೆ 23.1 ಓವರ್‌ಗಳಲ್ಲಿ 124 ರನ್ ಗಳಿಸಿದರು. 9 ಇನ್ನಿಂಗ್ಸ್‌ಗಳಲ್ಲಿ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೋಡಿ 4ನೇ ಬಾರಿ ಆರಂಭಿಕ ಜೊತೆಯಾಟದಲ್ಲಿ 100 ಪ್ಲಸ್ ರನ್ ಸೇರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications