IND vs NZ 1st ODI: ಮೊದಲ ಪಂದ್ಯಕ್ಕೆ ಮಳೆ ಅಡ್ಡಿ; ಹೇಗಿದೆ ಆಕ್ಲೆಂಡ್ ಹವಾಮಾನ ವರದಿ?

ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆದ್ದ ನಂತರ ಪ್ರವಾಸಿ ಭಾರತ ತಂಡ ಏಕದಿನ ಸರಣಿಗೆ ಸಜ್ಜಾಗಿದೆ.
ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರೆ, ಏಕದಿನ ಸರಣಿಯಲ್ಲಿ ಶಿಖರ್ ಧವನ್ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ ಏಕದಿನ ತಂಡದ ಭಾಗವಾಗಿಲ್ಲದ ಕಾರಣ, ತವರಿಗೆ ಹಿಂದಿರುಗಲಿದ್ದಾರೆ.
ಟಿ20 ಸರಣಿಗೆ ಮಳೆ ಕಾಟ ಕೊಟ್ಟಿತ್ತು. ಮೊದಲ ಪಂದ್ಯ ಒಂದೂ ಎಸೆತ ಕಾಣದೆ ರದ್ದಾದರೆ, ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಇನ್ನು ಮೂರನೇ ಟಿ20 ಪಂದ್ಯದಲ್ಲಿ ಮಳೆ ಬಂದಾಗ, ಎರಡು ತಂಡಗಳ ಸಮಾನವಾಗಿದ್ದವು. ಆಗ DLS ವಿಧಾನದಿಂದ ಫಲಿತಾಂಶವನ್ನು ಟೈ ಎಂದು ನಿರ್ಧರಿಸಲಾಯಿತು.
ಇದೀಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಸಮಯದಲ್ಲಿ ಮಳೆ ಕಾಟ ಇರಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..

ಆಕ್ಲೆಂಡ್‌ನಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣ
ಹವಾಮಾನ ವರದಿ ಪ್ರಕಾರ, ಆಕ್ಲೆಂಡ್‌ನಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣ ಇರಲಿದ್ದು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ನಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ.
ಮಳೆಯ ಸಾಧ್ಯತೆ ಶೇಕಡಾ 20 ರಷ್ಟಿದ್ದರೆ, ತೇವಾಂಶಯುತ ಗಾಳಿಯು ಶೇಕಡಾ 62 ರಷ್ಟಿರುತ್ತದೆ. ಗಂಟೆಗೆ 32 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.
ಗರಿಷ್ಠ 18 ಡಿಗ್ರಿ ಮತ್ತು ಕನಿಷ್ಠ 13 ಡಿಗ್ರಿ ತಾಪಮಾನ ಇರುತ್ತದೆ. ಪಂದ್ಯ ನಡೆಯುವ ವೇಳೆ ಆಟಗಾರರು ಗಾಳಿ ಮತ್ತು ಶೀತ ಪರಿಸ್ಥಿತಿಗಳಲ್ಲಿ ಆಡಬೇಕಾಗುತ್ತದೆ.

ಕೆಎಲ್ ರಾಹುಲ್ ಮರಳಿದಾಗ ಧವನ್ ಅವರನ್ನು ತೆಗೆದುಹಾಕಲಾಯಿತು
ಶಿಖರ್ ಧವನ್ ಹಂಗಾಮಿ ನಾಯಕನಾಗಿ ಮರಳಿದ್ದು, 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಭಾರತವನ್ನು ಮುನ್ನಡೆಸಲಿದ್ದಾರೆ. ನಾಯಕತ್ವದ ಅವಕಾಶ ಸಿಕ್ಕಾಗಲೆಲ್ಲ ಸಮರ್ಥವಾಗಿ ತಂಡವನ್ನು ಗೆಲುವಿನ ಕಡೆ ಕೊಂಡೊಯ್ದಿದ್ದಾರೆ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಕೆಎಲ್ ರಾಹುಲ್ ಮರಳಿದಾಗ ಧವನ್ ಅವರನ್ನು ಭಾರತ ತಂಡದ ನಾಯಕತ್ವದಿಂದ ತೆಗೆದುಹಾಕಲಾಯಿತು. ಆದರೆ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿ ಹೊತ್ತರು.

ನಾಯಕತ್ವ ಕಿತ್ತುಕೊಂಡಾಗಲು ತನಗೆ ಯಾವುದೇ ನೋವಿಲ್ಲ
ನಾಯಕತ್ವದ ಹುದ್ದೆಯನ್ನು ಆಗೊಮ್ಮೆ ಈಗೊಮ್ಮೆ ನೀಡಿದರೂ ತನಗೆ ಯಾವುದೇ ನೋವಿಲ್ಲ ಎಂದು ಹೇಳಿದ್ದಾರೆ. ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು ತಮ್ಮ ಪ್ರಯತ್ನವಾಗಿದೆ ಮತ್ತು ವೃತ್ತಿಜೀವನದ ಈ ಹಂತದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸುವುದು ಅದೃಷ್ಟ ಎಂದು ತಿಳಿಸಿದ್ದಾರೆ.
2023ರ ಏಕದಿನ ವಿಶ್ವಕಪ್‌ಗೆ 11 ತಿಂಗಳ ಮೊದಲು ಸ್ಥಿರ ಆರಂಭಿಕ ಬ್ಯಾಟ್ಸ್‌ಮನ್‌ನನ್ನು ಬದಲಾಯಿಸಲು ಭಾರತ ತಂಡ ಇಷ್ಟಪಡದ ಕಾರಣ ಶಿಖರ್ ಧವನ್ ಅವರನ್ನು ವಿಶ್ವಕಪ್‌ಗೆ ಮುಂಚಿತವಾಗಿ ಆಡುವ ಹನ್ನೊಂದರ ಬಳಗದಲ್ಲಿ ಉಳಿಸಿಕೊಳ್ಳಲಾಗುವುದು. ಆದರೂ ಅವರ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಶತಕ ಮತ್ತು ಅರ್ಧಶತಕಗಳ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಲಾಕಿ ಫರ್ಗುಸನ್, ಮೈಕೆಲ್ ಬ್ರೇಸ್ವೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications