For Quick Alerts
ALLOW NOTIFICATIONS  
For Daily Alerts
 

IND vs NZ 1st ODI : ಕಿವೀಸ್ ವಿರುದ್ಧ ಮೊದಲ ಏಕದಿನ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಶಿಖರ್ ಧವನ್

IND vs NZ: Shikhar Dhawan Reveals The Reason Behind The Lost Of The 1st ODI Against New Zealand

ಶುಕ್ರವಾರ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಟಾಮ್ ಲ್ಯಾಥಮ್ 145 ರನ್‌ಗಳ ಅದ್ಭುತ ಶತಕ ಮತ್ತು ನಾಯಕ ಕೇನ್ ವಿಲಿಯಮ್ಸನ್‌ರವರ ಅಜೇಯ 94 ರನ್‌ಗಳ ನೆರವಿನಿಂದ ಆತಿಥೇಯ ತಂಡವು ಪ್ರವಾಸಿ ತಂಡದ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಭಾರತದ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಫಲರಾದರು ಮತ್ತು ಟಾಮ್ ಲ್ಯಾಥಮ್ ಮತ್ತು ಕೇನ್ ವಿಲಿಯಮ್ಸನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ತಡೆಯಲು ಹೈರಾಣದರು. ಶುಕ್ರವಾರ ಆಕ್ಲೆಂಡ್‌ನಲ್ಲಿ ಟಾಮ್ ಲ್ಯಾಥಮ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಏಕದಿನ ಸ್ಕೋರ್ ದಾಖಲಿಸಿದರು.

ಟಾಮ್ ಲ್ಯಾಥಮ್ 104 ಎಸೆತಗಳಲ್ಲಿ ಅಜೇಯ 145 ರನ್ ಬಾರಿಸಿದರೆ, ನಾಯಕ ಕೇನ್ ವಿಲಿಯಮ್ಸನ್ 98 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದರು. ನ್ಯೂಜಿಲೆಂಡ್ ತಂಡ ಭಾರತದ 307 ರನ್ ಗುರಿಯನ್ನು ಏಳು ವಿಕೆಟ್‌ಗಳು ಮತ್ತು 17 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿ ಮೂರು ಪಂದ್ಯಗಳಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಪಂದ್ಯದ ಸರಣಿ ಎರಡನೇ ಏಕದಿನ ಪಂದ್ಯ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

IND vs NZ: Shikhar Dhawan Reveals The Reason Behind The Lost Of The 1st ODI Against New Zealand

"ನಾವು ಬ್ಯಾಟಿಂಗ್‌ನಲ್ಲಿದಾಖಲಿಸಿದ ಮೊತ್ತದಿಂದ ಖುಷಿಯಾಗಿದ್ದೇವೆ. ಈ ಮೈದಾನವು ಇತರ ಮೈದಾನಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ನಾವು ಕಡಿಮೆ ಲೆಂತ್‌ನಲ್ಲಿ ಸಾಕಷ್ಟು ಬೌಲ್ ಮಾಡಿದ್ದೇವೆ, ಆದರೆ ಟಾಮ್ ಲ್ಯಾಥಮ್ ನಮ್ಮ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ನಾವು ಕೆಲವು ಸಂದರ್ಭಗಳಲ್ಲಿ ತಪ್ಪಾಗಿ ಫೀಲ್ಡಿಂಗ್ ಮಾಡಿದೆವು," ಎಂದು ನಾಯಕ ಶಿಖರ್ ಧವನ್ ನಿರಾಸೆ ವ್ಯಕ್ತಪಡಿಸಿದರು.

"ನಾವು ಟಾಮ್ ಲ್ಯಾಥಮ್‌ರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಆಟದ ಮೇಲೆ ಹಿಡಿತ ಸಾಧಿಸಿದರು. 40ನೇ ಓವರ್‌ನಲ್ಲಿ ಲ್ಯಾಥಮ್ ನಾಲ್ಕು ಬೌಂಡರಿಗಳನ್ನು ಹೊಡೆದರು, ಅದು ಪಂದ್ಯದ ಗತಿ ಬದಲಿಸಿತು. ಇದರಿಂದ ನಮ್ಮ ಹುಡುಗರು ಇನ್ನೂ ಕಲಿಯುವುದು ಬಹಳಷ್ಟಿದೆ," ಎಂದು ಭಾರತ ತಂಡದ ನಾಯಕ ಶಿಖರ್ ಧವನ್ ಅವರು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಹೊಗಳಿದರು.

Story first published: Friday, November 25, 2022, 20:58 [IST]
Other articles published on Nov 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+