ಕಾರ್ತಿಕ್ ಮತ್ತೆ ಆಡುವುದು ಅನುಮಾನ; ಪಂತ್ ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿ; ಉತ್ತಪ್ಪ

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ 2022ರ ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ನಿರಾಸೆ ಮುಖ ಹೊತ್ತು ಬಂದ ಭಾರತ ತಂಡದಲ್ಲಿ ಬದಲಾವಣೆಯಾಗಬೇಕು ಎಂದು ಮಾಜಿ ಕ್ರಿಕೆಟಿಗರು ಬಯಸಿದ್ದಾರೆ.
ಇದೇ ವೇಳೆ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಟಿ20 ಪಂದ್ಯಗಳಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ ಎಂದು ಭಾರತದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ಆದರೆ ಯುವ ಎಡಗೈ ಬ್ಯಾಟ್ಸ್‌ಮನ್ ಮಧ್ಯಮ ಕ್ರಮಾಂಕದಲ್ಲಿ ಅಷ್ಟೊಂದು ಪ್ರಭಾವಶಾಲಿಯಾಗಿ ಬ್ಯಾಟ್ ಬೀಸಿಲ್ಲ ಮತ್ತು ಕೆಲವೊಮ್ಮೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಎರಡು ಪಂದ್ಯಗಳನ್ನು ಆಡಿದರೂ, ತಮ್ಮ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಲೇ ಇದ್ದಾರೆ. ಹೀಗಾಗಿ ರಿಷಭ್ ಪಂತ್ ಅವರು ಭಾರತ ಪರ ಇನ್ನಿಂಗ್ಸ್ ತೆರೆಯಬೇಕು ಅಥವಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಲಹೆ ನೀಡಿದ್ದಾರೆ.

ರಿಷಭ್ ಪಂತ್ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು
"ಮುಂದಿನ ಟಿ20 ವಿಶ್ವಕಪ್‌ಗೆ ಎರಡು ವರ್ಷಗಳ ಕಾಲಾವಕಾಶವಿದೆ. ಹಾಗಾಗಿ ಅಲ್ಲಿನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ರಿಷಭ್ ಪಂತ್ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಅವರ ಐಪಿಎಲ್ ದಾಖಲೆಗಳನ್ನು ನೋಡಿದರೆ, ನಂ.3ರಲ್ಲಿ ಬ್ಯಾಟ್ ಮಾಡಿದಾಗ ಅವರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ. ಅವರಿಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಅಗ್ರ ಕ್ರಮಾಂಕದಲ್ಲಿ ಕಳಿಸುವ ಮೂಲಕ ಮ್ಯಾಚ್ ವಿನ್ನರ್ ಆಗುವ ಅವಕಾಶವನ್ನು ನೀಡಬೇಕು," ಎಂದು ರಾಬಿನ್ ಉತ್ತಪ್ಪ ಹೇಳಿದರು.

ದಿನೇಶ್ ಕಾರ್ತಿಕ್ ಮತ್ತೆ ಭಾರತ ತಂಡಕ್ಕಾಗಿ ಆಡದಿರಬಹುದು
"ಇನ್ನು ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮತ್ತೆ ಭಾರತ ತಂಡಕ್ಕಾಗಿ ಆಡದಿರಬಹುದು ಎಂದು ನಾನು ಭಾವಿಸುತ್ತೇನೆ. ಸಂಜು ಸ್ಯಾಮ್ಸನ್ ಅವರಂತಹ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು. ರಾಹುಲ್ ತ್ರಿಪಾಠಿ ಮತ್ತು ದೀಪಕ್ ಹೂಡಾ ಫಿನಿಶರ್ ಪಾತ್ರ ನಿಭಾಯಿಸಲಿದ್ದಾರೆ. ಅದೇ ರೀತಿ ಉಮ್ರಾನ್ ಮಲಿಕ್ ಖಂಡಿತವಾಗಿಯೂ ತಂಡದಲ್ಲಿ ಆಡಬಲ್ಲ ಬೌಲರ್," ಎಂದು ರಾಬಿನ್ ಉತ್ತಪ್ಪ ಸ್ಪೋರ್ಟ್ಸ್‌ಕೀಡಾದಲ್ಲಿ ತಿಳಿಸಿದರು.

ರಿಷಭ್ ಪಂತ್ ಅವರನ್ನು ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, 25 ವರ್ಷದ ರಿಷಭ್ ಪಂತ್ ನಾಯಕತ್ವದಲ್ಲಿ ಮುಂದುವರೆಯಲಿದ್ದಾರೆ. ಸದ್ಯ ನ್ಯೂಜಿಲೆಂಡ್ ವಿರುದ್ಧದ ವೈಟ್ ಬಾಲ್ ಸರಣಿಗೆ ಆಯ್ಕೆಯಾಗಿದ್ದಾರೆ.
ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು, ಮೊದಲ ಟಿ20 ಪಂದ್ಯ ನವೆಂಬರ್ 18ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕನಾಗಿದ್ದರೆ, ರಿಷಭ್ ಪಂತ್ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications