IND vs NZ 1st ODI : ಭಾರತ ವಿರುದ್ಧ ಶತಕ ಬಾರಿಸಿ 23 ವರ್ಷಗಳ ಹಳೆಯ ಏಕದಿನ ದಾಖಲೆ ಮುರಿದ ಟಾಮ್ ಲ್ಯಾಥಮ್

ಶುಕ್ರವಾರ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಟಾಮ್ ಲ್ಯಾಥಮ್ 145 ರನ್‌ಗಳ ಅದ್ಭುತ ಶತಕ ಮತ್ತು ನಾಯಕ ಕೇನ್ ವಿಲಿಯಮ್ಸನ್‌ರವರ ಅಜೇಯ 94 ರನ್‌ಗಳ ನೆರವಿನಿಂದ ಆತಿಥೇಯ ತಂಡವು ಪ್ರವಾಸಿ ತಂಡದ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಇನ್ನು ಕಿವೀಸ್‌ನ ಟಾಮ್ ಲ್ಯಾಥಮ್ 145 ರನ್ ಗಳಿಸಿ, ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ನಿಂದ ಗರಿಷ್ಠ ಸ್ಕೋರ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿದರು.

ಟಾಮ್ ಲ್ಯಾಥಮ್ 76 ಎಸೆತಗಳಲ್ಲಿ ಮೈಲಿಗಲ್ಲನ್ನು ತಲುಪಿದರು
1999ರ ನವೆಂಬರ್‌ನಲ್ಲಿ ರಾಜ್‌ಕೋಟ್‌ನಲ್ಲಿ ಭಾರತದ ವಿರುದ್ಧ 136 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 120 ರನ್ ಗಳಿಸಿದ್ದ ನಾಥನ್ ಆಸ್ಟಲ್ ಅವರು ಗರಿಷ್ಠ ಸ್ಕೋರರ್ ದಾಖಲೆಯನ್ನು ಹೊಂದಿದ್ದರು. 23 ವರ್ಷಗಳ ನಂತರ ಆ ದಾಖಲೆಯನ್ನು ಟಾಮ್ ಲ್ಯಾಥಮ್ ಮುರಿದರು.
ಟಾಮ್ ಲ್ಯಾಥಮ್ 76 ಎಸೆತಗಳಲ್ಲಿ ಮೈಲಿಗಲ್ಲನ್ನು ತಲುಪಿದಾಗ ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ನಿಂದ ಎರಡನೇ ವೇಗದ ಶತಕವನ್ನು ಗಳಿಸಿದರು. 1999ರಲ್ಲಿ ಕ್ರಿಸ್ ಕೇರ್ನ್ಸ್ ಕ್ರೈಸ್ಟ್‌ಚರ್ಚ್‌ನಲ್ಲಿ 75 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಟಾಮ್ ಲ್ಯಾಥಮ್ 51 ಎಸೆತಗಳಲ್ಲಿ ತಮ್ಮ ಅರ್ಧಶತಕ
ಆತಿಥೇಯ ನ್ಯೂಜಿಲೆಂಡ್ 88 ರನ್ ಗಳಿಸಿದ್ದಾಗ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ರನ್‌ಚೇಸಿಂಗ್‌ನ 20ನೇ ಓವರ್‌ನಲ್ಲಿ ಟಾಮ್ ಲ್ಯಾಥಮ್ ಬ್ಯಾಟಿಂಗ್‌ಗೆ ಬಂದರು. ಅನಂತರ ನಾಯಕ ಕೇನ್ ವಿಲಿಯಮ್ಸನ್ ಜೊತೆಗೂಡಿ 200ಕ್ಕಿಂತ ಹೆಚ್ಚಿನ ರನ್ ಜೊತೆಯಾಟ ನೀಡಿದರು ಮತ್ತು ಭಾರತದ ಬೌಲಿಂಗ್ ದಾಳಿ ಮೇಲೆ ಸವಾರಿ ಮಾಡಿದರು.
ಟಾಮ್ ಲ್ಯಾಥಮ್ 51 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರೆ, ನಂತರ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಭಾರತದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರ ಬೌಲಿಂಗ್‌ನಲ್ಲಿ ರನ್‌ಗಳ ಸುರಿಮಳೆ ಸುರಿಸಿದರು.

ಉಮ್ರಾನ್ ಮಲಿಕ್ ಎರಡು ವಿಕೆಟ್‌ಗಳನ್ನು ಪಡೆದರು
ಟಾಮ್ ಲ್ಯಾಥಮ್ ಮತ್ತು ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡಕ್ಕೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಂಡರು ಮತ್ತು ಗೆಲುವಿನ ದಡ ಸೇರಿಸಿದರು.
ಭಾರತದ ಪರ ಚೊಚ್ಚಲ ಏಕದಿನ ಪಂದ್ಯವಾಡಿದ ಉಮ್ರಾನ್ ಮಲಿಕ್ ಎರಡು ವಿಕೆಟ್‌ಗಳನ್ನು ಪಡೆದರು. ಉಳಿದ ಬೌಲರ್‌ಗಳಾರು ಪ್ರಭಾವಿ ಪ್ರದರ್ಶನ ನೀಡದ ಕಾರಣ ವಿಜಯಲಕ್ಷ್ಮಿ ಭಾರತದ ಪರವಾಗಿರಲಿಲ್ಲ.

50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ನಾಯಕ ಶಿಖರ್ ಧವನ್ (72), ಶುಭಮನ್ ಗಿಲ್ (50) ಮತ್ತು ಶ್ರೇಯಸ್ ಅಯ್ಯರ್ (80) ಅವರ ಅಮೋಘ ಅರ್ಧಶತಕದಾಟಗಳ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತ್ತು.
ಕೊನೆಯಲ್ಲಿ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೇವಲ 16 ಎಸೆತಗಳಲ್ಲಿ 37 ರನ್ ಬಾರಿಸಿದರು. ಇದರಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ್ದವು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದು ಮಿಂಚಿದರೆ, ಆಡಮ್ ಮಿಲ್ನೆ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications