IND vs NZ: 2023ರ ವಿಶ್ವಕಪ್‌ಗೆ ಆಯ್ಕೆಯಾಗುವ ಬಗ್ಗೆ ಶುಭಮನ್ ಗಿಲ್ ಹೇಳಿದ್ದೇನು?

2023ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಅವರ ಆಕಾಂಕ್ಷೆಗಳ ಬಗ್ಗೆ ಕೇಳಿದಾಗ ತಾವು ಹೆಚ್ಚು ಗಮನಹರಿಸುತ್ತಿಲ್ಲ ಎಂದು ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಹೇಳಿದರು. ತನಗೆ ಯಾವುದೇ ಅವಕಾಶಗಳು ಬಂದರೂ ಭಾರತ ತಂಡಕ್ಕೆ ಕೊಡುಗೆ ನೀಡುವತ್ತ ಗಮನ ಹರಿಸುತ್ತೇನೆ ಎಂದರು.
ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮಳೆ ಬಾಧಿತ 2ನೇ ಏಕದಿನ ಪಂದ್ಯದಲ್ಲಿ ಬಲಗೈ ಆರಂಭಿಕ ಆಟಗಾರ 42 ಎಸೆತಗಳಲ್ಲಿ 45 ರನ್ ಗಳಿಸಿದರು ಮತ್ತು ಸದ್ಯ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಶುಭಮನ್ ಗಿಲ್ 2019ರ ಆರಂಭದಲ್ಲಿ ತಮ್ಮ ಏಕದಿನ ಚೊಚ್ಚಲ ಪಂದ್ಯವನ್ನು ಆಡಿದರು. ಆದರೆ 23 ವರ್ಷ ವಯಸ್ಸಿನ ಬ್ಯಾಟರ್ 2022ರಲ್ಲಿ 50-ಓವರ್‌ಗಳ ಸ್ವರೂಪದಲ್ಲಿ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 11 ಪಂದ್ಯಗಳಲ್ಲಿ ಒಂದು ಶತಕ ಮತ್ತು 4 ಅರ್ಧಶತಕ ಒಳಗೊಂಡಂತೆ 625 ರನ್‌ಗಳನ್ನು ಗಳಿಸಿದ್ದಾರೆ.

ಜಿಂಬಾಬ್ವೆಯಲ್ಲಿ ತಮ್ಮ ಮೊದಲ ಏಕದಿನ ಶತಕ
ಈ ವರ್ಷದಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೇವಲ 2 ರನ್‌ಗಳಿಂದ ಚೊಚ್ಚಲ ಶತಕವನ್ನು ತಪ್ಪಿಸಿಕೊಂಡ ನಂತ, ಶುಭಮನ್ ಗಿಲ್ ಆಗಸ್ಟ್‌ನಲ್ಲಿ ಜಿಂಬಾಬ್ವೆಯಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಬಾರಿಸಿದರು.
ಶುಭಮನ್ ಗಿಲ್ ನ್ಯೂಜಿಲೆಂಡ್‌ನಲ್ಲಿನ ಏಕದಿನ ಸರಣಿಯನ್ನು ಅರ್ಧಶತಕದೊಂದಿಗೆ ಪ್ರಾರಂಭಿಸಿದರು. ನಾಯಕ ಶಿಖರ್ ಧವನ್ ಅವರೊಂದಿಗೆ 125 ರನ್ ಜೊತೆಯಾಟದಲ್ಲಿ ಕೈಜೋಡಿಸಿದರು. ಭಾನುವಾರ ಹ್ಯಾಮಿಲ್ಟನ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಮಳೆಯಿಂದ ರದ್ದಾದ ಹೊರತಾಗಿಯೂ ಅವರು 45 ರನ್ ಗಳಿಸಿ ಅಜೇಯರಾಗುಳಿದರು. 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಸೂರ್ಯಕುಮಾರ್ ಯಾದವ್ ಅವರೊಂದಿಗೆ 66 ರನ್ ಜೊತೆಯಾಟವಾಡಿದರು.

2023ರ ವಿಶ್ವಕಪ್‌ಗೆ ಅಗ್ರ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ
ಶುಭಮನ್ ಗಿಲ್ ಅವರು ತವರಿನಲ್ಲಿ ನಡೆಯುವ 2023ರ ವಿಶ್ವಕಪ್‌ಗೆ ಅಗ್ರ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಯುವ ಬ್ಯಾಟರ್ ಬಾಂಗ್ಲಾದೇಶ ಪ್ರವಾಸಕ್ಕಾಗಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ಸೇರಿದಂತೆ ದೊಡ್ಡ ತಾರೆಗಳಿಗಾಗಿ ಸ್ಥಾನ ಬಿಟ್ಟುಕೊಡಲಿದ್ದಾರೆ. ಏಕದಿನ ತಂಡದಲ್ಲಿ ಕೆಎಲ್ ರಾಹುಲ್ ಅವರಿಂದ ಆರಂಭಿಕ ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿಯನ್ನು ಎದುರಿಸುತ್ತಿದ್ದಾರೆ. ಆದರೂ ಶುಭಮನ್ ಗಿಲ್ ವಿಶ್ವಕಪ್ ಅವಕಾಶಗಳ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ನಾನು ದೇಶೀಯ ಕ್ರಿಕೆಟ್ ಆಡುವತ್ತ ನೋಡುತ್ತೇನೆ
"ನಾನು ನಿಜವಾಗಿ ಅಷ್ಟು ದೂರ ನೋಡುತ್ತಿಲ್ಲ. ಈಗ ನನಗೆ ಸಿಕ್ಕಿರುವ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳುವುದು ನನ್ನ ಮುಖ್ಯ ಉದ್ದೇಶವಾಗಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ನಾನು ದೊಡ್ಡ ಸ್ಕೋರ್ ಮಾಡಲು ಪ್ರಯತ್ನಿಸುತ್ತಿದ್ದೇನೆ ಮತ್ತು ತಂಡಕ್ಕೆ ಕೆಲವು ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದೇನೆ," ಎಂದು ಶುಭಮನ್ ಗಿಲ್ 2ನೇ ಏಕದಿನ ಪಂದ್ಯದ ನಂತರ ಹ್ಯಾಮಿಲ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಯುವ ಆಟಗಾರನಾಗಿ ನಾನು ಆಯ್ಕೆಯಾದಾಗ ತಂಡಕ್ಕಾಗಿ ಆಡುತ್ತೇನೆ. ನನಗೆ ವಿಶ್ರಾಂತಿ ನೀಡಿದಾಗ ಅಥವಾ ಆಯ್ಕೆಯಾಗದಿದ್ದಾಗ ನಾನು ದೇಶೀಯ ಕ್ರಿಕೆಟ್ ಆಡುವತ್ತ ನೋಡುತ್ತೇನೆ. ಹಾಗಾಗಿ ವಿರಾಮವು ಉತ್ತಮ ಅವಕಾಶವನ್ನು ನೀಡುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ತಿಳಿದುಕೊಳ್ಳಲು ದೇಶೀಯ ಕ್ರಿಕೆಟ್‌ನಲ್ಲಿ ಆಡುವುದು ಉತ್ತಮ ಎಂದು," ಎಂದು ಗಿಲ್ ವಿವರಿಸಿದರು.

ಪ್ರತಿ ಬಾರಿಯೂ ದೊಡ್ಡ ಮೊತ್ತದ ಗುರಿ ನೋಡಲು ಸಾಧ್ಯವಿಲ್ಲ
ಉತ್ತಮ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಭಾರತ ತಂಡವು ಏಕದಿನ ಪಂದ್ಯಗಳಲ್ಲಿ 400 ಮತ್ತು ಅದಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸಲು ನೋಡಬೇಕೇ ಎಂದು ಪ್ರಶ್ನಿಸಿದಾಗ, ಪ್ರತಿ ಬಾರಿಯೂ ದೊಡ್ಡ ಮೊತ್ತದ ಗುರಿ ನೋಡಲು ಸಾಧ್ಯವಿಲ್ಲ ಎಂದು ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಹೇಳಿದರು.
ಬುಧವಾರ, ನವೆಂಬರ್ 30ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಆಡುವಾಗ, ಶುಭಮನ್ ಗಿಲ್ ಮತ್ತೊಂದು ದೊಡ್ಡ ಮೊತ್ತದ ಕೊಡುಗೆ ನೀಡಲು ಎದುರು ನೋಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications