Ind vs Pak: ಭಾರತ ವಿರುದ್ಧ ಕಪ್ಪು ಬ್ಯಾಂಡ್ ಧರಿಸಿ ಆಡಲಿರುವ ಪಾಕ್ ಆಟಗಾರರು! ಕಾರಣ ಏನು?

ಏಷ್ಯಾಕಪ್ ಉದ್ಘಾಟನಾ ಪಂದ್ಯದ ಬಳಿಕ ಭಾನುವಾರ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಭಾರತವು ಪಾಕ್ ವಿರುದ್ಧ ಮೊದಲ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭಿಸಿಲಿದೆ. ಸೂಪರ್ ಸಂಡೇ ಫೈಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಆಟಗಾರರು ತೋಳಿಗೆ ಕಪ್ಪು ಬ್ಯಾಂಡ್ ಅನ್ನು ಧರಿಸಲಿದ್ದಾರೆ.
ಪಾಕಿಸ್ತಾನದಲ್ಲಿ ಉಂಟಾದ ವಿಪರೀತ ಪ್ರವಾಹದಿಂದಾಗಿ ಕೋಟ್ಯಾಂತರ ಆಸ್ತಿ ಪಾಸ್ತಿ ಜೊತೆಗೆ ನೂರಾರು ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಪಾಕಿಸ್ತಾನಿ ಆಟಗಾರರು ತಮ್ಮ ದೇಶದಲ್ಲಿ ಪ್ರವಾಹ ಪೀಡಿತರಿಗೆ ಒಗ್ಗಟ್ಟು ಮತ್ತು ಬೆಂಬಲವನ್ನು ತೋರಿಸಲು ಕಪ್ಪು ಬ್ಯಾಂಡ್‌ಗಳನ್ನು ಇಂದು ಧರಿಸುತ್ತಾರೆ.
"ದೇಶಾದ್ಯಂತ ಪ್ರವಾಹ ಪೀಡಿತರಿಗೆ ತಮ್ಮ ಒಗ್ಗಟ್ಟು ಮತ್ತು ಬೆಂಬಲವನ್ನು ವ್ಯಕ್ತಪಡಿಸಲು ಪಾಕಿಸ್ತಾನ ಕ್ರಿಕೆಟ್ ತಂಡವು ಇಂದು ಭಾರತ ವಿರುದ್ಧ ACC T20 ಏಷ್ಯಾ ಕಪ್ 2022 ರ ತಮ್ಮ ಮೊದಲ ಪಂದ್ಯದಲ್ಲಿ ಕಪ್ಪು ತೋಳಿನ ಪಟ್ಟಿಯನ್ನು ಧರಿಸಲಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಮಾನ್ಸೂನ್ ಪ್ರವಾಹವನ್ನು ಎದುರಿಸಲು ಪಾಕಿಸ್ತಾನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಮತ್ತು ಇದು 4 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಈ ವರ್ಷ ಜೂನ್‌ನಲ್ಲಿ ಆರಂಭವಾದ ಮುಂಗಾರು ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ 34 ಜನರು ಸೇರಿದಂತೆ ಒಟ್ಟು 900 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಡಿಎಂಎ) ಶುಕ್ರವಾರ ತಿಳಿಸಿದೆ.

ಪಾಕಿಸ್ತಾನದ ಗ್ರಾಮೀಣ ಪ್ರದೇಶದ ಸಾವಿರಾರು ಜನರು ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಆಶ್ರಯ ಪಡೆಯುತ್ತಿದ್ದರು, ಏಕೆಂದರೆ ಎತ್ತರದ ರಸ್ತೆಗಳು ನೀರಿನಿಂದ ತಪ್ಪಿಸಿಕೊಳ್ಳುವ ಕೆಲವು ಮಾರ್ಗಗಳಲ್ಲಿ ಸೇರಿವೆ.
ವಿಪತ್ತು ಏಜೆನ್ಸಿಯು 4.2 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪ್ರವಾಹದಿಂದ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರವಾಹದಿಂದಾಗಿ ಸುಮಾರು 2,20,000 ಮನೆಗಳು ನಾಶವಾಗಿದ್ದು , ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಹಾನಿಯಾಗಿದೆ.
ಏಷ್ಯಾ ಕಪ್ 2022 ಟೂರ್ನಿ ಶನಿವಾರ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಬಿ ಗುಂಪಿನ ಪಂದ್ಯದೊಂದಿಗೆ ಪ್ರಾರಂಭವಾಯಿತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಎಂಟು ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತು.
ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದರಲ್ಲಿ ಹಾಂಕಾಂಗ್ ಮೂರನೇ ತಂಡವಾಗಿದೆ. ಎರಡನೇ ಗುಂಪು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಿಂದ ಕೂಡಿದೆ. ಗುಂಪು ಹಂತದ ನಂತರ, ಸೂಪರ್ ಫೋರ್ ಪಂದ್ಯಗಳನ್ನು ಆಡಲಾಗುತ್ತದೆ, ಅಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ಆಡುವ ಅವಕಾಶವನ್ನು ಪಡೆಯುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications