For Quick Alerts
ALLOW NOTIFICATIONS  
For Daily Alerts
 

Asia Cup 2023: ಭಾರತ vs ಪಾಕಿಸ್ತಾನ ಟಾಸ್‌ಗೂ ಮುನ್ನ ಕ್ಯಾಂಡಿ ಹವಾಮಾನ ವರದಿ ಹೇಗಿದೆ?; ಮಳೆ ಅಡ್ಡಿಯಾಗುತ್ತಾ?

ಶನಿವಾರ, ಸೆಪ್ಟೆಂಬರ್ 1ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೈ-ವೋಲ್ಟೇಜ್ ಘರ್ಷಣೆಯಲ್ಲಿ ಸೆಣಸಾಡಲಿವೆ.

ಆದರೆ, ಈ ಪ್ರಮುಖ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂಬುದು ಉಭಯ ದೇಶಗಳ ಅಭಿಮಾನಿಗಳಿಗೆ ಬೇಸರದ ವಿಷಯವಾಗಿದೆ. ಕ್ಯಾಂಡಿಯಲ್ಲಿ ಶನಿವಾರ ಮುಂಜಾನೆ ಮೋಡ ಕವಿದ ವಾತಾವರಣವಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಚಿಂತೆಯಾಗಿದೆ.

IND vs PAK Asia Cup Match Weather Update: What Does the Weather Report Say on Rain Before The Toss?

ಭಾರತ ಮತ್ತು ಪಾಕಿಸ್ತಾನದ ನಡುವಿನ ದೊಡ್ಡ ಪಂದ್ಯಕ್ಕೂ ಮುನ್ನ, ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ಸುಮಾರು ಶೇಕಡಾ 80ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಶ್ರೀಲಂಕಾದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಆದರೆ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಕಾದಿದ್ದು, ಶನಿವಾರ ಮಧ್ಯಾಹ್ನದ ನಂತರ ಮತ್ತು ಸಂಜೆ ಕ್ಯಾಂಡಿಯ ಹವಾಮಾನವು ಗಣನೀಯವಾಗಿ ಸುಧಾರಿಸಲಿದೆ ಎಂದು ಹೇಳಿದೆ.

ಆರ್ದ್ರತೆಯು ಸುಮಾರು ಶೇ.89ರಷ್ಟು ಹೆಚ್ಚಿರುತ್ತದೆ ಮತ್ತು ಭಾರತೀಯ ಕಾಲಮಾನ 2.30ಕ್ಕೆ ಟಾಸ್ ಮಾಡುವ ಸಮಯದಲ್ಲಿ ಕ್ಯಾಂಡಿ ನಗರದ ಸುತ್ತಲೂ ಶೇಕಡಾ 98ರಷ್ಟು ಮೋಡ ಕವಿದ ವಾತಾವರಣವಿದ್ದರೆ, ಮಧ್ಯಾಹ್ನದ ನಂತರ ಮಳೆಯ ಸಾಧ್ಯತೆಯು ಕೇವಲ 60 ಪ್ರತಿಶತಕ್ಕೆ ಇಳಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

IND vs PAK Asia Cup Match Weather Update: What Does the Weather Report Say on Rain Before The Toss?

ಪಂದ್ಯದ ಆರಂಭದಲ್ಲಿ ಕ್ಯಾಂಡಿಯ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಎಂದು ನಿರೀಕ್ಷಿಸಲಾಗಿದೆ. ಆದರೆ ಶನಿವಾರ ಸಂಜೆಯ ಬಳಿಕ ಮಳೆಯಾಗುವ ಸಾಧ್ಯತೆಯಿದೆ. ತಾಪಮಾನ ಸುಮಾರು 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ ಮತ್ತು ತೇವಾಂಶವು ಶೇಕಡಾ 100ಕ್ಕೆ ಏರುತ್ತದೆ. ಶನಿವಾರ ಸಂಜೆ ವೇಳೆಗೆ ಮಳೆಯ ಸಾಧ್ಯತೆಯು ಸುಮಾರು ಶೇ.65ಕ್ಕಿಂತ ಹೆಚ್ಚಾಗಿರುತ್ತದೆ.

ಶನಿವಾರದಂದು ಮಳೆ ಬರಬಾರದು ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ 50-ಓವರ್ ಪಂದ್ಯವನ್ನು ಆಡುವುದನ್ನು ನೋಡಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

IND vs PAK Asia Cup Match Weather Update: What Does the Weather Report Say on Rain Before The Toss?

ಮ್ಯಾಂಚೆಸ್ಟರ್‌ನಲ್ಲಿ ನಡೆದ 2019ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಭಾರತದ ಕೊನೆಯ ಏಕದಿನ ಪಂದ್ಯಕ್ಕೆ ಕೂಡ ಮಳೆ ಅಡ್ಡಿಪಡಿಸಿತ್ತು. ಆದರೆ, ಡಿಎಲ್ಎಸ್ ವಿಧಾನದ ಮೂಲಕ ಭಾರತ 89 ರನ್‌ಗಳಿಂದ ಗೆಲುವು ಸಾಧಿಸಿತ್ತು.

"ಕ್ಯಾಂಡಿಯು ಶ್ರೀಲಂಕಾದ ಮಧ್ಯ ಪ್ರಾಂತ್ಯದ ಅಡಿಯಲ್ಲಿ ಬರುತ್ತದೆ ಮತ್ತು ಶುಕ್ರವಾರ ಮತ್ತು ಶನಿವಾರ ಮಳೆ ಬೀಳುವ ನಿರೀಕ್ಷೆಯಿದೆ. ಪಶ್ಚಿಮ, ಸಬರಗಾಮುವಾ, ಮಧ್ಯ ಮತ್ತು ವಾಯುವ್ಯ ಪ್ರಾಂತ್ಯಗಳು ಹಾಗೂ ಗಾಲೆ ಮತ್ತು ಮಾತಾರಾ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುತ್ತದೆ," ಎಂದು ಹವಾಮಾನ ಇಲಾಖೆ ಬುಧವಾರವೇ ಹೇಳಿತ್ತು.

2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕನಿಷ್ಠ ಮೂರು ಬಾರಿ ಸೆಣಸಾಡುವ ಸಾಧ್ಯತೆ ಇದೆ. ಎರಡೂ ತಂಡಗಳು ಅರ್ಹತೆ ಪಡೆದರೆ, ಸೆಪ್ಟೆಂಬರ್ 10ರಂದು ಸೂಪರ್ 4ರ ಘರ್ಷಣೆ ನಡೆಯಲಿದೆ.

ಇನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ಮತ್ತು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡಗಳು ಫೈನಲ್‌ಗೆ ಅರ್ಹತೆ ಪಡೆದರೆ ಮತ್ತೆ ಸೆಪ್ಟೆಂಬರ್ 17ರಂದು ಮುಖಾಮುಖಿಯಾಗಬಹುದು.

Story first published: Saturday, September 2, 2023, 13:35 [IST]
Other articles published on Sep 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+