For Quick Alerts
ALLOW NOTIFICATIONS  
For Daily Alerts
 

Ind vs Pak: ವಿರಾಟ್ ಕೊಹ್ಲಿಯ ಬೃಹತ್ ದಾಖಲೆ ಮುರಿಯಲಿದ್ದಾರೆ ಬಾಬರ್ ಅಜಂ!

ಬುಧವಾರ, ಆಗಸ್ಟ್ 30ರಂದು ಮುಲ್ತಾನ್‌ನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 131 ಎಸೆತಗಳಲ್ಲಿ 151 ರನ್ ಗಳಿಸಿದರು.

ಈ ಮೂಲಕ ನೇಪಾಳ ತಂಡವನ್ನು 238 ರನ್‌ಗಳ ಬೃಹತ್ ಅಂತರದಿಂದ ಸೋಲಿಸಲು ನೆರವಾದರು. ಬಾಬರ್ ಅಜಂ ಅವರ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳು ಒಳಗೊಂಡಿದ್ದವು.

ಇನ್ನು ಏಕದಿನ ಕ್ರಿಕೆಟ್‌ನಲ್ಲಿ 102 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಅಜಂ ಅವರ 19ನೇ ಏಕದಿನ ಶತಕವಾಗಿದ್ದು, ಇದಕ್ಕಾಗಿ ತೆಗೆದುಕೊಂಡ ಇನ್ನಿಂಗ್ಸ್‌ನ ವಿಷಯದಲ್ಲಿ ಅತ್ಯಂತ ವೇಗದ ಆಟಗಾರನಾಗಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ ಅವರು ಕೇವಲ 104 ಇನ್ನಿಂಗ್ಸ್‌ಗಳಲ್ಲಿ 19 ಶತಕಗಳ ಸಾಧನೆ ಮಾಡಿದ್ದರು.

 Ind vs Pak: Babar Azam Will Break Virat Kohlis Huge Record In ODI Cricket

ಇನ್ನು ಭಾರತದ ವಿರಾಟ್ ಕೊಹ್ಲಿ 124 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ನಂತರದ ಸ್ಥಾನದಲ್ಲಿ ಡೇವಿಡ್ ವಾರ್ನರ್ (139 ಇನ್ನಿಂಗ್ಸ್‌) ಮತ್ತು ಎಬಿ ಡಿವಿಲಿಯರ್ಸ್ (171 ಇನ್ನಿಂಗ್ಸ್‌) ಇದ್ದಾರೆ.

ಇನ್ನು ನಾಯಕ ಮತ್ತು ಬ್ಯಾಟರ್ ಆಗಿ ಬಾಬರ್ ಅಜಂ ಮತ್ತೊಂದು ದೊಡ್ಡ ಮೈಲಿಗಲ್ಲನ್ನು ಎದುರು ನೋಡುತ್ತಿದ್ದಾರೆ. ಇದು ಬಾಬರ್ ಅಜಂ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲಿದೆ. ಬಾಬರ್ ಅಜಂ ನಾಯಕನಾಗಿ ಏಕದಿನದಲ್ಲಿ 2,000 ರನ್‌ಗಳಿಗೆ ಕೇವಲ ಆರು ರನ್‌ಗಳ ಅವಶ್ಯಕತೆ ಇದೆ.

 Ind vs Pak: Babar Azam Will Break Virat Kohlis Huge Record In ODI Cricket

ವಿರಾಟ್ ಕೊಹ್ಲಿ ನಾಯಕನಾಗಿ 36 ಇನ್ನಿಂಗ್ಸ್‌ಗಳಲ್ಲಿ 2,000 ರನ್‌ಗಳ ಸಾಧನೆ ಮಾಡಿದ್ದರು. ಬಾಬರ್ ಅಜಂ 31 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಸಾಧ್ಯತೆಯಿದೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಪ್ರಸ್ತುತ ಕೇವಲ 30 ಇನ್ನಿಂಗ್ಸ್‌ಗಳಲ್ಲಿ 1,994 ರನ್ ಗಳಿಸಿದ್ದಾರೆ. ಅವರು ಏಷ್ಯಾ ಕಪ್‌ನಲ್ಲಿಯೇ ಭಾರತೀಯ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿಯನ್ನಯ ಮೀರಿಸಲಿದ್ದಾರೆ.

ಹಾಶಿಮ್ ಆಮ್ಲಾ ಅವರ ಹೆಸರಿನಲ್ಲಿದ್ದ ಮತ್ತೊಂದು ದಾಖಲೆಯನ್ನು ಬಾಬರ್ ಅಜಂ ಮುರಿದಿದ್ದಾರೆ ಎಂಬುದು ಗಮನಾರ್ಹವಾಗಿದೆ. ಬಾಬರ್ ಅಜಂ 102 ಇನ್ನಿಂಗ್ಸ್‌ಗಳಲ್ಲಿ ಇತರರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. 102 ಇನ್ನಿಂಗ್ಸ್‌ಗಳ ನಂತರ ಹಾಶಿಮ್ ಆಮ್ಲಾ 5,165 ರನ್ ಗಳಿಸಿದ್ದರೆ, ಬಾಬರ್ ಅಜಂ 5,353 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ ಮುರಿಯುತ್ತಾರಾ ಬಾಬರ್ ಅಜಂ?
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಇದು 2023ರ ಏಷ್ಯಾ ಕಪ್‌ನಲ್ಲಿ ಭಾರತದ ಮೊದಲ ಪಂದ್ಯವಾಗಿದೆ.

ಈ ಪಂದ್ಯವು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅತ್ಯುತ್ತಮ ಕ್ರಿಕೆಟ್ ಮಹಾ ಯುದ್ಧವಾಗಿದೆ. ಸ್ಟೇಡಿಯಂನಲ್ಲಿರುವ ಅಭಿಮಾನಿಗಳಿಗೆ ಬಾಬರ್ ಅಜಂ ಹಾಗೂ ವಿರಾಟ್ ಕೊಹ್ಲಿ ನೆಚ್ಚಿನ ಆಟಗಾರರಾಗಲಿದ್ದಾರೆ.

ವಿರಾಟ್ ಕೊಹ್ಲಿ ಈ ವರ್ಷ ಹೆಚ್ಚು ಏಕದಿನ ಕ್ರಿಕೆಟ್ ಆಡಿಲ್ಲ. ಆದರೆ, ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದೆಡೆ, ಬಾಬರ್ ಅಜಂ ಪ್ರಸ್ತುತ ಅತ್ಯುತ್ತಮ ಮಟ್ಟದಲ್ಲಿ ಆಡುತ್ತಿದ್ದಾರೆ. ಸತತವಾಗಿ ಶತಕಗಳನ್ನು ಬಾರಿಸುತ್ತಲೇ ಇದ್ದಾರೆ. ಸದ್ಯ ಏಕದಿನ ಸ್ವರೂಪದಲ್ಲಿ ವಿಶ್ವದ ನಂ.1 ಬ್ಯಾಟರ್ ಆಗಿದ್ದಾರೆ.

ಹೈ-ವೋಲ್ಟೇಜ್ ಪಂದ್ಯದಲ್ಲಿ ಆಡುವಾಗ ಈ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳು ಹೆಚ್ಚು ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಲಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕಿಂತ ದೊಡ್ಡ ಪಂದ್ಯವಿರಲು ಸಾಧ್ಯವಿಲ್ಲ. ಈ ವೇಳೇ ಈ ಇಬ್ಬರು ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.

ಈ ಏಷ್ಯಾ ಕಪ್ ಪಂದ್ಯಾವಳಿಯು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ತಯಾರಿ ಮಾಡಿಕೊಳ್ಳಲು ಉತ್ತಮ ತಯಾರಿಯಾಗಿದೆ.

Story first published: Thursday, August 31, 2023, 15:49 [IST]
Other articles published on Aug 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+