'ನಾನು ನೋಡಿದ ಅತ್ಯುತ್ತಮ ಟಿ20 ಇನ್ನಿಂಗ್ಸ್'; ಕೊಹ್ಲಿ ಹಚ್ಚಿದ ದೀಪಾವಳಿ ಪಟಾಕಿಗೆ ಸೆಲ್ಯೂಟ್ ಎಂದ ಸೆಹ್ವಾಗ್

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತಮ್ಮ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಅಜೇಯರಾಗಿ ಉಳಿದುಕೊಂಡರು. ಇಷ್ಟೇ ಅಲ್ಲದೇ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಮಾಂಚಕಾರಿ ಜಯ ಗಳಿಸಲು ಭಾರತ ತಂಡಕ್ಕೆ ನೆರವಾದರು.
ಭಾರತದ ಸ್ಟಾರ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಶ್ರೇಷ್ಠ ಟಿ20 ಪ್ರದರ್ಶನಗಳಲ್ಲಿ ಒಂದನ್ನು ಆಡಿದರು. ರೋಹಿತ್ ಶರ್ಮಾ ನಾಯಕತ್ವದ ತಂಡವು ಕೊನೆಯ ಓವರ್‌ನ ಕೊನೆಯ ಬಾಲ್‌ವರೆಗೂ ನಡೆದ ಥ್ರಿಲ್ಲಿಂಗ್ ಗೇಮ್‌ನಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಿತು ಮತ್ತು ಕಳೆದ ವಿಶ್ವಕಪ್ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿತು. ಕಿಂಗ್ ಕೊಹ್ಲಿ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ 82 ರನ್ ಗಳಿಸಿದರು.

ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ನೋಡಿ ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ
ವಿರಾಟ್ ಕೊಹ್ಲಿ(82) ಅವರು ಹಾರ್ದಿಕ್ ಪಾಂಡ್ಯ (40) ಅವರೊಂದಿಗೆ ಪಾಕಿಸ್ತಾನ ವಿರುದ್ಧ 113 ರನ್‌ಗಳ ದಾಖಲೆ ಜೊತೆಯಾಟದಲ್ಲಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು. ಔಟಾಗದೆ 82 ರನ್ ಗಳಿಸಿದರು.
ಪಾಕಿಸ್ತಾನ ತಂಡವು ಆರಂಭದಲ್ಲಿಯೇ ಭಾರತದ ವಿಕೆಟ್ ಕಿತ್ತು ಗೆಲುವಿನತ್ತ ಸಾಗುತ್ತಿತ್ತು. ಆದರೆ ಕೊಹ್ಲಿ ಮತ್ತು ಪಾಂಡ್ಯ ಭಾರತ ತಂಡವನ್ನು ನಿಧಾನಗತಿ ರನ್ ಗಳಿಸುತ್ತ, ಆಗಾಗ ಬೌಂಡರಿ, ಸಿಕ್ಸರ್ ಬಾರಿಸುತ್ತ ರಕ್ಷಿಸಿದರು. ಭಾರತ ತಂಡ ಮತ್ತು ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ನೋಡಿ ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ.
ನಾನು ನೋಡಿದ ಅತ್ಯಂತ ಅದ್ಭುತ ಟಿ20 ಇನ್ನಿಂಗ್ಸ್
"Yaayyyy…Happyyy ದೀಪಾವಳಿ ಎಂತಹ ಅದ್ಭುತ ಆಟ. ಭಾವನೆಗಳು ದೊಡ್ಡದಿದ್ದವು, ಆದರೆ ಇದು ಚೇಸಿಂಗ್‌ನಲ್ಲಿ ನಾನು ನೋಡಿದ ಅತ್ಯಂತ ಅದ್ಭುತ ಟಿ20 ಇನ್ನಿಂಗ್ಸ್, ವಿರಾಟ್ ಕೊಹ್ಲಿಗೆ ಸೆಲ್ಯೂಟ್. Chak De India #IndvsPak #t20worldcup," ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ರೂಪ್ 2 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 159 ರನ್ ಗಳಿಸಿತು. ಶಾನ್ ಮಸೂದ್ ಅಜೇಯ 52, ಇಫ್ತಿಕರ್ ಅಹ್ಮದ್ 51 ರನ್ ಗಳಿಸಿದರು. ಇನ್ನು ಭಾರತದ ಪರ ಅರ್ಶ್‌ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಅಂತಿಮ ಓವರ್‌ನಲ್ಲಿ 16 ರನ್‌ಗಳ ಅವಶ್ಯಕತೆ ಇತ್ತು
160 ರನ್‌ಗಳ ಗುರಿ ಬೆನ್ನತ್ತಿದ ಭಾರತ ಪಂದ್ಯದ ಆರಂಭದಲ್ಲೇ ಆರಂಭಿಕರಾದ ಕೆಎಲ್ ರಾಹುಲ್ (4) ಮತ್ತು ರೋಹಿತ್ ಶರ್ಮಾ (4) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅನ್ನು ಮತ್ತೆ ಟ್ರ್ಯಾಕ್‌ಗೆ ತರಲು ವಿರಾಟ್ ಕೊಹ್ಲಿ ಕ್ರೀಸ್‌ಗೆ ಅಂಟಿಕೊಂಡರು. ಸೂರ್ಯಕುಮಾರ್ ಯಾದವ್ (15) ಮತ್ತು ಅಕ್ಷರ್ ಪಟೇಲ್ (2) ಅವರ ವಿಕೆಟ್‌ಗಳು ಭಾರತದ ಗೆಲುವಿನ ಅವಕಾಶಗಳನ್ನು ಕಸಿದುಕೊಂಡಿದ್ದವು. ಆದರೆ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಕೈಜೋಡಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಅಂತಿಮ ಓವರ್‌ನಲ್ಲಿ 16 ರನ್‌ಗಳ ಅವಶ್ಯಕತೆ ಇತ್ತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೇರಿದ್ದ 90,000ಕ್ಕೂ ಹೆಚ್ಚು ಅಭಿಮಾನಿಗಳ ಮುಂದೆ, ಕೊನೆಯ ಓವರ್ ಬೌಲಿಂಗ್ ಮಾಡಿದ ಸ್ಪಿನ್ನರ್ ಮೊಹಮ್ಮದ್ ನವಾಜ್ ಏಳು ರನ್, ನೋಬಾಲ್, ವೈಡ್ ಸೇರಿ ಒಟ್ಟು 16 ರನ್ ಬಿಟ್ಟುಕೊಟ್ಟರು. ಕೊನೆಯ ಬಾಲ್‌ನಲ್ಲಿ ಒಂದು ರನ್ ಬೇಕಿದ್ದಾಗ ಆರ್ ಅಶ್ವಿನ್ ಲಾಂಗ್ ಆಫ್ ಮೇಲೆ ತಳ್ಳಿ ಒಂದು ರನ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications