For Quick Alerts
ALLOW NOTIFICATIONS  
For Daily Alerts
 

Ind vs Pak: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಶೇ.60ರಷ್ಟು ಗೆಲುವಿನ ಅವಕಾಶವಿದೆ ಎಂದ ಡ್ಯಾನಿಶ್ ಕನೇರಿಯಾ

Team india

ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತವು ಶೇಕಡಾ 60ರಷ್ಟು ಗೆಲುವಿನ ಅವಕಾಶವಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ಈ ಮೂಲಕ ಏಷ್ಯಾಕಪ್‌ನಲ್ಲಿ ಭಾರತವು ಮೇಲುಗೈ ಸಾಧಿಸಲಿದೆ ಎಂದು ಅಂದಾಜಿಸಿದ್ದಾರೆ.

ಏಷ್ಯಾಕಪ್ ಆಗಸ್ಟ್‌ 27ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಪಂದ್ಯದ ಮೂಲಕ ಚಾಲನೆ ಸಿಗಲಿದ್ದು, ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಟೂರ್ನಮೆಂಟ್‌ ಕಾರಣಾಂತರಗಳಿಂದ ದುಬೈನಲ್ಲಿ ನಡೆಯಲಿದೆ.

ಪಾಕಿಸ್ತಾನ ವಿರುದ್ಧ ಭಾರತದ ಮೇಲುಗೈ

ಪಾಕಿಸ್ತಾನ ವಿರುದ್ಧ ಭಾರತದ ಮೇಲುಗೈ

ಭಾರತ ಪಾಕಿಸ್ತಾನ ಪಂದ್ಯವನ್ನ ವೀಕ್ಷಿಸಲು ಇಡೀ ಕ್ರಿಕೆಟ್ ಲೋಕವೇ ಕಾಯುತ್ತಾ ಕುಳಿತಿದ್ದು, 2021ರ ಟಿ20 ವಿಶ್ವಕಪ್‌ ಬಳಿಕ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ. ಗ್ರೂಪ್ ಬಿನಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ ಮತ್ತು ಭಾರತ ತಂಡಗಳ ಜೊತೆಗೆ ಹಾಂಕಾಂಗ್, ಕುವೈತ್, ಸಿಂಗಾಪೂರ್ ಮತ್ತು ಯುಎಇಯಿಂದ ಅರ್ಹತಾ ತಂಡಗಳ ಗುಂಪಿನಲ್ಲಿ ಸ್ಥಾನ ಪಡೆದಿವೆ. ಈಗಾಗಲೇ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಏಷ್ಯಾ ಕಪ್‌ 2022 ಟೂರ್ನಿಗೆ ತಂಡವನ್ನು ಘೋಷಣೆ ಮಾಡಿವೆ.

ಏಷ್ಯಾಕಪ್‌ನಲ್ಲಿ ಇದುವರೆಗೂ 14 ಬಾರಿ ಮುಖಾಮುಖಿಯಾಗಿರುವ ಉಭಯ ತಂಡಗಳಲ್ಲಿ ಪಾಕಿಸ್ತಾನ ಐದು ಬಾರಿಯಷ್ಟೇ ಭಾರತದ ವಿರುದ್ಧ ಯಶಸ್ವಿಯಾಗಿದ್ದು, ಟೀಂ ಇಂಡಿಯಾ 8 ಬಾರಿ ಗೆದ್ದಿದೆ. ಕಳೆದ ಎರಡು ಏಷ್ಯಾಕಪ್ ಚಾಂಪಿಯನ್‌ಶಿಪ್ ಗೆದ್ದಿರುವ ಬ್ಲೂ ಬಾಯ್ಸ್‌ ಮತ್ತೊಂದು ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಪಾಕಿಸ್ತಾನ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿತು.

ಏಷ್ಯಾ ಕಪ್ 2022 ಅರ್ಹತಾ ಪಂದ್ಯಗಳು: ತಂಡಗಳು, ವೇಳಾಪಟ್ಟಿ, ಸ್ಥಳ, ಲೈವ್‌ಸ್ಟ್ರೀಮ್ ತಿಳಿಯಿರಿ

ಉಭಯ ತಂಡಗಳಲ್ಲಿ ಕೆಲವು ಆಟಗಾರರು ಗಾಯಗೊಂಡಿದ್ದಾರೆ!

ಉಭಯ ತಂಡಗಳಲ್ಲಿ ಕೆಲವು ಆಟಗಾರರು ಗಾಯಗೊಂಡಿದ್ದಾರೆ!

ಭಾರತ ಮತ್ತು ಪಾಕಿಸ್ತಾನ ಎರಡು ತಂಡದಲ್ಲಿ ಕೆಲವು ಪ್ರಮುಖ ಆಟಗಾರರು ಗಾಯಗೊಂಡಿದ್ದು, ಹೈವೋಲ್ಟೇಜ್ ಪಂದ್ಯದಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದಾರೆ ಎಂದು ಅಂದಾಜಿಸಿದ್ದಾರೆ.

''ನಾನು ಸ್ಪಷ್ಟವಾಗಿ ಹೇಳುವ ವಿಚಾರ ಏನೆಂದರೆ, ಜಿಂಬಾಬ್ವೆ ವಿರುದ್ಧ ಸರಣಿಯಲ್ಲಿ ಕೆ.ಎಲ್ ರಾಹುಲ್ ಫಾರ್ಮ್ ಅನ್ನು ಗಮನಿಸಬೇಕಿದೆ. ಏಕೆಂದರೆ ಆತ ಗಾಯಗೊಂಡ ಬಳಿಕ ಟೀಂ ಇಂಡಿಯಾ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ಬೆನ್ನಿನ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆಯೇ ಎಂಬುದನ್ನು ಸಹ ಗಮನಿಸಬೇಕಿದೆ. ಇನ್ನು ಪಾಕಿಸ್ತಾನ ತಂಡದಲ್ಲಿ ನಸೀಮ್ ಶಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು, ಪ್ರಮುಖ ವೇಗಿ ಶಾಹೀನ್ ಕಅಫ್ರಿದಿ ಫಿಟ್ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎರಡು ತಂಡಗಳಲ್ಲಿ ಕೆಲವು ಆಟಗಾರರು ಗಾಯಾಳುಗಳ ಪಟ್ಟಿಯಲ್ಲಿದ್ದಾರೆ'' ಎಂದು ಡ್ಯಾನಿಶ್ ಕನೇರಿಯಾ ಇಂಡಿಯಾ ಟುಡೆಗೆ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ 100 ಗಳಿಸಿ 1000 ದಿನಗಳು; ಹೀಯಾಳಿಸಿದ ಇಂಗ್ಲೆಂಡ್‌ ಅಭಿಮಾನಿಗಳಿಗೆ ತಕ್ಕ ಪ್ರತ್ಯುತ್ತರ

ಭಾರತಕ್ಕೆ ಶೇ. 60ರಷ್ಟು ಗೆಲುವಿನ ಅವಕಾಶವಿದೆ: ಕನೇರಿಯಾ

ಭಾರತಕ್ಕೆ ಶೇ. 60ರಷ್ಟು ಗೆಲುವಿನ ಅವಕಾಶವಿದೆ: ಕನೇರಿಯಾ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಶೇಕಡಾ 60ರಷ್ಟು ಗೆಲುವಿನ ಅವಕಾಶವಿದೆ ಎಂದು ಪಾಕ್ ಮಾಜಿ ಸ್ಪಿನ್ನರ್ ಹೇಳಿದ್ದಾರೆ. ಉಭಯ ತಂಡಗಳ ಬೌಲಿಂಗ್ ಬಲ ಗಮನಿಸಿದ್ರೆ ಟೀಂ ಇಂಡಿಯಾ ಹೆಚ್ಚು ಬಲಿಷ್ಠವಾಗಿದ್ದು, ಪಾಕಿಸ್ತಾನ ಪರ ಪ್ರಸ್ತುತ ಶಾಹೀನ್ ಅಫ್ರಿದಿ ಪ್ರಮುಖ ವಿಕೆಟ್ ಟೇಕರ್‌ ಆಗಿ ಕಾಣಿಸುತ್ತಿಲ್ಲ ಎಂದಿದ್ದಾರೆ.

'' ಪ್ರಸ್ತುತ ಭಾರತವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಏಕೆಂದರೆ ಅವರು ಹೆಚ್ಚು ಟಿ20 ಕ್ರಿಕೆಟ್ ಅನ್ನುಆಡಿದ್ದು, ಭಾರತಕ್ಕೆ ಶೇ. 60ರಷ್ಟು ಮತ್ತು ಪಾಕಿಸ್ತಾನ ಶೇ. 40ರಷ್ಟು ಗೆಲುವಿನ ಸಾಧ್ಯತೆ ಹೊಂದಿದೆ.''

ಭಾರತದ ಸ್ಪಿನ್‌ ಬೌಲಿಂಗ್ ಕೂಡ ಉತ್ತಮವಾಗಿದ್ದು, ವರ್ಲ್ಡ್ಸ್ ಕ್ಲಾಸ್ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ರವಿ ಬಿಷ್ನೋಯಿ, ಯುಜವೇಂದ್ರ ಚಹಾಲ್, ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ. ವೇಗದ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಅರ್ಷ್‌ದೀಪ್ ಸಿಂಗ್ ಇದ್ದು, ತಂಡದ ಪರ ಮ್ಯಾಚ್ ವಿನ್ನರ್ ಆಗಿದ್ದಾರೆ. ಆದ್ರೆ ಪಾಕಿಸ್ತಾನ ತಂಡದಲ್ಲಿ ಶಾಹೀನ್ ಅಫ್ರಿದಿ ತಂಡದಲ್ಲಿಲ್ಲದಿದ್ರೆ, ಯಾರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆತನ ಬದಲು ಆಡುತ್ತಾರೆ'' ಎಂದು ಕನೇರಿಯಾ ಹೇಳಿದ್ದಾರೆ.

ಟೀಂ ಇಂಡಿಯಾ ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿದ್ದು, ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡವು ನೆದರ್ಲೆಂಡ್ಸ್‌ ವಿರುದ್ಧ ಏಕದಿನ ಸರಣಿ ಆಡುತ್ತಿದೆ.

Story first published: Saturday, August 20, 2022, 12:14 [IST]
Other articles published on Aug 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+