Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನಿ ವರದಿಗಾರನ ಪ್ರಶ್ನೆಗೆ ಸಖತ್ ಉತ್ತರ ನೀಡಿದ ರೋಹಿತ್ ಶರ್ಮಾ: ವೀಡಿಯೋ ವೈರಲ್

Rohit sharma

ಸೂಪರ್ ಸಂಡೇ ಫೈಟ್‌ಗೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ಸಿದ್ಧಗೊಂಡಿದ್ದು, ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. 2021ರ ಟಿ20 ವಿಶ್ವಕಪ್‌ ಬಳಿಕ ಕಣಕ್ಕಿಳಿಯುತ್ತಿರುವ ಉಭಯ ತಂಡಗಳು ಗೆಲುವಿಗಾಗಿ ಕಣ್ಣಿಟ್ಟಿವೆ.

2021ರ ಟಿ20 ವಿಶ್ವಕಪ್ ಮುಖಾಮುಖಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲನ್ನು ಅನುಭವಿಸಿದ ಭಾರತ, ಇತಿಹಾಸದಲ್ಲೇ ಕಾಣದ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಇದಷ್ಟೇ ಅಲ್ಲದೆ ಲೀಗ್ ಹಂತದಲ್ಲಿಯೇ ಹೊರಬಿದ್ದಿತು. ಆದ್ರೀಗ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ. ಟೀಂ ಇಂಡಿಯಾ ಕಳೆದೊಂದು ವರ್ಷದಲ್ಲಿ ನಾಯಕತ್ವ ಅಷ್ಟೇ ಅಲ್ಲದೆ ಸಾಕಷ್ಟು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ.

ಪಂದ್ಯಕ್ಕೂ ಮುನ್ನ ಪೂರ್ವ ಸುದ್ದಿಗೋಷ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾದ ಸಿದ್ಧತೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆಯಲ್ಲಿ ಪಾಕಿಸ್ತಾನಿ ಪತ್ರಕರ್ತ ಕೇಳಿದ ಪ್ರಶ್ನೆಗೆ ಸಖತ್ ಉತ್ತರ ನೀಡಿದ್ದಾರೆ.

ಪಾಕಿಸ್ತಾನಿ ವರದಿಗಾರನಿಗೆ ಹಿಟ್‌ಮ್ಯಾನ್ ಶೈಲಿಯಲ್ಲಿ ಉತ್ತರ

ಪಾಕಿಸ್ತಾನಿ ವರದಿಗಾರನಿಗೆ ಹಿಟ್‌ಮ್ಯಾನ್ ಶೈಲಿಯಲ್ಲಿ ಉತ್ತರ

ತಂಡ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯವಾಗಿ ಸೋತಿತ್ತು. ಹಾಗಾಗಿ ಈ ಬಾರಿ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ ಮತ್ತು ಭಾರತ ಹೇಗೆ ಸನ್ನದ್ಧವಾಗಿದೆ ಎಂಬುದರ ಕುರಿತು ನಾಯಕ ರೋಹಿತ್ ಶರ್ಮಾ ನಿನ್ನೆ ಮಾತನಾಡಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಿದ ಭಾರತ ತಂಡಕ್ಕೆ ಏನಾಯಿತು ಎಂದು ನಿಮಗೆ ತಿಳಿದಿದೆಯೇ? ಆ ಸೋಲಿನ ಪರಿಣಾಮ ಇನ್ನೂ ತಂಡದಲ್ಲಿದೆಯೇ ಮತ್ತು ಅವರು ಚೇತರಿಸಿಕೊಳ್ಳುತ್ತಾರೆಯೇ ಎಂದು ಪಾಕಿಸ್ತಾನಿ ವರದಿಗಾರ ಕೇಳಿದರು.

Asia cup 2022: ಪಾಕಿಸ್ತಾನ ವಿರುದ್ಧ ದಿನೇಶ್‌ ಕಾರ್ತಿಕ್‌ ಆಡುವುದು ಅನುಮಾನ!

ನನಗೆ ನೆನಪಿನ ಶಕ್ತಿ ಕಡಿಮೆ ಎಂದ ರೋಹಿತ್

ನನಗೆ ನೆನಪಿನ ಶಕ್ತಿ ಕಡಿಮೆ ಎಂದ ರೋಹಿತ್

ಈ ಮೇಲ್ಕಂಡ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರೋಹಿತ್ ಶರ್ಮಾ, "ಇಲ್ಲಿ ನೋಡು.. ನನಗೆ ನೆನಪಿನ ಶಕ್ತಿ ತುಂಬಾ ಕಡಿಮೆ ಇದೆ. ಒಂದು ವರ್ಷದ ಹಿಂದೆ ನಡೆದ ಘಟನೆಗಳು ನನಗೆ ನೆನಪಿಲ್ಲ. ಹಾಗಾಗಿ ಈಗ ಏನಾದರೂ ಪ್ರಶ್ನೆ ಇದ್ದರೆ ಕೇಳಿ." ಎಂದು ರೋಹಿತ್ ಹೇಳಿದ ಮಾತು ನಗುವಿಗೆ ಕಾರಣವಾಯಿತು.

ಹೊಸ ಪಂದ್ಯಾವಳಿ, ಹೊಸ ಆರಂಭ. ಹಿಂದೆ ಏನಾಯಿತು ಎಂದು ನನಗೆ ನೆನಪಿಲ್ಲ. ಪಾಕಿಸ್ತಾನದ ವಿರುದ್ಧ ಆಡುವುದು ಯಾವಾಗಲೂ ಸವಾಲಿನ ಸಂಗತಿ. ಒಂದೊಂದು ಪಂದ್ಯದಲ್ಲೂ ಮುಂದೆ ಸಾಗುತ್ತೇವೆ. ಮೊದಲ ಪಂದ್ಯಕ್ಕೆ ನಾವು ಇನ್ನೂ ಹನ್ನೊಂದು ಆಟಗಾರರನ್ನ ಅಂತಿಮಗೊಳಿಸಿಲ್ಲ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಪಂದ್ಯದ ಬಳಿಕ ತೀರ್ಮಾನಿಸುತ್ತೇವೆ ಎಂದರು.

ಸಿಹಿ ಸುದ್ದಿ: IND vs PAK ಪಂದ್ಯಕ್ಕೂ ಮುನ್ನ ಭಾರತ ತಂಡ ಸೇರಿಕೊಂಡ ಕೋಚ್ ರಾಹುಲ್ ದ್ರಾವಿಡ್

ಪ್ರಶ್ನೆ ನಿಲ್ಲಿಸದ ಪಾಕ್ ವರದಿಗಾರನಿಗೆ ಹಿಟ್‌ಮ್ಯಾನ್ ಸಖತ್ ಉತ್ತರ

ಪತ್ರಕರ್ತ ಇಷ್ಟಕ್ಕೇ ನಿಲ್ಲಲಿಲ್ಲ. ಪ್ರಶ್ನೆಯನ್ನು ಮುಂದುವರೆಸಿ ಭಾರತೀಯ ಆಟಗಾರರ ಅಂತಿಮ ಪ್ಲೇಯಿಂಗ್‌ 11 ರ ಬಗ್ಗೆ ಅವರು ಸ್ಪಷ್ಟವಾಗಿ ಕೇಳಿದರು. "ಕಳೆದ ಕೆಲವು ಸರಣಿಗಳಲ್ಲಿ ಭಾರತ ಹೊಸ ಓಪನಿಂಗ್ ಮಾಡಲು ಪ್ರಯತ್ನಿಸುತ್ತಿದೆ, ಏಕೆಂದರೆ ಆಗ ಕೆಎಲ್ ರಾಹುಲ್ ಇರಲಿಲ್ಲ. ಆದರೆ ಈ ಬಾರಿ ಕೆಎಲ್ ರಾಹುಲ್ ವಾಪಸ್ ಆಗಿದ್ದು ಅವರನ್ನು ಓಪನಿಂಗ್ ಆಗಿ ಕಣಕ್ಕಿಳಿಸುತ್ತೀರಾ ಎಂದು ನೇರವಾಗಿ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, "ಟಾಸ್ ನಂತರ ನಿಮಗೆ ತಿಳಿಯುತ್ತದೆ. ಅದನ್ನು ರಹಸ್ಯವಾಗಿಡೋಣ. ವಿಭಿನ್ನವಾಗಿ ಪ್ರಯತ್ನಿಸುವುದು ನಮ್ಮ ಗುರಿ. ನಾವು ಇನ್ನೂ ತಂಡವನ್ನು ನಿರ್ಧರಿಸಿಲ್ಲ. ನಾವು ಹೊಸ ಸಂಯೋಜನೆಗಳನ್ನು ಪ್ರಯತ್ನಿಸಿದಾಗ ಮಾತ್ರ ನಮಗೆ ಫಲಿತಾಂಶಗಳು ತಿಳಿಯುತ್ತವೆ. ನಾವು ಏಷ್ಯಾಕಪ್‌ನಲ್ಲಿ ಹಲವಾರು ವಿಷಯಗಳನ್ನು ನೋಡಲು ಬಯಸುತ್ತೇವೆ. ತಂಡದ ಕಾಂಬಿನೇಷನ್ ನಾಳೆ ತಿಳಿಯಲಿದೆ. ಫಲಿತಾಂಶ ಏನೇ ಬಂದರೂ ಕೆಲವು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ ಎಂದು ರೋಹಿತ್ ಹೇಳಿದ್ದಾರೆ.

Story first published: Sunday, August 28, 2022, 11:21 [IST]
Other articles published on Aug 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+