
ಮೆಲ್ಬರ್ನ್‌ನ ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬೌಲಿಂಗ್ ಆಯ್ದುಕೊಂಡು ಮೊದಲ 10 ಓವರ್‌ಗಳಲ್ಲಿ ಮೇಲುಗೈ ಸಾಧಿಸಿದೆ. ಟಿ20 ವಿಶ್ವಕಪ್‌ನ ಅತ್ಯಂತ ರೋಚಕ ಕಾದಾಟವನ್ನು ವೀಕ್ಷಿಸಲು ಎಂಸಿಜಿ ಮೈದಾನವು ಫುಲ್ ಆಗಿದ್ದು, 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯ ವೀಕ್ಷಿಸುತ್ತಿದ್ದಾರೆ.
ಟಾಸ್ ಗೆದ್ದ ಬಳಿಕ ಉಭಯ ತಂಡಗಳ ಆಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಭಾರತದ ರಾಷ್ಟ್ರಗೀತೆ ಹಾಡುವ ವೇಳೆಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೇಸ್ ಎಕ್ಸ್‌ಪ್ರೆಶನ್ ಸಾಕಷ್ಟು ವೈರಲ್ ಆಗಿದ್ದು, ಐಸಿಸಿ ಈ ಕುರಿತಾಗಿ ವೀಡಿಯೋವನ್ನು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದೆ.
ಈ ವೀಡಿಯೋದಲ್ಲಿ ರೋಹಿತ್ ಗಮನಿಸಿದ್ರೆ ಮುಖದಲ್ಲಿ ಸಾಕಷ್ಟು ಭಾವನೆಗಳನ್ನ ವ್ಯಕ್ತಪಡಿಸಿದ್ದಾರೆ. ಕಣ್ಣು ಮುಚ್ಚಿಕೊಂಡು ರಾಷ್ಟ್ರಗೀತೆ ಹಾಡಿರುವ ರೋಹಿತ್ ಶರ್ಮಾ ಕುರಿತಾದ ವೀಡಿಯೋವನ್ನು ಐಸಿಸಿ ಪೋಸ್ಟ್ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.
ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಏಳು ಬ್ಯಾಟರ್, ಓರ್ವ ಆಲ್‌ರೌಂಡರ್, ಇಬ್ಬರು ಸ್ಪಿನ್ನರ್ ಹಾಗೂ ಮೂವರ್ ಪೇಸರ್‌ಗಳನ್ನು ಆಯ್ದುಕೊಂಡಿದೆ. ಪಾಕಿಸ್ತಾನ ತಂಡದಲ್ಲಿ ಇಬ್ಬರು ಸ್ಪಿನ್ನರ್ ಹಾಗೂ ಮೂವರು ಪೇಸರ್‌ಗಳನ್ನು ಆಯ್ದುಕೊಂಡಿದೆ.
ಉಭಯ ತಂಡಗಳ ಪ್ಲೇಯಿಂಗ್ 11
ಟೀಂ ಇಂಡಿಯಾ: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬೆಂಚ್: ಯುಜವೇಂದ್ರ ಚಹಾಲ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ರಿಷಭ್ ಪಂತ್
ಪಾಕಿಸ್ತಾನ: ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ
ಬೆಂಚ್: ಖುಷ್ದಿಲ್ ಷಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ವಾಸಿಂ ಜ್ಯೂನಿಯರ್, ಫಖಾರ್ ಜಮಾನ್