IND vs PAK: ಈತನ ಅನುಪಸ್ಥಿತಿ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆ ಎಂದ ಇಂಜಮಾಮ್-ಉಲ್-ಹಕ್

ಇದೇ ಆಗಸ್ಟ್ 28ರಂದು 2022ರ ಏಷ್ಯಾ ಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿದ್ದು, ಈ ಸಂದರ್ಭದಲ್ಲಿ ಎದುರಾಳಿ ಪಾಕಿಸ್ತಾನವು 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತೋರಿದ ಪ್ರದರ್ಶನವನ್ನು ಮುಂದುವರೆಸಲು ಎದುರು ನೋಡುತ್ತಿದೆ.
ಕಳೆದ ವರ್ಷ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸಮಗ್ರವಾಗಿ ಸೋಲಿಸಿತು ಮತ್ತು ಆ ಗೆಲುವಿನ ರೂವಾರಿ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ಅವರು ಭಾರತದ ಅಗ್ರ ಕ್ರಮಾಂಕವನ್ನು ಬೇಗನೇ ಪೆವಿಲಿಯನ್‌ಗೆ ಕಳುಹಿಸಿದ್ದರು.
ಆದರೆ, ಮೊಣಕಾಲಿನ ಗಾಯದಿಂದ ಹೊರಗುಳಿದಿರುವ ಶಾಹೀನ್ ಅಫ್ರಿದಿ ಈ ಬಾರಿಯ ಏಷ್ಯಾ ಕಪ್‌ಗೆ ಲಭ್ಯರಿರುವುದಿಲ್ಲ ಮತ್ತು ಇದು ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ. ಭಾರತದ ಬಲಗೈ ಬ್ಯಾಟರ್‌ಗಳು ಸಾಂಪ್ರದಾಯಿಕವಾಗಿ ಎಡಗೈ ವೇಗಿಗಳ ವಿರುದ್ಧ ಹೆಣಗಾಡುತ್ತಿದ್ದಾರೆ, ಕಳೆದ ದಶಕದಲ್ಲಿ ಮಹಮ್ಮದ್ ಅಮೀರ್ ಮತ್ತು ಜುನೈದ್ ಖಾನ್ ಅವರಂತಹ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದರು.
ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮುಖ್ಯ ಆಯ್ಕೆಗಾರ ಇಂಜಮಾಮ್-ಉಲ್-ಹಕ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವೊಂದರಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನವು ಎಡಗೈ ವೇಗಿ ಶಾಹೀನ್ ಅಫ್ರಿದಿಯನ್ನು ಏಕೆ ಮಿಸ್ ಮಾಡಿಕೊಳ್ಳುತ್ತದೆ ಎಂದು ವಿವರಿಸಿದ್ದಾರೆ.

ಶಾಹೀನ್ ಅಫ್ರಿದಿ ಅನುಪಸ್ಥಿತಿ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ
"ಶಾಹೀನ್ ಅಫ್ರಿದಿ ಏಷ್ಯಾ ಕಪ್‌ನಿಂದ ಹೊರಗುಳಿದಿರುವುದು ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ. ನೀವು ಭಾರತದ ವಿರುದ್ಧದ ಕೊನೆಯ ಪಂದ್ಯವನ್ನು ನೋಡಿದರೆ, ಹಿಂದಿನ ಆವೃತ್ತಿಯ ಟಿ20 ವಿಶ್ವಕಪ್‌ನ ಮೊದಲ ಓವರ್‌ನಿಂದಲೇ ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಅಫ್ರಿದಿ ಒತ್ತಡವನ್ನು ಸೃಷ್ಟಿಸಿದರು," ಎಂದು ಇಂಜಮಾಮ್-ಉಲ್-ಹಕ್ ಅವರ YouTube ಶೋನಲ್ಲಿ ಹೇಳಿದರು.
ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಪ್ರಸಿದ್ಧ 10 ವಿಕೆಟ್ ಜಯದಲ್ಲಿ ಎಡಗೈ ವೇಗಿ ಶಾಹೀನ್ ಅಫ್ರಿದಿ ಪ್ರಮುಖ ಪಾತ್ರ ವಹಿಸಿದ್ದರು. ಏಕೆಂದರೆ ಬಾಬರ್ ಅಜಂ ನೇತೃತ್ವದ ತಂಡವು ಭಾರತವನ್ನು ಮೊದಲ ಬಾರಿಗೆ ವಿಶ್ವಕಪ್ ವೇದಿಕೆಯಲ್ಲಿ ಸೋಲಿಸಿತು. ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಭಾರತದ ಅಗ್ರ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು.

ಪಾಕಿಸ್ತಾನ ವಿರುದ್ಧದ ಸೋಲಿಗೆ ಭಾರತ ಪ್ರತೀಕಾರ?
ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಹವಣಿಸುತ್ತಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ವಿಶ್ವಕಪ್ ಮಾದರಿಯ ವೇದಿಕೆಯಲ್ಲಿ ಪಾಕಿಸ್ತಾನದ ಮೊದಲ ಗೆಲುವಾಗಿತ್ತು.
50 ಓವರ್‌ಗಳ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಈವರೆಗೆ ಭಾರತವನ್ನು ಸೋಲಿಸಿಲ್ಲ, ಅಲ್ಲಿ ಭಾರತೀಯರು 'ಮೆನ್ ಇನ್ ಗ್ರೀನ್' ಮೇಲೆ 6-0 ಅಜೇಯ ದಾಖಲೆಯನ್ನು ಮುಂದುವರೆಸಿದ್ದಾರೆ.

ಶಾಹೀನ್ ಅಫ್ರಿದಿ ಬದಲಿಗೆ ಮೊಹಮ್ಮದ್ ಹಸ್ನೇನ್ ಆಯ್ಕೆ
ಶಾಹೀನ್ ಅಫ್ರಿದಿಗೆ 4ರಿಂದ 6 ವಾರಗಳ ವಿಶ್ರಾಂತಿಯನ್ನು ಸೂಚಿಸಲಾಗಿದ್ದು, ಇದು ಪಾಕಿಸ್ತಾನದೊಂದಿಗಿನ ಇಂಗ್ಲೆಂಡ್ ಸರಣಿಯಿಂದಲೂ ಅವರನ್ನು ಹೊರಗಿಡಲಾಗುತ್ತದೆ. ಆದರೆ, ಪಾಕಿಸ್ತಾನ ತಂಡ ಇದೀಗ ತನ್ನ ವೇಗದ ಬೌಲರ್ ಶಾಹೀನ್ ಅಫ್ರಿದಿ ಬದಲಿಗೆ ಬೇರೆ ಆಟಗಾರನನ್ನು ಹೆಸರಿಸಿದೆ.
ಈ ವರ್ಷದ ಆವೃತ್ತಿಯಲ್ಲಿ ಟಿ20 ಮಾದರಿಯಲ್ಲಿ ಆಡಲಾಗುವ ಏಷ್ಯಾ ಕಪ್ 2022ಗಾಗಿ ಪಾಕಿಸ್ತಾನದ 15 ಸದಸ್ಯರ ತಂಡದಲ್ಲಿ ಮೊಹಮ್ಮದ್ ಹಸ್ನೇನ್ ಕಾಣಿಸಿಕೊಳ್ಳಲಿದ್ದಾರೆ. 22ರ ಹರೆಯದ ವೇಗಿ ಮೊಹಮ್ಮದ್ ಹಸ್ನೇನ್ ಪಾಕಿಸ್ತಾನ ಪರ 18 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದುವರೆಗೆ 17 ವಿಕೆಟ್‌ಗಳನ್ನು ಪಡೆದಿದ್ದಾರೆ.

ಏಷ್ಯಾ ಕಪ್ 2022ಗಾಗಿ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ದಾಝ್, ನಸೀಮ್ ಶಾಹಿ ಮತ್ತು ಉಸ್ಮಾನ್ ಖಾದಿರ್. (ನವೀಕರಿಸಲಾಗಿದೆ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications