IND vs PAK: ಏಷ್ಯಾ ಕಪ್‌ಗೂ ಮುನ್ನ ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಶಾಹಿದ್ ಅಫ್ರಿದಿ ಮಾತು

ಸದ್ಯ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ಬ್ಯಾಟಿಂಗ್ ಫಾರ್ಮ್ ಜಗತ್ತಿನಾದ್ಯಂತ ಹೆಚ್ಚು ಚರ್ಚಿಸಲ್ಪಟ್ಟ ವಿಷಯವಾಗಿದೆ. ಈ ನಡುವೆ ಸ್ಟಾರ್ ಬ್ಯಾಟರ್ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸವನ್ನು ತಪ್ಪಿಸಿಕೊಂಡು ಸ್ವಲ್ಪ ವಿರಾಮ ತೆಗೆದುಕೊಂಡರು.
ಆದಾಗ್ಯೂ, ಭಾನುವಾರ (ಆಗಸ್ಟ್ 28)ದಂದು ಭಾರತವು ತಮ್ಮ ಆರಂಭಿಕ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ವೇಳೆ ಬ್ಯಾಟಿಂಗ್ ಲಯಕ್ಕೆ ಮರಳಲು ಸಿದ್ಧರಾಗಿದ್ದಾರೆ. ಏಷ್ಯಾ ಕಪ್‌ಗಿಂತ ಹೆಚ್ಚಾಗಿ 2022ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಬಹು ನಿರೀಕ್ಷಿತ ಪಂದ್ಯ
2022ರ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಹು ನಿರೀಕ್ಷಿತ ಪಂದ್ಯದ ಮುನ್ನ ಹಾಗೂ ನಂತರ ವಿರಾಟ್ ಕೊಹ್ಲಿ ಅವರ ಭವಿಷ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಟ್ವಿಟರ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಭಾರದತ ಸ್ಟಾರ್ ವಿರಾಟ್ ಕೊಹ್ಲಿಯ ಭವಿಷ್ಯದ ಬಗ್ಗೆ ಕೇಳಿದಾಗ ದೊಡ್ಡ ಟೀಕೆ ಮಾಡಿದ್ದು, 'ಅದು ವಿರಾಟ್ ಕೊಹ್ಲಿ ಕೈಯಲ್ಲಿದೆ' ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಉತ್ತರಿಸಿದರು.

ಏಷ್ಯಾ ಕಪ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ
ವಿರಾಟ್ ಕೊಹ್ಲಿ ಐದು ವಾರಗಳ ವಿರಾಮದ ನಂತರ ಏಷ್ಯಾ ಕಪ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ಭಾರತವು ಆಗಸ್ಟ್ 28ರಂದು ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ನ ತಮ್ಮ ಆರಂಭಿಕ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಗಮನಾರ್ಹವಾಗಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಕಾಣಿಸಿಕೊಂಡರು.
ಇಂಗ್ಲೆಂಡ್ ಪ್ರವಾಸದ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಲು ಭಾರತದ ಮಾಜಿ ನಾಯಕ ವಿಫಲರಾದರು. ಆ ಪ್ರವಾಸದ ನಂತರ ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ಅಲ್ಪ ವಿರಾಮ ತೆಗೆದುಕೊಂಡರು. ಕಳಪೆ ಫಾರ್ಮ್‌ನಲ್ಲಿರುವಾಗಲೇ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯ ಭಾರತದ ಪ್ರವಾಸಗಳನ್ನು ಕಳೆದುಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಮಾಜಿ ನಾಯಕನ ಪ್ರಸ್ತುತ ಫಾರ್ಮ್ ಚರ್ಚೆಯ ವಿಷಯವಾಗಿದ್ದು, ಅನೇಕರು ಟಿ20 ಸ್ವರೂಪದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ಪ್ರಶ್ನಿಸಿದ್ದಾರೆ.

1000 ದಿನಗಳ ಹಿಂದೆ ಕೊಹ್ಲಿಯ ಕೊನೆಯ ಅಂತಾರಾಷ್ಟ್ರೀಯ ಶತಕ
ವಿರಾಟ್ ಕೊಹ್ಲಿಯ ಕೊನೆಯ ಅಂತಾರಾಷ್ಟ್ರೀಯ ಶತಕವು 1000 ದಿನಗಳ ಹಿಂದೆ ಬಂದಿತ್ತು ಮತ್ತು ಅಂದಿನಿಂದ ಅವರ ಆಟದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅವರ ಕಂಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿ 1000 ಪ್ಲಸ್ ದಿನಗಳಿಂದ ಶತಕ ಗಳಿಸಿಲ್ಲ ಎಂದು ಗಮನಸೆಳೆದಿದ್ದರು. ಇದಕ್ಕೆ ಉತ್ತರಿಸಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, "ಬೇರ್ ಪ್ಲೇಯರ್ಸ್ ಕಾ ಮುಷ್ಕಿಲ್ ವಕ್ತ್ ಮೆ ಹಾಯ್ ಪಟಾ ಚಲತಾ ಹೈ" (ಕಠಿಣ ಸಮಯಗಳು ಮಾತ್ರ ದೊಡ್ಡ ಆಟಗಾರರನ್ನು ಹೊರತೆಗೆಯಬಹುದು) ಎಂದು ಹೇಳಿದರು.

ಪಾಕಿಸ್ತಾನ ವಿರುದ್ಧ ಟಿ20 ಪಂದ್ಯಗಳಲ್ಲಿ ಉತ್ತಮ ದಾಖಲೆ
ಪಾಕಿಸ್ತಾನ ವಿರುದ್ಧ ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಏಳು ಪಂದ್ಯಗಳಲ್ಲಿ ಅವರು 77.75 ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಅವರು ಮೂರು ಸಂದರ್ಭಗಳಲ್ಲಿ ಅಜೇಯರಾಗಿ ಉಳಿದರು ಮತ್ತು 35 ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ಭಾರತ ತಂಡದ ಮ್ಯಾನೇಜ್‌ಮೆಂಟ್ ಬೆಂಬಲದೊಂದಿಗೆ 33 ವರ್ಷ ವಯಸ್ಸಿನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಂಬರುವ ಏಷ್ಯಾ ಕಪ್‌ನಲ್ಲಿ ಉತ್ತಮ ಫಾರ್ಮ್‌ಗೆ ಮರಳುವ ಭರವಸೆಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications