Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup: ಪಾಕಿಸ್ತಾನ ವಿರುದ್ಧದ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿಯೇ ಸ್ಫೂರ್ತಿ; ಜೆಮಿಮಾ ರೋಡ್ರಿಗಸ್

IND vs PAK: Virat Kohli Inspired Behind Winning Performance Against Pakistan Says Jemimah Rodrigues

ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ 7 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಭಾರತ ತಂಡದ ಅಮೋಘ ಗೆಲುವಿನಲ್ಲಿ ರಿಚಾ ಘೋಷ್ ಮತ್ತು ಜೆಮಿಮಾ ರೋಡ್ರಿಗಸ್ ವೀರಾವೇಶದ ಪಾತ್ರ ವಹಿಸಿದರು. ರಿಚಾ ಘೋಷ್ 20 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ 38 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು. ಪಾಕಿಸ್ತಾನ ನೀಡಿದ್ದ 150 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದರು.

ಭಾನುವಾರ ಪಂದ್ಯದ ನಂತರ ಮಾತನಾಡಿದ ಪಂದ್ಯಶ್ರೇಷ್ಠ ವಿಜೇತ ಆಟಗಾರ್ತಿ ಜೆಮಿಮಾ ರೋಡ್ರಿಗಸ್, ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿಯಿಂದ ಸ್ಫೂರ್ತಿ ಪಡೆದಿತ್ತು ಎಂದು ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ 4 ವಿಕೆಟ್‌ಗಳ ಗೆಲುವು ಸಾಧಿಸುವಲ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿದ್ದ ವಿರಾಟ್ ಕೊಹ್ಲಿಯ ಬಿರುಸಿನ ಆಟ ಸ್ಪೂರ್ತಿದಾಯಕ ಎಂದು ಪಂದ್ಯ ವಿಜೇತೆ ಜೆಮಿಮಾ ರೋಡ್ರಿಗಸ್ ತಿಳಿಸಿದರು.

IND vs PAK: Virat Kohli Inspired Behind Winning Performance Against Pakistan Says Jemimah Rodrigues

"ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಯಾವಾಗಲೂ ಹೆಚ್ಚಿನ ವಿಶೇಷತೆಯಿಂದ ಕೂಡಿರುತ್ತದೆ, ಇದನ್ನು ತಂಡದ ಮಾತುಕತೆಯಲ್ಲಿ ಚರ್ಚಿಸಿದ್ದೇವೆ," ಎಂದು 22 ವರ್ಷದ ಜೆಮಿಮಾ ರೋಡ್ರಿಗಸ್ ಹೇಳಿದರು.

"ಸಣ್ಣವರಿದ್ದಾಗಿನಿಂದಲೂ ನಾವು ಯಾವಾಗಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯಗಳನ್ನು ನೋಡುತ್ತಿದ್ದೆವು. ಇತ್ತೀಚಿಗೆ ಎಂಸಿಜಿಯಲ್ಲಿ ವಿರಾಟ್ ಕೊಹ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಪಂದ್ಯವನ್ನು ವೀಕ್ಷಿಸಿದ್ದು ನನಗೆ ನೆನಪಿದೆ. ಅದೇ ಸ್ಫೂರ್ತಿಯಾಗಿತ್ತು," ಎಂದು ಜೆಮಿಮಾ ರೋಡ್ರಿಗಸ್ ತಿಳಿಸಿದರು.

"ನಾವು ಬೋರ್ಡ್‌ನಲ್ಲಿ ನಮ್ಮ ಮೊದಲ ಗೆಲುವನ್ನು ದಾಖಲಿಸಲು ಬಯಸಿದ್ದೆವು. ಎಂದಿನಂತೆ ಅದೇ ತೀವ್ರತೆಯೊಂದಿಗೆ, ಅದೇ ಕ್ರಿಕೆಟ್ ಅನ್ನು ಆಡಿದೆವು," ಎಂದರು.

IND vs PAK: Virat Kohli Inspired Behind Winning Performance Against Pakistan Says Jemimah Rodrigues

ಜೆಮಿಮಾ ರೋಡ್ರಿಗಸ್ ತನ್ನ ಕೊನೆಯ 10 ಟಿ20 ಅಂತಾಅರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ ಒಂದು ಬಾರಿ 30ಕ್ಕಿಂತ ಅಧಿಕ ಸ್ಕೋರ್ ಗಳಿಸಿದ್ದರು. ಇದೀಗ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಅರ್ಧಶತಕ ಬಾರಿಸಿ ಫಾರ್ಮ್‌ನ ಚಿಂತೆಯಿಂದ ಬಂದರು.

ಭಾನುವಾರ, ಫೆಬ್ರವರಿ 12ರಂದು ಪಾಕಿಸ್ತಾನ ವಿರುದ್ಧ ರಿಚಾ ಘೋಷ್ ಸಹ ಅತ್ಯುತ್ತಮ ಪ್ರದರ್ಶನ ನೀಡಿದರು. 19 ವರ್ಷದ ಭಾರತೀಯ ವಿಕೆಟ್‌ಕೀಪರ್ ರಿಚಾ ಘೋಷ್ ಅವರು ಅಜೇಯ 31 ರನ್ ಗಳಿಸಿ ಗೆಲುವಿನ ಕೊಡುಗೆ ನೀಡಿದರು.

ಭಾರತ ಮತ್ತು ಪಾಕಿಸ್ತಾಮ ಮಹಿಳಾ ತಂಡಗಳ ನಡುವೆ ಕಳೆದ 14 ಟಿ20 ಪಂದ್ಯಗಳ ಮುಖಾಮುಖಿಯಲ್ಲಿ ಭಾರತ 11ನೇ ಗೆಲುವು ಸಾಧಿಸಿತು.

Story first published: Monday, February 13, 2023, 11:45 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+