Ind vs Pak: ಪಾಕಿಸ್ತಾನದ ವಿಶೇಷ ಅಭಿಮಾನಿಯನ್ನ ಭೇಟಿ ಮಾಡಿದ ವಿರಾಟ್ ಕೊಹ್ಲಿ, ವೀಡಿಯೋ ವೈರಲ್

ಏಷ್ಯಾಕಪ್ 2022ರ ಟೂರ್ನಮೆಂಟ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಶನಿವಾರ (ಆ. 27) ಏಷ್ಯಾಕಪ್‌ಗೆ ಅಧಿಕೃತ ಚಾಲನೆ ಸಿಗಲಿದ್ದು, ಭಾನುವಾರ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಲಿದೆ. ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನ ದುಬೈ ಅಂಗಳದಲ್ಲಿ ಎದುರಿಸಲಿದೆ.
2021ರ ಟಿ20 ವಿಶ್ವಕಪ್ ಬಳಿಕ ಭಾರತ-ಪಾಕಿಸ್ತಾನ ತಂಡಗಳು ಚುಟುಕು ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗ್ತಿವೆ. ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ಭಾರತವನ್ನ 10 ವಿಕೆಟ್‌ಗಳ ಅಂತರದಲ್ಲಿ ಹೀನಾಯ ಸೋಲಿನ ರುಚಿ ತೋರಿಸಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಈ ಪಂದ್ಯ ಸೋತಿದ್ದರ ಜೊತೆ ಲೀಗ್ ಹಂತದಲ್ಲಿಯೇ ಭಾರತ ಹೊರಬಿದ್ದಿತು. ಆದ್ರೀಗ
ರೋಹಿತ್ ಶರ್ಮಾ ನಾಯಕತ್ವದ ಭಾರತವು ಹಳೆಯ ಸೋಲಿಗೆ ಸೇಡಿಗೆ ತೀರಿಸಿಕೊಳ್ಳಲು ಎದುರು ನೋಡುತ್ತಿದೆ.
ಇನ್ನು ಈಗಾಗಲೇ ಯುಎಇನಲ್ಲಿ ಬೀಡುಬಿಟ್ಟಿರುವ ಎಲ್ಲಾ ತಂಡಗಳ ರೀತಿಯಲ್ಲಿ ಟೀಂ ಇಂಡಿಯಾ ಆಟಗಾರರು ಕೂಡ ಅಭ್ಯಾಸ ನಡೆಸಿದ್ದಾರೆ. ಈ ವೇಳೆಯಲ್ಲಿ ಭಾರತ ಅಷ್ಟೇ ಅಲ್ಲದೆ ಪಾಕಿಸ್ತಾನ ಮೂಲದ ಅಭಿಮಾನಿಗಳು ಸಹ ಟೀಂ ಇಂಡಿಯಾ ಆಟಗಾರರ ಬೆನ್ನತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ವರದಿಯಾಗಿದೆ. ಇದೇ ವೇಳೆಯಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ಮೂಲದ ವಿಶೇಷ ಅಭಿಮಾನಿಯನ್ನ ಭೇಟಿ ಮಾಡಿದ್ದು, ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ಪಾಕಿಸ್ತಾನದ ವಿಕಲಚೇತನ ಅಭಿಮಾನಿಯನ್ನ ಭೇಟಿ ಮಾಡಿದ ಕೊಹ್ಲಿ
ತರಬೇತಿ ಸಮಯದಲ್ಲಿ, ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಕ್ರೀಡಾಂಗಣದ ಸುತ್ತಲೂ ಬಂದಿದ್ದರು. ಈ ಸಂದರ್ಭದಲ್ಲಿ, ಗುರುವಾರ ರಾತ್ರಿ ತರಬೇತಿ ಅವಧಿಯ ನಂತರ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿಕಲಚೇತನ ಅಭಿಮಾನಿ ನೂರ್ ಅವರೊಂದಿಗೆ ಕೊಹ್ಲಿ ಮಾತನಾಡಿ ಫೋಟೋ ನೀಡಿರುವುದನ್ನ ಕಾಣಬಹುದು. ಕೊಹ್ಲಿ ನೂರ್ ಬಗ್ಗೆ ತಿಳಿದಾಗ, ಅವರು ಸ್ವಲ್ಪ ಹಿಂದೆ ಮುಂದೆ ಯೋಚಿಸದೆ ತಕ್ಷಣ ಅವರನ್ನು ಭೇಟಿ ಮಾಡಲು ತೆರಳಿದ್ದು, ಫೋಟೋ ನೀಡಿದ್ದಾರೆ.
ವಿರಾಟ್ ಫಾರ್ಮ್ ಕಳೆದುಕೊಂಡಿಲ್ಲ: ಫ್ಯಾನ್ಸ್, ಕೊಹ್ಲಿಯಿಂದ ಕೇವಲ ಸೆಂಚುರಿಯನ್ನಷ್ಟೇ ಬಯಸುತ್ತಿದ್ದಾರೆ!

ಕೊಹ್ಲಿಯ ಕಟ್ಟಾ ಅಭಿಮಾನಿ ಕರಾಚಿಯ ನೂರ್
ಕರಾಚಿಯ ನಿವಾಸಿಯಾದ ನೂರ್ ವಿರಾಟ್ ಕೊಹ್ಲಿಯ ಪ್ರಚಂಡ ಅಭಿಮಾನಿ ಆಗಿದ್ದಾರೆ. ಕೊಹ್ಲಿಯನ್ನು ಭೇಟಿಯಾಗಲು ವಿಶೇಷವಾಗಿ ಸ್ಟೇಡಿಯಂ ತಲುಪಿದ್ದರು. ತರಬೇತಿ ಅವಧಿಗೆ ಬರುವಾಗ ಕೊಹ್ಲಿ ಅವರನ್ನು ಗಮನಿಸಲಿಲ್ಲ. ಆದರೆ ಹೊರಡುವಾಗ ಕೊಹ್ಲಿ ಅವರನ್ನು ಭೇಟಿಯಾದರು. ಭಾರತದ ಆಟಗಾರರು ಸುಮಾರು ಮೂರು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು ಮತ್ತು ಅಲ್ಲಿಯವರೆಗೆ ಪಾಕಿಸ್ತಾನಿ ಅಭಿಮಾನಿಗಳು ಕೊಹ್ಲಿಗಾಗಿ ಕಾಯುತ್ತಿದ್ದರು.
ಈ ಬಾರಿ ಏಷ್ಯಾಕಪ್‌ನಲ್ಲಿ ಆಡಲಿರುವ 5 ತಂಡಗಳ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಕೊಹ್ಲಿಗಿಂತ ರೋಹಿತ್ ಮುಂದು!
ಕೊಹ್ಲಿಯನ್ನ ಹೊಗಳಿದ ಪಾಕ್ ಅಭಿಮಾನಿ
ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ವಿಡಿಯೋದಲ್ಲಿ ಈ ಹುಡುಗಿ ವಿರಾಟ್ ಕೊಹ್ಲಿಯನ್ನು ತುಂಬಾ ಹೊಗಳಿದ್ದಾಳೆ. ಪಾಕ್ ಟಿವಿ ಜೊತೆಗಿನ ಸಂವಾದದಲ್ಲಿ ನಾನು ವಿರಾಟ್ ಕೊಹ್ಲಿ ಹೊರತು ಬೇರೆ ಯಾರ ಅಭಿಮಾನಿಯೂ ಅಲ್ಲ ಎಂದಿದ್ದಾರೆ. ನಾನು ಪಾಕಿಸ್ತಾನದಿಂದ ಬಂದಿದ್ದು ವಿರಾಟ್ ಜೊತೆಗಿನ ಚಿತ್ರ ಪಡೆಯುವ ಅವಕಾಶ ಸಿಗಲಿ ಎಂದು. ಒಬ್ಬ ಶ್ರೇಷ್ಠ ಕ್ರಿಕೆಟಿಗನಲ್ಲದೆ, ಅವನು ತುಂಬಾ ಒಳ್ಳೆಯ ಮನುಷ್ಯ. ಅವರು ನಮಗೆ ಸಾಕಷ್ಟು ಸಮಯ ನೀಡಿದರು ಮತ್ತು ನಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡರು. ಈ ಹುಡುಗಿಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿಗೋಸ್ಕರ ಒಂದು ತಿಂಗಳಿನಿಂದ ಕಾಯುತ್ತಿದ್ದ ಪಾಕ್ ಮೂಲದ ಅಭಿಮಾನಿ
ಇನ್ನು ನೂರ್ ಕಥೆ ಒಂದೆಡೆಯಾದ್ರೆ, ವಿರಾಟ್ ಕೊಹ್ಲಿಯನ್ನ ಭೇಟಿ ಮಾಡಲೇಬೇಕು, ಆತನೊಂದಿಗೆ ಫೋಟೊ ತೆಗಿಸಿಕೊಳ್ಳಬೇಕೆಂದು ಪಾಕ್ ಮೂಲದ ಅಭಿಮಾನಿಯೊಬ್ಬ ದುಬೈನಲ್ಲಿ ತಿಂಗಳಿನಿಂದ ಕಾಯುತ್ತಿದ್ದ ಘಟನೆ ವರದಿಯಾಗಿದೆ.
ಮೊಹಮ್ಮದ್ ಜಿಬ್ರಾನ್ ಎಂಬ ವ್ಯಕ್ತಿ ವಿರಾಟ್ ಕೊಹ್ಲಿ ಬಹುದೊಡ್ಡ ಅಭಿಮಾನಿ ಆಗಿದ್ದು, ಪಾಕಿಸ್ತಾನದಿಂದ ಬಂದು ಒಂದು ತಿಂಗಳ ಕಾಲ ಕಾದಿದ್ದಾನೆ. ಟೀಂ ಇಂಡಿಯಾದ ಎಲ್ಲಾ ಆಟಗಾರರ ಫೋಟೋ ತೆಗೆಸಿಕೊಂಡಿರುವ ಈತ ಕೊಹ್ಲಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ತಿಂಗಳಗಟ್ಟಲೇ ದುಬೈನಲ್ಲಿ ಸಮಯ ಕಳೆದಿದ್ದನು. ಕೊನೆಗೂ ಜಿಬ್ರಾನ್ ಆಸೆ ನೆರವೇರಿದ್ದು, ವಿರಾಟ್ ಬಹಳ ಸ್ವಾಭಾವಿಕವಾಗಿ, ಯಾವುದೇ ಅಹಂ ಪ್ರದರ್ಶಿಸದೇ ಫೋಟೋ ನೀಡಿದ್ದಾರೆ. ಫೋಟೋ ತೆಗೆದುಕೊಳ್ಳುವ ವೇಳೆಯಲ್ಲಿ ವಿರಾಟ್ ಹೆಗಲಮೇಲೆ ಅಭಿಮಾನಿ ಕೈ ಹಾಕಿ ಪೋಸ್ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications