ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಫಾರ್ಮ್ ಕಳೆದುಕೊಂಡಿಲ್ಲ: ಫ್ಯಾನ್ಸ್‌, ಕೊಹ್ಲಿಯಿಂದ ಕೇವಲ ಸೆಂಚುರಿಯನ್ನಷ್ಟೇ ಬಯಸುತ್ತಿದ್ದಾರೆ!

Rashid khan

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಕುರಿತಾಗಿ ಕಳೆದ ಎರಡು ವರ್ಷದಿಂದ ನಿರಂತರ ಚರ್ಚೆ ನಡೆಯುತ್ತಲೇ ಇದೆ. ಕೊಹ್ಲಿ ಯಾವಾಗ ಸೆಂಚುರಿ ಸಿಡಿಸುತ್ತಾರೆಂದು ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಸೆಂಚುರಿ ಸಿಡಿಸಿ 1000 ದಿನಗಳೇ ಉರುಳಿ ಹೋಗಿವೆ. ಹೀಗಿರುವಾಗ ಏಷ್ಯಾಕಪ್‌ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ.

ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಗೆ ವಿಶ್ರಾಂತಿ ಪಡೆದಿದ್ದ ವಿರಾಟ್, ಜಿಂಬಾಬ್ವೆ ಸರಣಿಗೂ ಕೂಡ ತೆರಳಲಿಲ್ಲ. ಹೀಗಾಗಿ ಎರಡು ಪ್ರವಾಸಗಳನ್ನ ಮಿಸ್ ಮಾಡಿದ್ದ ಕೊಹ್ಲಿ ವಿಶ್ರಾಂತಿ ಬಯಸಿದ್ದರು. ಆದ್ರೀಗ ನೇರವಾಗಿ ಏಷ್ಯಾಕಪ್‌ನಲ್ಲಿ ಭಾಗಿಯಾಗುತ್ತಿದ್ದು, ಪಾಕಿಸ್ತಾನ ವಿರುದ್ಧ ಭಾರತದ ಅಭಿಯಾನದಲ್ಲಿ ಕೊಹ್ಲಿ ಕಂಬ್ಯಾಕ್ ಮಾಡುವ ಯೋಚನೆ ಹೊಂದಿದ್ದಾರೆ.

ನವೆಂಬರ್ 2019ರಿಂದ ಒಂದು ಶತಕವನ್ನ ಸಿಡಿಸದ ವಿರಾಟ್

ನವೆಂಬರ್ 2019ರಿಂದ ಒಂದು ಶತಕವನ್ನ ಸಿಡಿಸದ ವಿರಾಟ್

ನವೆಂಬರ್ 2019ರಿಂದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಒಂದೇ ಒಂದು ಶತಕ ಸಿಡಿದಿಲ್ಲ. 71 ಅಂತರಾಷ್ಟ್ರೀಯ ಶತಕಗಳ ಒಡೆಯನಾದ ವಿರಾಟ್, ಆನಂತರ ಸಂಪೂರ್ಣ ಫಾರ್ಮ್ ವೈಫಲ್ಯಗೊಂಡು ಮೂರು ಫಾರ್ಮೆಟ್‌ನಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಒಂದು ಉತ್ತಮ ಇನ್ನಿಂಗ್ಸ್ ಕೂಡ ಹೊರಬಂದಿಲ್ಲ.

ವಿರಾಟ್ ಕೊಹ್ಲಿಗೆ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಆತ ದೀರ್ಘಕಾಲದಿಂದ ಫಾರ್ಮ್ ವೈಫಲ್ಯ ಅನುಭವಿಸಿದ್ದು, ಅದ್ರಿಂದ ಹೊರಬರಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಆತ ಎರಡು ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದು ಅನುಕೂಲವಾದೀತು ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಫಾರ್ಮ್ ಕಳೆದುಕೊಂಡಿಲ್ಲ ಎಂದ ರಶೀದ್ ಖಾನ್

ಕೊಹ್ಲಿ ಫಾರ್ಮ್ ಕಳೆದುಕೊಂಡಿಲ್ಲ ಎಂದ ರಶೀದ್ ಖಾನ್

ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಮತ್ತು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಗಸ್ಟ್ 24ರಂದು ಭೇಟಿಯಾದರು. ಉಭಯ ಆಟಗಾರರು ಕುಶಲೋಪರಿ ವಿಚಾರಿಸಿದ ಬಳಿಕ ಕೆಲವೊಂದು ವಿಚಾರಗಳನ್ನ ಹಂಚಿಕೊಂಡರು.

ವಿರಾಟ್ ಕೊಹ್ಲಿ ಫಾರ್ಮ್‌ ಕುರಿತಾಗಿ ಇತ್ತೀಚಿಗೆ ರಶೀದ್ ಖಾನ್ ಮಾತನಾಡಿದ್ದು, ಆತ ಫಾರ್ಮ್‌ನಲ್ಲಿಲ್ಲ ಎನ್ನುವುದು ಸುಳ್ಳು, ಆತ ಫಾರ್ಮ್‌ನಲ್ಲಿದ್ದಾನೆ, ಆದ್ರೆ ಅಭಿಮಾನಿಗಳು ಸೆಂಚುರಿ ನಿರೀಕ್ಷಿಸುತ್ತಿದ್ದಾರೆ ಎಂದಿದ್ದಾರೆ.

ಕೊಹ್ಲಿ ಪ್ರತಿ ಪಂದ್ಯದಲ್ಲೂ ಸೆಂಚುರಿ ಸಿಡಿಸಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದ್ರೆ ಕೊಹ್ಲಿಯಿಂದ ಸದ್ಯ ಅದು ಸಾಧ್ಯವಾಗುತ್ತಿಲ್ಲ. ಆತ ತುಂಬಾ ಕಠಿಣ ಪ್ರಯತ್ನ ನಡೆಸುತ್ತಿದ್ದು, ಟೆಸ್ಟ್‌ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಔಟಾಗಿರುವುದನ್ನ ಕಾಣಬಹುದು.

"ಅವರು ಆಡುವ ಶಾಟ್‌ಗಳು, ಅವರು ಫಾರ್ಮ್‌ನಿಂದ ಹೊರಗುಳಿದಿದ್ದಾರೆ ಎಂದು ನೀವು ಭಾವಿಸುವುದಿಲ್ಲ" ಎಂದು ರಶೀದ್ ಯೂಟ್ಯೂಬ್‌ನಲ್ಲಿ ಸವೇರಾ ಪಾಷಾ ಅವರೊಂದಿಗಿನ ಸಂದರ್ಶನದಲ್ಲಿ ಹೇಳಿದರು. "ನನ್ನ ಪ್ರಕಾರ, ಅವರು ಫಾರ್ಮ್‌ನಿಂದ ಹೊರಗಿಲ್ಲ. ಸಮಸ್ಯೆ ಏನೆಂದರೆ, ಅವರು ಪ್ರತಿ ಪಂದ್ಯದಲ್ಲೂ ಶತಕ ಬಾರಿಸುತ್ತಾರೆ ಎಂದು ಜನರು ನಿರೀಕ್ಷಿಸುವುದರಿಂದ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ'' ಎಂದಿದ್ದಾರೆ.

ಏಷ್ಯಾ ಕಪ್ 2022: ಭಾರತ ವರ್ಸಸ್ ಪಾಕಿಸ್ತಾನ ತಂಡದ ಸಂಭಾವ್ಯ ಪ್ಲೇಯಿಂಗ್ 11

ಕೊಹ್ಲಿ ಕುರಿತಾಗಿ ಬೇರೆ ಬ್ಯಾಟರ್‌ಗಳನ್ನ ಕೇಳಿದ್ರೆ ಫಾರ್ಮ್‌ನಲ್ಲಿದ್ದಾರೆ ಎನ್ನುತ್ತಾರೆ!

ಕೊಹ್ಲಿ ಕುರಿತಾಗಿ ಬೇರೆ ಬ್ಯಾಟರ್‌ಗಳನ್ನ ಕೇಳಿದ್ರೆ ಫಾರ್ಮ್‌ನಲ್ಲಿದ್ದಾರೆ ಎನ್ನುತ್ತಾರೆ!

ಕೊಹ್ಲಿ ಫಾರ್ಮ್‌ನಲ್ಲಿಲ್ಲ ಎಂದು ಅಭಿಮಾನಿಗಳು ಹೇಳಬಹುದು!, ಆದ್ರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕುರಿತಾಗಿ ಯಾವುದೇ ಬ್ಯಾಟರ್ ಅನ್ನು ಕೇಳಿದ್ರೂ ಸಹ ಆತನ ಫಾರ್ಮ್‌ನಲ್ಲಿಲ್ಲ ಎಂದು ಹೇಳುವುದಿಲ್ಲ. ಆತ ಕಠಿಣ ಸಮಯವನ್ನ ಎದುರಿಸುತ್ತಿದ್ದಾರೆ ಮತ್ತು 50, 60ರನ್‌ಗಳಿಗೆ ಔಟ್ ಆಗುತ್ತಿದ್ದಾರೆ. ಆತ ಶತಕ ಸಿಡಿಸುವ ಮೂಲಕ ತನ್ನದೇ ಆದ ಸ್ಟ್ಯಾಂಡರ್ಡ್ ಗೆರೆಯನ್ನ ಎಳೆದಿದ್ದಾರೆ'' ಎಂದು ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದಾರೆ.

Asia Cup 2022: ಈ ಬಾರಿ ಆಡಲಿರುವ 5 ತಂಡಗಳಲ್ಲಿ ಭಾರತಕ್ಕಿಂತ ಬಲಿಷ್ಠ ತಂಡ ಯಾವುದು?

ಕೊಹ್ಲಿ ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ ಎಂದ ರಶೀದ್

ಕೊಹ್ಲಿ ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ ಎಂದ ರಶೀದ್

ವಿರಾಟ್ ಕೊಹ್ಲಿ ಐಪಿಎಲ್ 2022ರಲ್ಲಿ ರನ್‌ಗಳಿಸುತ್ತಿಲ್ಲ, ಫಾರ್ಮ್ ವೈಫಲ್ಯ ಎದುರಿಸುತ್ತಿದ್ದಾರೆ ಎಂಬೆಲ್ಲಾ ಟೀಕೆಗಳನ್ನ ಎದುರಿಸಿದರು. ಆದ್ರೆ ವಿರಾಟ್ ಕೊಹ್ಲಿ ಈ ಎಲ್ಲಾ ಟೀಕೆಗಳಿಗೆ ಉತ್ತರಿಸಲು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಆತನ ಪ್ರಯತ್ನಗಳನ್ನ ನೋಡಿದ್ರೆ ನಮಗೆ ಸ್ಫೂರ್ತಿ ತುಂಬುತ್ತದೆ'' ಎಂದು ರಶೀದ್ ಖಾನ್ ತಿಳಿಸಿದ್ದಾರೆ.

ರಶೀದ್ ಖಾನ್ ಅಷ್ಟೇ ಅಲ್ಲದೆ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ವಿರಾಟ್ ಕೊಹ್ಲಿಯನ್ನ ಬೆಂಬಲಿಸಿದ್ದಾರೆ. ಪ್ರತಿಯೊಬ್ಬರು ಆತ ಫಾರ್ಮ್‌ನಲ್ಲಿಲ್ಲ ಎಂದು ಹೇಳುವುದನ್ನ ಮೊದಲು ನಿಲ್ಲಿಸಬೇಕು. ಇದರಿಂದ ಕೊಹ್ಲಿ ಮೇಲೆ ಸಾಕಷ್ಟು ಒತ್ತಡ ಸೃಷ್ಟಿಯಾಗುತ್ತಿದೆ ಎಂದು ಅಜರುದ್ದೀನ್ ಅಭಿಪ್ರಾಯ ಪಟ್ಟಿದ್ದಾರೆ.

Story first published: Friday, August 26, 2022, 15:21 [IST]
Other articles published on Aug 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X