Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA 1st Test: ದಕ್ಷಿಣ ಆಫ್ರಿಕಾ 197ರನ್‌ಗಳಿಗೆ ಆಲೌಟ್, ಭಾರತಕ್ಕೆ 146ರನ್‌ಗಳ ಮುನ್ನಡೆ

Team india

ಸೆಂಚುರಿಯನ್ ಸೂಪರ್ ಸ್ಪೋರ್ಟ್‌ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟ ಸಂಪೂರ್ಣ ಮಳೆಗೆ ಆಹುತಿಯಾದ್ರೂ ಸಹ ಮೂರನೇ ದಿನದಾಟದಲ್ಲಿ 18 ವಿಕೆಟ್ ಉರುಳುವ ಮೂಲಕ ಪಂದ್ಯ ಸಾಕಷ್ಟು ಕುತೂಹಲ ಘಟ್ಟದತ್ತ ಸಾಗುತ್ತಿದೆ.

ಭಾರತ ನೀಡಿದ 327ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೊದಲ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ನಾಯಕ ಡೀನ್‌ ಎಲ್ಗರ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಡೀನ್ ಎಲ್ಗರ್ ಕೇವಲ 1 ರನ್‌ಗೆ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು.

ಇದಾದ ಬಳಿಕ ಉತ್ತಮ ಫಾರ್ಮ್‌ನಲ್ಲಿ ಏಡನ್ ಮಕ್ರಾಮ್ ಮತ್ತು ಕೀಗನ್ ಪೀಟರ್ಸನ್‌ಗೆ ಮೊಹಮ್ಮದ್ ಶಮಿ ಶಾಕ್ ನೀಡಿದ್ರು. ಏಡನ್ ಮಕ್ರಾಮ್ 13ರನ್‌ಗೆ ಶಮಿ ಬೌಲಿಂಗ್ ಅರಿಯದೆ ಬೌಲ್ಡ್ ಆದ್ರೆ, ಇದಕ್ಕೂ ಮೊದಲು ಕೀಗನ್ ಪೀಟರ್ಸನ್ ಕೂಡ 15ರನ್‌ಗೆ ವಿಕೆಟ್ ಒಪ್ಪಿಸಿದ್ರು.

ಐದು ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ

ಐದು ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ

ಟೀಂ ಇಂಡಿಯಾ ಪರ ಜಸ್ಪ್ರಿತ್ ಬುಮ್ರಾ ಮೊದಲ ವಿಕೆಟ್ ಪಡೆದು ಗಾಯಾಳುವಾಗಿ ಮೈದಾನದಿಂದ ಹೊರನಡೆದ ಬಳಿಕ, ಮೊಹಮ್ಮದ್ ಶಮಿ ಟೀಂ ಇಂಡಿಯಾ ಬೌಲಿಂಗ್ ಮುಂದಾಳತ್ವ ವಹಿಸಿಕೊಂಡು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಬೆನ್ನಲುಬು ಮುರಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಏಡನ್ ಮಕ್ರಾಮ್ ಮತ್ತು ಕೀಗನ್ ಪೀಟರ್ಸನ್‌, ಟೆಂಬ ಬವುಮಾ, ವಿಯಾನ್ ಮಲ್ಡರ್, ಕಗಿಸೊ ರಬಾಡ ವಿಕೆಟ್ ಪಡೆಯುವ ಮೂಲಕ ಐದು ವಿಕೆಟ್ ಪಡೆದು ಮಿಂಚಿದ್ರು.

ಅಜಿಂಕ್ಯ ರಹಾನೆ ಔಟಾದ ರೀತಿಗೆ ಬೇಸರ ವ್ಯಕ್ತಪಡಿಸಿದ ಸಂಜಯ್ ಬಂಗಾರ್

ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಸಾಧನೆ

ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಸಾಧನೆ

ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಕಬಳಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕಪಿಲ್ ದೇವ್ , ಜಾವಗಲ್ ಶ್ರೀನಾಥ್ ಬಳಿಕ ಅತಿ ಕಡಿಮೆ ಪಂದ್ಯದಲ್ಲಿ 200 ವಿಕೆಟ್ ಪಡೆದ ಸಾಧನೆ ಇವರದ್ದಾಗಿದ್ದು, 55ನೇ ಪಂದ್ಯದಲ್ಲಿ 200 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಅತಿ ಕಡಿಮೆ ಎಸೆತದಲ್ಲಿ 200 ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

"ಟೀಮ್ ಇಂಡಿಯಾದಿಂದ ಇಂಗ್ಲೆಂಡ್ ತಂಡಕ್ಕೆ ಗೌರವ": ಕುಸಿದ ಬ್ಯಾಟಿಂಗ್ ವಿಭಾಗಕ್ಕೆ ನೆಟ್ಟಿಗರಿಂದ ತರಾಟೆ

ದಕ್ಷಿಣ ಆಫ್ರಿಕಾ 197 ರನ್‌ಗೆ ಆಲೌಟ್, 130 ರನ್‌ಗಳ ಹಿನ್ನಡೆ

ದಕ್ಷಿಣ ಆಫ್ರಿಕಾ 197 ರನ್‌ಗೆ ಆಲೌಟ್, 130 ರನ್‌ಗಳ ಹಿನ್ನಡೆ

ಮೊಹಮ್ಮದ್ ಶಮಿ , ಶಾರ್ದೂಲ್ ಠಾಕೂರ್ ದಾಳಿಗೆ ನೆಲಕಚ್ಚಿದ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದಲ್ಲಿ ಕೇವಲ 197ರನ್‌ಗಳಿಗೆ ಆಲೌಟ್ ಆಗುವ ಮೂಲಕ 130ರನ್‌ಗಳ ಹಿನ್ನಡೆ ಅನುಭವಿಸಿದೆ. ಭಾರತ ನೀಡಿದ 327ರನ್‌ಗೆ ಉತ್ತರವಾಗಿ ಬ್ಯಾಟ್‌ ಬೀಸಿದ ಆಫ್ರಿಕಾ ಪರ ಟೆಂಬ ಬವುಮಾ 52 ರನ್, ಮೊದಲ ಎಸೆತದಲ್ಲೇ ಜೀವದಾನ ಪಡೆದಿದ್ದ ಕ್ವಿಂಟನ್ ಡಿಕಾಕ್ 34ರನ್‌ಗಳಿಸಿದ್ದೇ ಹೆಚ್ಚು. ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡ ಹರಿಣಗಳು 197ರನ್‌ಗೆ ಮುಗ್ಗರಿಸುವ ಮೂಲಕ 130ರನ್‌ಗಳ ಹಿನ್ನಡೆ ಕಂಡಿದೆ.

Team Indiaದಲ್ಲಿ ಗುರು-ಶಿಷ್ಯರ ಮೋಡಿ ನೋಡಿ | Oneindia Kannada
ಮೊದಲ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ

ಮೊದಲ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ

ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಭಾರತದ ಜೋಡಿ ಮುಗ್ಗರಿಸಿದೆ. ಓಪನರ್ ಮಯಾಂಕ್ ಅಗರ್ವಾಲ್ 4 ರನ್‌ಗಳಿಸಿದ್ದಾಗ ಮಾರ್ಕೊ ಜಾನ್ಸೆನ್ ಬೌಲಿಂಗ್ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಔಟಾಗಿ ಪೆವಿಲಿಯನ್ ಸೇರಿಕೊಂಡ್ರು. ಮೂರನೇ ದಿನದಾಟದಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 16 ರನ್ ಕಲೆಹಾಕಿ 146ರನ್‌ಗಳ ಮುನ್ನಡೆ ಸಾಧಿಸಿದೆ. ಕೆ.ಎಲ್ ರಾಹುಲ್ ಅಜೇಯ 5ರನ್, ಶಾರ್ದೂಲ್ ಠಾಕೂರ್ ಅಜೇಯ 4ರನ್ ಕಲೆಹಾಕಿದ್ದಾರೆ.

Story first published: Tuesday, December 28, 2021, 22:26 [IST]
Other articles published on Dec 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+