Ind vs SA: ಕೆಎಲ್ ರಾಹುಲ್ 25 ರನ್ ಗಳಿಸಿ ಔಟಾದರೆ, ಕರ್ನಾಟಕದ ಈ ಆಟಗಾರನನ್ನು ನೆನಪಿಸುತ್ತಾರೆ: RP ಸಿಂಗ್

ಕೆಎಲ್ ರಾಹುಲ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಆಟದಲ್ಲಿ ಸಾಕಷ್ಟು ಹಿಡಿತವನ್ನು ಹೊಂದಿದ್ದಾರೆ ಮತ್ತು ಯಾವಾಗ ರನ್ ಆಕ್ಸಿಲರೇಟರ್ ಮೇಲೆ ಹೆಜ್ಜೆ ಹಾಕಬೇಕೆಂದು ತಿಳಿದಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಶ್ಲಾಘಿಸಿದ್ದಾರೆ.
ಆದರೆ ಚುರುಕಿನ ದರದಲ್ಲಿ ಸ್ಕೋರ್ ಮಾಡಲು ಸಾಧ್ಯವಾಗದ ಕಾರಣ ಕೆಎಲ್ ರಾಹುಲ್ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಆದರೆ ಅವರು ಕಳೆದ ಐದು ಸೀಸನ್‌ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅಧಿಕ ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.
2007ರ ಟಿ20 ವಿಶ್ವಕಪ್ ವಿಜೇತ ಭಾರತದ ತಂಡದ ಭಾಗವಾಗಿದ್ದ ಆರ್‌ಪಿ ಸಿಂಗ್, ಮೈದಾನದಲ್ಲಿ ಸೆಟ್ ಆಗಿ ಉತ್ತಮ ಬ್ಯಾಟಿಂಗ್ ಮಾಡುತ್ತಿರುವಾಗಲೇ ವಿಕೆಟ್ ಒಪ್ಪಿಸುತ್ತಿರುವ ಕರ್ನಾಟಕದ ಇನ್ನೊಬ್ಬ ಆಟಗಾರ ಮನೀಷ್ ಪಾಂಡೆ ಅವರನ್ನು ಟೀಕಿಸಿದರು. ಆದರೆ ಕೆಎಲ್ ರಾಹುಲ್ ತಾಂತ್ರಿಕವಾಗಿಯೂ ಸದೃಢರಾಗಿದ್ದಾರೆ ಎಂದು ಆರ್‌ಪಿ ಸಿಂಗ್ ಹೊಗಳಿದ್ದಾರೆ.

5 ಪಂದ್ಯಗಳಿಂದ 51.33 ಸರಾಸರಿಯಲ್ಲಿ 616 ರನ್
"ಕೆಎಲ್ ರಾಹುಲ್ ತಾಂತ್ರಿಕವಾಗಿ ತುಂಬಾ ಸದೃಢರಾಗಿದ್ದಾರೆ. ನಿರ್ದಿಷ್ಟ ಬೌಲರ್‌ಗಳನ್ನು ಟಾರ್ಗೆಟ್ ಮಾಡುವುದರಿಂದ ಅವರು ಆಟದ ಮಹತ್ವವನ್ನು ಅರಿತಿದ್ದಾರೆ. ಕೆಎಲ್ ರಾಹುಲ್ ಬಾಲ್ ಟು ಬಾಲ್ 25 ರನ್ ಗಳಿಸಿ ಔಟಾದರೆ, ಮನೀಶ್ ಪಾಂಡೆ ರೀತಿ ಆಡಿದರು ಎಂದು ನಾವು ಹೇಳುತ್ತೇವೆ," ಎಂದು ಆರ್‌ಪಿ ಸಿಂಗ್ ಅಭಿಪ್ರಾಯಪಟ್ಟರು.
ಆದರೆ ರಾಹುಲ್ ಎಲ್ಲಾ ಬೌಲ್‌ಗಳನ್ನು ಟಿಕ್ ಮಾಡುತ್ತಾರೆ, ಏಕೆಂದರೆ ಅವರು ತಮ್ಮ ವಿಕೆಟ್ ಅನ್ನು ರಕ್ಷಿಸುತ್ತಾರೆ ಮತ್ತು ಯಾವಾಗ ರನ್ ಗತಿಯನ್ನು ಹೆಚ್ಚಿಸಬೇಕೆಂದು ತಿಳಿದಿದ್ದಾರೆ ಎಂದು ಆರ್‌ಪಿ ಸಿಂಗ್ ಕ್ರಿಕ್‌ಬಜ್‌ನಲ್ಲಿ ಉಲ್ಲೇಖಿಸಿದ್ದಾರೆ.
ಐಪಿಎಲ್ 2022ರಲ್ಲಿ ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ನಾಯಕನಾಗಿ 15 ಪಂದ್ಯಗಳಿಂದ 51.33 ಸರಾಸರಿಯಲ್ಲಿ ಎರಡು ಶತಕಗಳು ಮತ್ತು ನಾಲ್ಕು ಅರ್ಧ ಶತಕಗಳೊಂದಿಗೆ 616 ರನ್ ಗಳಿಸಿದ್ದಾರೆ. ಅವರು ಮೂರು ಬಾರಿ ಸೊನ್ನೆ ಸುತ್ತಿದರೂ, ಅವರು ಕೆಲವು ಗಣನೀಯ ಶಾಟ್‌ಗಳ ಮೂಲಕ ಅವುಗಳನ್ನು ಸರಿದೂಗಿಸಿದರು.

ಕೆಎಲ್ ರಾಹುಲ್ ದೊಡ್ಡ ಸ್ಕೋರ್ ಗಳಿಸುವ ಆಟಗಾರ
ಭಾರತದ ಮತ್ತೋರ್ವ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪಾರ್ಥೀವ್ ಪಟೇಲ್, ಕೆಎಲ್ ರಾಹುಲ್ ಉತ್ತಮ ಆರಂಭವನ್ನು ಪಡೆಯದಿದ್ದರೂ ತಮ್ಮ ಬೆಲ್ಟ್ ಅಡಿಯಲ್ಲಿ ದೊಡ್ಡ ಸ್ಕೋರ್ ಗಳಿಸುವ ವ್ಯಕ್ತಿ ಎಂದು ಹೇಳಿದ್ದಾರೆ.
"ಕೆಎಲ್ ರಾಹುಲ್ ಅವರು ನಿಧಾನಗತಿಯ ಆರಂಭದ ಹೊರತಾಗಿಯೂ, 20 ಓವರ್‌ಗಳಲ್ಲಿ ಶತಕ ಗಳಿಸುವ ಏಕೈಕ ಆಟಗಾರರಾಗಿದ್ದಾರೆ. ನೀವು 60 ಎಸೆತಗಳಲ್ಲಿ 100 ರನ್ ಗಳಿಸಲು ಶಕ್ತರಾಗಿದ್ದರೆ, ನೀವು ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಮತ್ತು ನಿಮ್ಮ ಇನ್ನಿಂಗ್ಸ್ ಅನ್ನು ಹೇಗೆ ವೇಗಗೊಳಿಸಬೇಕು ಎಂದು ತಿಳಿದಿದ್ದೀರಿ ಎಂದರ್ಥ," ಎಂದು ಪಾರ್ಥೀವ್ ಪಟೇಲ್ ತಿಳಿಸಿದರು.
ಜೂನ್ 9ರಿಂದ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕೆಲ್ ರಾಹುಲ್ ಈಗ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳಾಪಟ್ಟಿ
ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಜೂನ್ 9ರಿಂದ ಆರಂಭವಾಗಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು, ಐದು ಭಿನ್ನ ತಾಣಗಳಲ್ಲಿ ಈ ಸರಣಿ ಆಯೋಜನೆಯಾಗಿದೆ. ಮೊದಲ ಪಂದ್ಯ ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದರೆ, ಎರಡನೇ ಪಂದ್ಯ ಜೂನ್ 12ರಂದು ಕಟಕ್‌ನಲ್ಲಿ ನಡೆಯಲಿದೆ.
ಮೂರನೇ ಟಿ20 ಪಂದ್ಯ ಜೂನ್ 14ರಂದು ವಿಶಾಖಪಟ್ಟಣಂನಲ್ಲಿ ಆಯೋಜನೆಯಾಗಲಿದೆ. ನಾಲ್ಕನೇ ಪಂದ್ಯ ಜೂನ್ 17ರಂದು ರಾಜ್‌ಕೋಟ್‌ನಲ್ಲಿ ಆಯೋಜನೆಯಾದರೆ, ಜೂನ್ 19ರಂದು ನಡೆಯುವ ಅಂತಿಮ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಟಿ20 ಸರಣಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು
ಭಾರತ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ ಟಿ20 ಬಳಗ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಟಬ್ರೈಜ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications